Skin Care Tips: ಈ ವಸ್ತುಗಳ ಜೊತೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ: 5 ನಿಮಿಷದಲ್ಲಿ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ

Skin Care Tips: ನಿಂಬೆ ನಿಮ್ಮ ತ್ವಚೆಗೆ ಎಲ್ಲ ರೀತಿಯಲ್ಲೂ ಒಳಿತನ್ನು ಮಾಡುತ್ತದೆ. ಅದರಲ್ಲೂ ಕೆಲವೊಂದು ವಸ್ತುಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ನಿಮ್ಮ ತ್ವಚೆಯು ಫಳಪಳ ಎಂದು ಹೊಳೆಯುತ್ತದೆ

1 /5

ಅಲೋವೆರಾ ಜೆಲ್ ಜೊತೆಗೆ ನಿಂಬೆರಸವನ್ನು ಮಿಶ್ರಣ ಮಾಡಿ ಹಚ್ಚಿದರೆ ನಿಮ್ಮ ತ್ವಚೆಯು ಹೊಳೆಯುತ್ತದೆ.

2 /5

ನಿಂಬೆಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಹಚ್ಚುವುದರಿಂದ ನಿಮ್ಮ ಚರ್ಮವು ಹೊಳೆಯುತ್ತದೆ. ಒಂದು ಚಮಚ ಜೇನುತುಪ್ಪದಲ್ಲಿ ಒಂದಿಷ್ಟು ನಿಂಬೆ ಹನಿಗಳನ್ನು ಹಾಕಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.

3 /5

ಗ್ರೀನ್ ಟೀ ಜೊತೆ ನಿಂಬೆಯೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 5 ನಿಮಿಷಗಳ ನಂತರ ತೊಳೆಯಿರಿ. ತ್ವಚೆ ಮೃದುವಾಗುತ್ತದೆ

4 /5

ನಿಂಬೆಯೊಂದಿಗೆ ಸಕ್ಕರೆ ಬೆರೆಸಿ ಮುಖಕ್ಕೆ ಹಚ್ಚಬಹುದು. ಒಂದು ಚಮಚ ಸಕ್ಕರೆ ತೆಗೆದುಕೊಳ್ಳಿ. ಅದಕ್ಕೆ ನಿಂಬೆರಸ ಸೇರಿಸಿ ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ ಹೀಗೆ ಮಾಡುವುದರಿಂದ ಡೆಡ್ ಸ್ಕಿನ್ ಹೋಗುತ್ತದೆ.

5 /5

ಅಕ್ಕಿ ಹಿಟ್ಟನ್ನು ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿದರೆ ತ್ವಚೆಯು ಮೃದು ಮತ್ತು ಹೊಳೆಯುತ್ತದೆ. ಅಕ್ಕಿ ಹಿಟ್ಟಿಗೆ ನಿಂಬೆ ರಸ ಮತ್ತು ಅರ್ಧ ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)