UPSC ಪರೀಕ್ಷೆಗೆ ತಯಾರಾಗಲು ತನ್ನ ಮಗನಿಂದಲೇ ದೂರವಿದ್ದರು ಈ IAS ಅಧಿಕಾರಿ..!

ನಾಗರಿಕ ಸೇವಾ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಗಳಿಸುವ ಮೂಲಕ ಅನುಕುಮಾರಿ ಅವರು ಐಎಎಸ್ ಅಧಿಕಾರಿಯಾಗಿದ್ದಾರೆ. 

ಭಾರತೀಯ ನಾಗರಿಕ ಸೇವಾ (UPSC) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವುದು ಅನೇಕರ ಕನಸಾಗಿದೆ. ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಗಳಿಸಿದ ಅನುಕುಮಾರಿಯವರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಅನುಕುಮಾರಿ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಕೇವಲ 1 ಅಂಕದಿಂದ ಪರೀಕ್ಷೆಯಲ್ಲಿ ವಿಫಲವಾಗಿದ್ದರು. ಆದರೆ ಅವರು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ತಮ್ಮ 2ನೇ ಪ್ರಯತ್ನದಲ್ಲಿ ಅವರು 2 ರ‍್ಯಾಂಕ್ ಪಡೆದುಕೊಂಡು ಸಾಧನೆ ಮಾಡಿದರು.  2017 ರಲ್ಲಿ ಐಪಿಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ಅನುಕುಮಾರಿ ನನಸು ಮಾಡಿಕೊಂಡಿದ್ದರು.

2 /5

ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿರುವಾಗ ಅನುಕುಮಾರಿ ಸುಮಾರು 2 ವರ್ಷಗಳ ಕಾಲ ತನ್ನ ಪುತ್ರನಿಂದಲೇ ದೂರವಿದ್ದರು. ಈ ವೇಳೆ ಅವರು ತಮ್ಮ ಪುತ್ರನನ್ನು ತುಂಬಾ ಮಿಸ್ ಮಾಡಿಕೊಂಡಿದ್ದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕವೇ ಮಗನನ್ನು ಭೇಟಿಯಾಗಲು ಅವರು ಬಯಸಿದ್ದರು. 

3 /5

ಮದುವೆಯ ನಂತರ ಅನುಕುಮಾರಿ ಗುರ್‌ಗಾಂವ್‌ಗೆ ವರ್ಗಾವಣೆಯಾದರು.   ಮದುವೆಯ ಕೆಲವು ದಿನಗಳ ನಂತರ ಅವರು ತಮ್ಮ ಕೆಲಸವನ್ನು ತೊರೆದು UPSCಗೆ ತಯಾರಿ ಆರಂಭಿಸಿದರು. ಯುಪಿಎಸ್‌ಸಿ ಪರೀಕ್ಷೆ ಆಲೋಚನೆಯನ್ನು ಕೈಬಿಡುವಂತೆ ಅನೇಕ ಜನರು ಸಲಹೆ ನೀಡಿದರು. ಆದರೆ ಐಎಎಸ್ ಅಧಿಕಾರಿಯಾಗಬೇಕೆಂಬುದು ಅನುಕುಮಾರಿ ಕನಸಾಗಿದ್ದರಿಂದ ಅವರು ಯಾರ ಮಾತನ್ನೂ ಕೇಳಲಿಲ್ಲ.

4 /5

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನು ಕುಮಾರಿ 2 ವರ್ಷಗಳ ಹಿಂದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಕೆಲಸಕ್ಕೆ ಗುಡ್ ಬೈ ಹೇಳಿದ್ದರು. ‘ನನ್ನ ಕೆಲಸ ತುಂಬಾ ಚೆನ್ನಾಗಿತ್ತು, ಆದರೆ ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ಇದು ಯಾಂತ್ರಿಕ ಜೀವನ ಅಂತಾ ನನಗೆ ಅನ್ನಿಸಿತ್ತು. ಒಂದು ಹಂತದಲ್ಲಿ ನಾನು ಈ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಿಲ್ಲವೆಂದು ನನಗೆ ಅನುಭವವಾಗಿತ್ತು. ಹೀಗಾಗಿ ನಾನು ಕೆಲಸ ತೊರೆಯಬೇಕಾಯಿತು’ ಎಂದು ಸಂದರ್ಶನವೊಂದರಲ್ಲಿ ಅನುಕುಮಾರಿ ಹೇಳಿಕೊಂಡಿದ್ದರು.    

5 /5

ಅನು ಕುಮಾರಿ ಹರಿಯಾಣದ ಸೋನಿಪತ್‌ ಮೂಲದವರು. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ (ಆನರ್ಸ್) ಪದವಿ ಪಡೆದಿದ್ದಾರೆ ಮತ್ತು ನಾಗಪುರದ ಐಎಂಟಿಯಿಂದ ಎಂಬಿಎ (ಹಣಕಾಸು ಮತ್ತು ಮಾರ್ಕೆಟಿಂಗ್) ಮಾಡಿದ್ದಾರೆ.