ʼಥ್ರಿಲ್ಲರ್-ಸಸ್ಪೆನ್ಸ್ʼ ಸಿನಿಮಾ ಅಂದ್ರೆ ಇಷ್ಟಾನಾ..? ಫ್ರೀಯಾಗಿ ಈ 5 ಸಿನಿಮಾಗಳನ್ನ OTTಯಲ್ಲಿ ನೋಡಿ

Must watch thriller movies : ಸಸ್ಪೆನ್ಸ್ ಫುಲ್ ಸಿನಿಮಾಗಳು ಪ್ರೇಕ್ಷಕರನ್ನು ಕ್ಲೈಮ್ಯಾಕ್ಸ್ ವರೆಗೂ ಹಿಡಿದಿಟ್ಟುಕೊಳ್ಳುತ್ತವೆ. ನಿಗೂಢತೆಗಳಿಂದ ಕೂಡಿದ ಸಿನಿಮಾಗಳನ್ನು ನೋಡುವುದರಲ್ಲಿರುವ ಮಜಾನೇ ಬೇರೆ. ಇಂದು ನಾವು ನಿಮ್ಗೆ ಅಂತಹ ಇಂಟ್ರಸ್ಟಿಂಗ್‌ ನೋಡಲೇಬೇಕಾದ 5 ಆಯ್ದ ಚಲನಚಿತ್ರಗಳ ಬಗ್ಗೆ ತಿಳಿಸುತ್ತೇವೆ.. ಅಲ್ಲದೆ, ಇವುಗಳನ್ನು ನೀವು OTT ಉಚಿತವಾಗಿ ನೋಡಬಹುದು.

1 /5

Kannur Squad : ಈ ಚಿತ್ರವು 28 ಸೆಪ್ಟೆಂಬರ್ 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಉತ್ತಮ ಪ್ರದರ್ಶನ ಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಈ ಚಿತ್ರ  OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಇದು ಕ್ರೈಮ್ ಥ್ರಿಲ್ಲರ್ ಸಸ್ಪೆನ್ಸ್ ಚಿತ್ರವಾಗಿದ್ದು, ರಾಬಿ ವರ್ಗೀಸ್ ರಾಜ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಮ್ಮುಟ್ಟಿ ಜೊತೆಗೆ ರೋನಿ ಡೇವಿಡ್ ರಾಜ್, ಅಜೀಸ್ ನೆಡುಮಂಗಡ, ಶಬರೀಶ್ ವರ್ಮಾ, ಕಿಶೋರ್ ಮತ್ತು ವಿಜಯರಾಘವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

2 /5

Andhadhun Movie : ಆಯುಷ್ಮಾನ್ ಖುರಾನಾ ಅವರ 'ಅಂಧಾಧುನ್' ಒಂದು ಸೂಪರ್‌ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ, ನಟ ಕುರುಡನ ಪಾತ್ರವನ್ನು ನಿರ್ವಹಿಸಿದ್ದಾರೆ. ಕಂಡ ಕೊಲೆಯನ್ನು ಬಹಿರಂಗಪಡಿಸುವ ಪ್ರಕ್ರಿಯೆಯಲ್ಲಿ ಸಿಲುಕಿ ಅನುಭವಿಸುವ ನೋವಿನ ಕಥೆ ಈ ಸಿನಿಮಾ. ತಬು ಮತ್ತು ರಾಧಿಕಾ ಆಪ್ಟೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಆಯುಷ್ಮಾನ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

3 /5

Drusham 2 : ಅಜಯ್ ದೇವಗನ್ ಅಭಿನಯದ 'ದೃಶ್ಯಂ 2' ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಈ ಚಿತ್ರದ ಮೊದಲ ಭಾಗವು ಉತ್ತಮ ಪ್ರದರ್ಶನ ಕಂಡಿತ್ತು. ಎರಡನೇ ಭಾಗವೂ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆಯಿತು. ಕಾಯ್ದೆ ಕಾನೂನು ಗೊತ್ತಿರದ, ಅಶಿಕ್ಷಿತ ವ್ಯಕ್ತಿ ತನ್ನ ಕುಟುಂಬವನ್ನು ಪೊಲೀಸರಿಂದ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ.

4 /5

Raat Hai Akeli : 2020 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಸಖತ್‌ ಸದ್ದು ಮಾಡಿತ್ತು. ನವಾಜುದ್ದೀನ್ ಸಿದ್ದಿಕಿ ನಟನೆಯ 'ರಾತ್ ಅಕೇಲಿ ಹೈ'ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಇಂಟ್ರಸ್ಟಿಂಗ್‌ ಆಗಿದ್ದು, ಕುತೂಹಲಕಾರಿಯಾಗಿದೆ. ರಾಧಿಕಾ ಆಪ್ಟೆ, ಶ್ವೇತಾ ತ್ರಿಪಾಠಿ ಮತ್ತು ತಿಗ್ಮಾನ್ಶು ಧುಲಿಯಾ ಮುಂತಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

5 /5

Badla Movie : ಅಮಿತಾಬ್ ಬಚ್ಚನ್ ಮತ್ತು ತಾಪ್ಸಿ ಪನ್ನು ಅಭಿನಯದ 'ಬದ್ಲಾ' ಚಿತ್ರ ಸೂಪರ್‌ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನು ಶಾರುಖ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ಎಷ್ಟು ಅದ್ಭುತವಾಗಿದೆ.