Mithun Chakrabortyಯ ಸೊಸೆ ಕೂಡಾ ಕಾಸ್ಟಿಂಗ್‌ ಕೌಚ್‌ ಗೆ ಗುರಿಯಾಗಿದ್ದರಂತೆ, Madalsa Sharma ತೆರೆದಿಟ್ಟ ನೋವು

ಕಾಸ್ಟಿಂಗ್ ಕೌಚ್ ಚಿತ್ರಜಗತ್ತಿನ ಅಸಹ್ಯಕರ ಸಂಗತಿ. ಸಾಮಾನ್ಯವಾಗಿ ಹುಡುಗಿಯರು ತಮ್ಮ ವೃತ್ತಿಜೀವನ ರೂಪಿಸುವ ವೇಳೆಯಲ್ಲಿ ಕಾಸ್ಟಿಂಗ್ ಕೌಚ್‌ನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ನವದೆಹಲಿ : 'ಅನುಪಮಾ' ಟಿವಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರವನ್ನು ನಿರ್ವಹಿಸುತ್ತಿರುವ ಕಾವ್ಯ ಅಂದರೆ ಮದಲ್ಸಾ ಶರ್ಮಾ ನಿಜ ಜೀವನದಲ್ಲಿ ಕಾಸ್ಟಿಂಗ್ ಕೌಚ್‌ಗೆ ಗುರಿಯಾಗಿದ್ದರಂತೆ. ಅವರೇ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

  

1 /5

ಕಾಸ್ಟಿಂಗ್ ಕೌಚ್ ಚಿತ್ರಜಗತ್ತಿನ ಅಸಹ್ಯಕರ ಸಂಗತಿ. ಸಾಮಾನ್ಯವಾಗಿ ಹುಡುಗಿಯರು ತಮ್ಮ ವೃತ್ತಿಜೀವನ ರೂಪಿಸುವ ವೇಳೆಯಲ್ಲಿ ಕಾಸ್ಟಿಂಗ್ ಕೌಚ್‌ನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗ ಅನುಪಮಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ನಟಿಯೊಬ್ಬರ ಹೆಸರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. (ಚಿತ್ರಕೃಪೆ: ಇನ್‌ಸ್ಟಾಗ್ರಾಮ್)  

2 /5

ನಟಿ ಮದಲ್ಸಾ ಶರ್ಮಾ, ಅನುಪಮಾ ಧಾರಾವಾಹಿಯಲ್ಲಿ ಕಾವ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಅವರು ಬಾಲಿವುಡ್ ತಾರೆ ಮಿಥುನ್ ಚಕ್ರವರ್ತಿ ಸೊಸೆ. ಇವರು ಕೂಡಾ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದೆ. (ಚಿತ್ರಕೃಪೆ: ಮದಲ್ಸಾ ಶರ್ಮಾ ಇನ್‌ಸ್ಟಾಗ್ರಾಮ್)

3 /5

ಮದಲ್ಸಾ ಶರ್ಮಾ ಕಾಸ್ಟಿಂಗ್ ಕೌಚ್ ಬಗ್ಗೆ ಈ ದೊಡ್ಡ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವೆಬ್ ಪೋರ್ಟಲ್ ಜೊತೆ ಮಾತನಾಡುತ್ತಾ, ಮದಲ್ಸಾ ಶರ್ಮಾ, ಇಂದಿನ ಯುಗದಲ್ಲಿ ಹುಡುಗ ಅಥವಾ ಹುಡುಗಿ ಇಬ್ಬರಿಗೂ ಅಪಾಯಕಾರಿ ಎಂದು ಹೇಳಿದ್ದಾರೆ. (ಚಿತ್ರಕೃಪೆ:  ಇನ್‌ಸ್ಟಾಗ್ರಾಮ್)

4 /5

'ಒಳ್ಳೆಯದು ಮತ್ತು ಕೆಟ್ಟದ್ದು ಒಟ್ಟಿಗೆ ಹೋಗುತ್ತದೆ. ನಿಮ್ಮ ಆಯ್ಕೆ ಯಾವುದು ಎನ್ನುವುದು ನಿಮಗೆ ಬಿಟ್ಟದ್ದು. ಜನರು ನಿಮ್ಮನ್ನು ಪ್ರಚೋದಿಸಬಹುದು ಆದರೆ ಅವರು ನಿಮ್ಮ ನಿರ್ಧಾರಗಳನ್ನು  ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಕೂಡ ಇಂತಹ ಘಟನೆಗಳನ್ನು ಎದುರಿಸಿದ್ದೇನೆ. ಕೆಲವೊಮ್ಮೆ ಜನರು ಮೀಟಿಂಗ್‌ ಗಳಲ್ಲಿ ಅನ್‌ ಕಂಫರ್ಟೇಬಲ್‌ ಫೀಲ್‌  ಮಾಡಿಸುತ್ತಿದ್ದರು. ಅಂತಹವರನ್ನು ನಿರ್ಲಕ್ಷಿಸಿ ನಾನು ಅಲ್ಲಿಂದ ಹೊರಟು ಬಿಡುತ್ತೇನೆ  ಎಂದಿದ್ದಾರೆ. (ಚಿತ್ರಕೃಪೆ:  ಇನ್‌ಸ್ಟಾಗ್ರಾಮ್)

5 /5

'ನಾನು ಹೋಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, . ನಾನು ಒಬ್ಬ ನಟಿಯಾಗಿ ಇಲ್ಲಿಗೆ ಬಂದಿದ್ದೇನೆ. ನಾನು ನನ್ನ ಕೆಲಸ ಮಾಡಿಕೊಂಡು ಹೊರಡುತ್ತೇನೆ.  ನಿಮ್ಮ ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬುದು ನಿಮ್ಮ ಕೈಯಲ್ಲಿದೆ. ನಿಮ್ಮ ಜೀವನವನ್ನು ಯಾರೂ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. (ಚಿತ್ರಕೃಪೆ:  ಇನ್‌ಸ್ಟಾಗ್ರಾಮ್)