ಈ 3 ರಾಶಿಯವರು ಹುಟ್ಟಿನಿಂದಲೇ ಅದೃಷ್ಟವಂತರು.. ಹಣದ ಕೊರತೆ ತಪ್ಪಿಯೂ ಬಾರದು, ಐಷಾರಾಮಿ ಜೀವನ ನಡೆಸುವರು!

Most fortunate zodiac signs : ಜ್ಯೋತಿಷ್ಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ಬಹಳ ಮುಖ್ಯವಾಗಿದೆ. ಇವುಗಳ ಆಧಾರದ ಮೇಲೆ ಜನರ ಜಾತಕದಲ್ಲಿ ರಾಜಯೋಗ ಸೃಷ್ಟಿಯಾಗುತ್ತದೆ. 
 

Lucky Zodiac Signs : ಜಾತಕದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದಿಂದ ವ್ಯಕ್ತಿಯ ಭವಿಷ್ಯವು ಹೇಗೆ ಇರುತ್ತದೆ ಎಂದು ಜ್ಯೋತಿಷಿಗಳು ನಮಗೆ ತಿಳಿಸುತ್ತಾರೆ. ಜನ್ಮ ನಕ್ಷತ್ರದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವನ್ನು ಆಧರಿಸಿ ರಾಜಯೋಗವು ರೂಪುಗೊಳ್ಳುತ್ತದೆ. ಕುಂಡಲಿಯಲ್ಲಿ ಈ ಯೋಗ ಇರುವವರು ಐಷಾರಾಮಿ ಜೀವನವನ್ನು ಅನುಭವಿಸುತ್ತಾರೆ.ಜಾತಕದಲ್ಲಿರುವ ರಾಜಯೋಗದಿಂದ ಯಾವ ರಾಶಿಯವರಿಗೆ ಏನು ಲಾಭವಾಗಲಿದೆ ಎಂದು ತಿಳಿಯಬಹುದು. 
 

1 /5

ಈ ಮೂರು ರಾಶಿಯವರು ಹುಟ್ಟಿನಿಂದಲೇ ಅದೃಷ್ವಂತರು. ಇವರು ಜೀವನದಲ್ಲಿ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಎಲ್ಲವನ್ನೂ ಸುಲಭವಾಗಿ ಪಡೆಯುವರು. ಬಾಳಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ಇವರಿಗೆ ಜನ್ಮತಃ ರಾಜಯೋಗವಿರುತ್ತದೆ.   

2 /5

ತುಲಾ ರಾಶಿಯವರು ಜನ್ಮಸ್ಯ ಅದೃಷ್ಟವಂತರು. ಕಡಿಮೆ ಶ್ರಮದಿಂದ ಹೆಚ್ಚು ಲಾಭ ಪಡೆಯುವರು. ಅವರಿಗೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತದೆ. ಅವರು ಯಾವುದೇ ಕ್ಷೇತ್ರವನ್ನು ಪ್ರವೇಶಿಸಿದರೂ ಅದರಲ್ಲಿ ಯಶಸ್ವಿಯಾಗುತ್ತಾರೆ. ತುಲಾ ರಾಶಿಯವರಿಗೆ ಹಣದ ಕೊರತೆಯಿರುವುದಿಲ್ಲ.   

3 /5

ಸಿಂಹ ರಾಶಿಯನ್ನು ಸೂರ್ಯನು ಆಳುತ್ತಾನೆ. ಅವರು ಹುಟ್ಟಿನಿಂದಲೇ ಭಾಗ್ಯವಂತರು. ಜಾತಕದಲ್ಲಿ ರಾಜಯೋಗ ಇರುತ್ತದೆ. ಅವರ ವ್ಯಕ್ತಿತ್ವ ಮತ್ತು ನಾಯಕತ್ವದ ಗುಣ ಎಲ್ಲರ ಮನಸೆಳೆಯುತ್ತದೆ. ಮಾತುಗಳಿಂದ ಜನರನ್ನು ಆಕರ್ಷಿಸುವರು. ಜೀವನದಲ್ಲಿ ದುಡ್ಡಿನ ಸಮಸ್ಯೆ ಕಾಡುವುದಿಲ್ಲ. ಐಷಾರಾಮಿ ಬದುಕು ನಡೆಸುವರು.  

4 /5

ಕುಂಭ ರಾಶಿಯವರು ಸದಾ ಶಾಂತ ಚಿತ್ತ ಮತ್ತು ಸಂತೋಷದಿಂದ ಇರುತ್ತಾರೆ. ಅವರು ಅಧ್ಯಯನದಲ್ಲಿ ಉತ್ತಮ ಪ್ರತಿಭೆಯನ್ನು ತೋರಿಸುತ್ತಾರೆ. ಈ ಜನರು ಸಮಾಜದಲ್ಲಿ ಖ್ಯಾತಿ ಗಳಿಸುತ್ತಾರೆ. ಸಮಾಜದಲ್ಲಿ ಹೆಚ್ಚು ಗೌರವ ಪಡೆಯುತ್ತಾರೆ. ಯಾವುದಕ್ಕೂ ಕೊರತೆಯಿರುವುದಿಲ್ಲ. ರಾಜಯೋಗ ಅವರನ್ನು ಎಲ್ಲಾ ಕಷ್ಟಗಳಿಂದ ದೂರವಿಡುತ್ತದೆ.   

5 /5

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಸಂಗತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಧೃಢೀಕರಿಸುವುದಿಲ್ಲ.