ಮೆಹಕ್ ದಿಂಗ್ರಾ

  • Jul 06, 2024, 14:37 PM IST
1 /6

ಟಿ20 ವಿಶ್ವಕಪ್ ಗೆದ್ದ ಬಳಿಕ ಗುರುವಾರ ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಟೀಂ ಇಂಡಿಯಾ ನೇರವಾಗಿ ದೆಹಲಿಗೆ ಬಂದು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿ, ಅಲ್ಲಿಂದ ಮುಂಬೈಗೆ ಆಗಮಿಸಿದರು.

2 /6

ಅಂದಹಾಗೆ ವಿರಾಟ್ ಈ ವಿಜಯಯಾತ್ರೆ ಮುಗಿಸಿದ ಬಳಿಕ ಮತ್ತೆ ದೆಹಲಿಗೆ ಭೇಟಿ ನೀಡಿದ್ದಾರೆ. ದೆಹಲಿ ತಲುಪುತ್ತಿದ್ದಂತೆ ಕುಟುಂಬವನ್ನು ಭೇಟಿಯಾದ ವಿರಾಟ್, ಸಹೋದರ ವಿಕಾಸ್ ಕೊಹ್ಲಿ ಮತ್ತು ಅವರ ಮಕ್ಕಳನ್ನು ಭೇಟಿ ಮಾಡಿದ್ದಾರೆ.

3 /6

ಅವರ ಜೊತೆ ಕಳೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೊಂದೆಡೆ ವಿಕಾಸ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ 'ಸೂಪರ್ ಪ್ರೌಡ್ ಬ್ರದರ್' ಎಂದು ಬರೆದುಕೊಂಡಿದ್ದಾರೆ. ಈ ಚಿತ್ರಗಳಲ್ಲಿ, ವಿರಾಟ್ ತನ್ನ ಸಹೋದರ ವಿಕಾಸ್, ಅವರ ಮಗ, ಸೋದರಳಿಯ ಮತ್ತು ಸೊಸೆಯೊಂದಿಗೆ ಕಾಣಿಸಿಕೊಂಡಿದ್ದಾರೆ.

4 /6

ಪ್ರಸ್ತುತ ಮುಂಬೈನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿರುವ ವಿರಾಟ್ ಕೊಹ್ಲಿ ದೆಹಲಿಯ ನಿವಾಸಿ. ಅವರ ಇಡೀ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ.

5 /6

ಇನ್ನು ಫೋಟೋ ವೈರಲ್ ಆಗುತ್ತಿದ್ದಂತೆ, ವಿರಾಟ್ ಸೊಸೆ ಸದ್ದು ಮಾಡುತ್ತಿದ್ದಾಳೆ. ಈಕೆ ಹೆಸರು ಮೆಹಕ್ ದಿಂಗ್ರಾ. ವಿರಾಟ್ ಸಹೋದರಿ ಭಾವನಾ ದಿಂಗ್ರಾ ಮತ್ತು ಸಂಜಯ್ ದಿಂಗ್ರಾ ಮಗಳು.

6 /6

ಮೆಹಕ್, ವಿಶ್ವಕಪ್ ಪದಕವನ್ನು ಕೊರಳಿಗೆ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.