ಚರ್ಮದ ಆರೈಕೆಗೆ ಅಲೋವೆರಾ ತುಂಬಾ ಒಳ್ಳೆಯದು. ಹಾಗಾಗಿಯೇ, ಜನರು ಮಾರುಕಟ್ಟೆಯಿಂದ ಆಲೋವೆರಾ ಜೆಲ್ ಕೊಳ್ಳುತ್ತಾರೆ.
ಅಲೋವೆರಾ ಜೆಲ್: ಚರ್ಮದ ಆರೈಕೆಗೆ ಅಲೋವೆರಾ ತುಂಬಾ ಒಳ್ಳೆಯದು. ಹಾಗಾಗಿಯೇ, ಜನರು ಮಾರುಕಟ್ಟೆಯಿಂದ ಆಲೋವೆರಾ ಜೆಲ್ ಕೊಳ್ಳುತ್ತಾರೆ. ಆದರೆ, ನೀವು ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಲೋವೆರಾ ಸಸ್ಯವು ರಸಭರಿತ ಸಸ್ಯವಾಗಿದ್ದು, ಅದರ ಎಲೆಗಳಲ್ಲಿ ನೀರನ್ನು ಜೆಲ್ ರೂಪದಲ್ಲಿ ಸಂಗ್ರಹಿಸುತ್ತದೆ. ಸನ್ ಬರ್ನಿಂಗ್, ಕಡಿತ, ಗಾಯ, ಇತರ ಚರ್ಮದ ಸಮಸ್ಯೆಗಳಿಗೆ ಅಲೋವೆರಾ ಜೆಲ್ ತುಂಬಾ ಪ್ರಯೋಜನಕಾರಿ ಆಗಿದೆ.
ಆದಾಗ್ಯೂ, ಅನೇಕ ಅಂಗಡಿಯಲ್ಲಿ ಖರೀದಿಸಿದ ಅಲೋವೆರಾ ಉತ್ಪನ್ನಗಳು ಡೈಗಳಂತಹ ಸಂಭಾವ್ಯ ಹಾನಿಕಾರಕ ಸೇರ್ಪಡೆಗಳನ್ನು ಹೊಂದಿರುತ್ತವೆ. ತಾಜಾ ಅಲೋವೆರಾ ಎಲೆಗಳನ್ನು ಬಳಸಿಕೊಂಡು ಅಲೋವೆರಾ ಜೆಲ್ ಅನ್ನು ನೀವೇ ಸುಲಭವಾಗಿ ತಯಾರಿಸಬಹುದು.
ಅಲೋವೆರಾ ಸಸ್ಯಗಳಿಂದ ಕೆಲವು ಶಾಖೆಗಳನ್ನು ಒಡೆದು ಮತ್ತು ಮೇಲಿನ ಹಸಿರು ಚರ್ಮವನ್ನು ತೆಗೆದುಹಾಕಿ ಮತ್ತು ಚಮಚದೊಂದಿಗೆ ಜೆಲ್ ಅನ್ನು ಸ್ಕೂಪ್ ಮಾಡಿ. ನೀರು ಹಾಕದೆ ಸ್ವಚ್ಛವಾದ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನೀವು ಅಂಗಡಿಗಳಲ್ಲಿ ಜೆಲಾಟಿನ್ ಪುಡಿಯನ್ನು ಖರೀದಿಸಬಹುದು. ಇದು ಜೆಲ್ಲಿ ತಯಾರಿಸಲು ಬಳಸುವ ಪುಡಿಯಾಗಿದೆ. ಸಣ್ಣ ಕಪ್ನಲ್ಲಿ 1 ಚಮಚ ಜಿಲಾಟಿನ್ ಪುಡಿಯನ್ನು ಸೇರಿಸಿ, 1/2 ಕಪ್ ನೀರು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನೇರವಾಗಿ ಒಲೆಯಲ್ಲಿ ಹಾಕುವ ಬದಲು ಬಾಣಲೆಯಲ್ಲಿ ನೀರು ಹಾಕಿ ಅದರ ಮೇಲೆ ಜಿಲೆಟಿನ್ ಪೌಡರ್ ಮಿಶ್ರಣವನ್ನು ಹಾಕಿ 3 ರಿಂದ 5 ನಿಮಿಷಗಳ ಕಾಲ ಜೆಲ್ ಆಗುವವರೆಗೆ ಬೇಯಿಸಿ.
ಜೆಲಾಟಿನ್ ಮಿಶ್ರಣ ತಣ್ಣಗಾದ ನಂತರ ರುಬ್ಬಿದ ಅಲೋವೆರಾವನ್ನು ಮಿಕ್ಸರ್ ನಲ್ಲಿ ಬೆರೆಸಿದರೆ ಅಲೋವೆರಾ ಜೆಲ್ ರೆಡಿ.
ಅಂಗಡಿಗಳಲ್ಲಿ ದೊರೆಯುವ ಅಲೋವೆರಾ ಜೆಲ್ ಖಂಡಿತವಾಗಿಯೂ ಕೆಲವು ರಾಸಾಯನಿಕಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಜೆಲ್ ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಆದರೆ ಮನೆಯಲ್ಲಿ ತಯಾರಿಸಿದ ಈ ಅಲೋವೆರಾ ಜೆಲ್ ಅನ್ನು ನಾವು 10 ದಿನಗಳವರೆಗೆ ಮಾತ್ರ ಬಳಸಬಹುದು ಎಂಬುದು ಗಮನಿಸಬೇಕಾದ ಸಂಗತಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.