Mohammad Azharuddin Sangeeta Bijlani Love Story: ಕ್ರಿಕೆಟ್ ಲೋಕಕ್ಕೂ ಬಾಲಿವುಡ್ ಕ್ಷೇತ್ರಕ್ಕೂ ಅವಿನಾಭಾವ ನಂಟೊಂದಿದೆ. ಇದು ಎಲ್ಲರಿಗೂ ತಿಳಿದ ಸಂಗತಿಯೇ. ಈ ಎರಡು ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಪ್ರೀತಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೊಹಮ್ಮದ್ ಅಜರುದ್ದೀನ್ ಕ್ರಿಕೆಟ್ ಲೋಕದಲ್ಲಿ ಮಾಡಿರುವ ಸಾಧನೆ ಒಂದೆರಡಲ್ಲ. ಆದರೆ ವೈವಾಹಿಕ ಜೀವನದ ವಿಚಾರದಲ್ಲಿ ಇವರ ಬದುಕು ಸೂತ್ರವಿಲ್ಲದ ಗಾಳಿಪಟವಾಗಿದ್ದು ಮಾತ್ರ ಸತ್ಯ.
1990 ರ ದಶಕದಲ್ಲಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ನಡುವಿನ ಪ್ರಣಯ ಭಾರೀ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ, ಇವರ ಈ ಸಂಬಂಧವೇ ಅಜರ್ ಮೊದಲ ಪತ್ನಿಗೆ ಡಿವೋರ್ಸ್ ನೀಡಲು ಕಾರಣವಾಯಿತು ಎಂದು ಹೇಳಲಾಗುತ್ತದೆ. ಆದರೆ ಇವರ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.
ಮೊಹಮ್ಮದ್ ಅಜರುದ್ದೀನ್ ಅವರನ್ನು ಮೊದಲು ಭೇಟಿಯಾದಾಗ ಸಂಗೀತಾ ಉದಯೋನ್ಮುಖ ನಟಿ ಮತ್ತು ರೂಪದರ್ಶಿಯಾಗಿದ್ದರು. 1985ರಲ್ಲಿ ಜಾಹೀರಾತು ಚಿತ್ರೀಕರಣದ ವೇಳೆ ಸಂಗೀತಾ ಬಿಜಲಾನಿ ಅವರನ್ನು ಭೇಟಿಯಾಗಿದ್ದೆ ಎಂದು ಅಜರ್ ಒಂದೊಮ್ಮೆ ಹೇಳಿಕೊಂಡಿದ್ದಾರೆ.
“ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ಯಾರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ, ಆದರೆ ನಾನು ನಿಮಗೆ ಹೇಳುತ್ತಿದ್ದೇನೆ” ಎಂದಿದ್ದರು ಅಜರ್.
ಅಜರುದ್ದೀನ್ ಸಂಗೀತಾ ಅವರನ್ನು ಪ್ರೀತಿಸಿದಾಗ ಅವರಿಗೆ ಈಗಾಗಲೇ ಮದುವೆಯಾಗಿತ್ತು. ಮಾತ್ರವಲ್ಲದೆ ಇಬ್ಬರು ಗಂಡು ಮಕ್ಕಳಿದ್ದರು. 1987 ರಲ್ಲಿ ನೌರೀನ್ ಅವರನ್ನು ಅಜರುದ್ದೀನ್ ಮೊದಲು ವಿವಾಹವಾಗಿದ್ದರು. ಇಬ್ಬರ ದಾಂಪತ್ಯ ಜೀವನ ತುಂಬಾ ಸುಂದರವಾಗಿ ಸಾಗುತ್ತಿತ್ತು. ಆದರೆ ಮದುವೆಯಾದ ಸುಮಾರು 9 ವರ್ಷಗಳ ನಂತರ ಸಂಗೀತಾ ಬಿಜಲಾನಿ ಎಂಟ್ರಿ, ಇವರ ಬದುಕಲ್ಲಿ ಬಿರುಗಾಳಿ ಎಬ್ಬಿಸಿತ್ತು.
ಒಂದೆಡೆ ಪತ್ನಿಯೊಂದಿಗಿನ ಸಂಬಂಧ ಕ್ಷೀಣಿಸುತ್ತಿದ್ದರೆ, ಇನ್ನೊಂದೆಡೆ ಸಂಗೀತಾ ಬಿಜಲಾನಿ ಅವರೊಂದಿಗಿನ ಪ್ರೀತಿ ಬೆಳೆಯುತ್ತಿತ್ತು. ಅಷ್ಟೇ ಅಲ್ಲದೆ, ಸಂಗೀತಾ ಮತ್ತು ಅಜರ್, ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅಜರುದ್ದೀನ್ 1996 ರಲ್ಲಿ ನೌರೀನ್’ಗೆ ವಿಚ್ಛೇದನ ನೀಡಿ ಸಂಗೀತಾ ಅವರನ್ನು ವಿವಾಹವಾದರು.
ವರದಿಗಳ ಪ್ರಕಾರ, ಸಂಗೀತಾ ಪ್ರೀತಿಗಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಸಂಗೀತಾ ಎಂದೇ ಪರಿಚಿತರಾಗಿದ್ದ ನಟಿ ಮದುವೆಯ ನಂತರ ಆಯೇಷಾ ಬೇಗಂ ಎಂದು ಗುರುತಿಸಿಕೊಂಡಿದ್ದರು. ಆದರೆ ಈ ಸಂಬಂಧ 14 ವರ್ಷಗಳ ನಂತರ ಮುರಿದುಬಿತ್ತು. 2010ರಲ್ಲಿ ಇಬ್ಬರೂ ಬೇರೆಯಾದರು. ವರದಿಗಳ ಪ್ರಕಾರ ಸಂಗೀತಾ ಮತ್ತು ಅಜರುದ್ದೀನ್ ಸಂಬಂಧ ಮುರಿದು ಬೀಳಲು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕಾರಣ ಎನ್ನಲಾಗಿದೆ.
ಸಂಗೀತಾ ನಂತರ ಮೊಹಮ್ಮದ್ ಅಜರುದ್ದೀನ್ ಹಾಗೂ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಜೊತೆಗಿನ ಪ್ರೇಮ ಪ್ರಕರಣ ಭಾರೀ ಸುದ್ದಿಯಾಗಿತ್ತು. ಅನೇಕ ಮಾಧ್ಯಮಗಳ ವರದಿಗಳ ಪ್ರಕಾರ, ಸಂಗೀತಾ ಬಿಜಲಾನಿಗೆ ಅಜರ್ ಮತ್ತು ಜ್ವಾಲಾ ಅವರ ಸಂಬಂಧದ ಬಗ್ಗೆ ತಿಳಿದಿತ್ತು. ಇದೇ ಕಾರಣದಿಂದ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಆದರೆ, ಈ ಸಂಬಂಧದ ಬಗ್ಗೆ ಅಜರ್ ಆಗಲಿ ಅಥವಾ ಜ್ವಾಲಾ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ.