ನಟನಾಗಿ ಸಿನಿರಂಗಕ್ಕೆ ಕ್ಯಾಪ್ಟನ್‌ ಕೂಲ್‌ ಎಂಟ್ರಿ..! ಎಂಎಸ್‌ಡಿ ಫಸ್ಟ್‌ ಸಿನಿಮಾ ಇದೆ ನೋಡಿ..?

MS Dhoni in LGM movie  : ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ಸಿನಿರಂಗಕ್ಕೆ ಕಾಲಿಟ್ಟಿದ್ದು, ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಇದೀಗ ಹೊಸ ಅಪ್‌ಡೇಟ್‌ ಒಂದು ಧೋನಿ ಅಭಿಮಾನಿಗಳಿಗಾಗಿ ಕಾಯ್ದಿದ್ದು, ಮೊದಲ ಬಾರಿಗೆ ಎಂಎಸ್‌ಡಿಯನ್ನು ಚಿತ್ರಮಂದಿರದ ಬಿಗ್‌ ಸ್ಕ್ರೀನ್‌ ಮೇಲೆ ನೋಡುವ ಅವಕಾಶ ಲಭಿಸಲಿದೆ.. ಯಾವ ಸಿನಿಮಾ..? ಯಾವಾಗ ರಿಲೀಸ್‌ ಅಂತ ತಿಳಿಯೋಕೆ ಮುಂದೆ ಓದಿ..
 

1 /6

ಲೆಜೆಂಡರಿ ಕ್ರಿಕೆಟಿಗ ಎಂ.ಎಸ್. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಎಂಟರ್‌ಟೈನ್‌ಮೆಂಟ್‌ನೊಂದಿಗೆ LGM ಸಿನಿಮಾವನ್ನು ನಿರ್ಮಿಸಿದ್ದಾರೆ, ಇದು ಅವರ ಮೊದಲ ಚಿತ್ರವಾಗಿದೆ.  

2 /6

ಇದೀಗ ಈ ಚಿತ್ರವೂ ಧೋನಿ ನಟನಾ ವೃತ್ತಿಯ ಚೊಚ್ಚಲ ಚಿತ್ರವಾಗಲಿದೆ ಎಂಬ ವರದಿಗಳಿವೆ. ಈಗಾಗಲೇ ಕ್ರಿಕೆಟಿಗ ಧೋನಿ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ.     

3 /6

ಇತ್ತೀಚಿನ ವರದಿಗಳ ಪ್ರಕಾರ, LGM ನಲ್ಲಿ ಧೋನಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ಸುದ್ದಿ ನಿಜವಾದರೆ ಎಲ್‌ಜಿಎಂ ಧೋನಿಯ ಮೊದಲ ಚಿತ್ರವಾಗಲಿದೆ.    

4 /6

ಎಲ್‌ಜಿಎಂ ಚಿತ್ರದಲ್ಲಿ ಹರೀಶ್ ಕಲ್ಯಾಣ್, ಇವಾನಾ, ನಾಡಿಯಾ, ಯೋಗಿ ಬಾಬು, ಆರ್‌ಜೆ ವಿಜಯ್, ಶ್ರೀನಾಥ್, ವಿಟಿವಿ ಗಣೇಶ್, ವಿನೋತಿನಿ, ದೀಪಾ ಶಂಕರ್, ವಿಕೆಲ್ಸ್ ವಿಕ್ರಮ್, ವಿಕೆಲ್ಸ್ ಹರಿ ಮತ್ತು ಇತರರು ನಟಿಸಿದ್ದಾರೆ.    

5 /6

ಈ ಚಿತ್ರತಕ್ಕೆ ರಮೇಶ್ ತಮಿಳುಮಣಿ ಅವರ ಸಂಗೀತ, ವಿಶ್ವಜಿತ್ ಒಡುಕ್ಕಂ ಅವರ ಛಾಯಾಗ್ರಹಣ, ಪ್ರದೀಪ್ ಇ ರಾಘವ್ ಅವರ ಛಾಯಾಗ್ರಹಣ. ಧೋನಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನ ಮೊದಲ ಸಿನಿಮಾ.  

6 /6

ಒಟ್ಟಾರೆಯಾಗಿ ಮೊದಲ ಬಾರಿಗೆ ಎಂಎಸ್‌ಡಿಯನ್ನು ಚಿತ್ರಮಂದಿರದ ಬಿಗ್‌ ಸ್ಕ್ರೀನ್‌ ಮೇಲೆ ನೋಡುವ ಅವಕಾಶ ಅವರ ಫ್ಯಾನ್ಸ್‌ಗೆ ಲಭಿಸಲಿದ್ದು, ಸಂತೋಷದ ವಿಷಯ.