ಸೌತ್ ಇಂಡಸ್ಟ್ರಿಯ ಖ್ಯಾತ ನಟ ನಾಗ ಚೈತನ್ಯ ಎರಡನೇ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್‌ಆಗಿದೆ. ಇಂದು ಅವರ ಎಂಗೇಜ್‌ಮೆಂಟ್‌ನಡೆಯಲಿದೆ ಎನ್ನಲಾಗುತ್ತಿದೆ.
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಡೇಟಿಂಗ್ ವದಂತಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಈ ವದಂತಿ ನಡುವೆ ಅವರಿಬ್ಬರ ನಿಶ್ಚಿತಾರ್ಥದ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಆಗಸ್ಟ್ 08 ರ ಗುರುವಾರದಂದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ನಾಗ ಚೈತನ್ಯ ತಂದೆ ನಾಗಾರ್ಜುನ ಮದುವೆಯ ಕುರಿತು ಹೇಳಿಕೆ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಬಹುದು. ನಾಗ ಚೈತನ್ಯ ತಂದೆ ನಾಗಾರ್ಜುನ ಅವರೇ ಮೊದಲು ಈ ಫೋಟೋಗಳನ್ನು ಶೇರ್ ಮಾಡಬಹುದು ಎಂಬ ವದಂತಿ ಹಬ್ಬಿದೆ.
ಈ ಬಗ್ಗೆ ನಾಗ ಚೈತನ್ಯ, ನಾಗಾರ್ಜನ ಅಥವಾ ಶೋಭಿತಾ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸದ್ಯಕ್ಕೆ ಬರುತ್ತಿರುವ ವದಂತಿಗಳು ನಿಜವೋ ಅಥವಾ ಕೇವಲ ವದಂತಿಯೋ ಎಂಬುದನ್ನು ಕಾದು ನೋಡಬೇಕಿದೆ.