ಜವಾನ್‌ ನಿರ್ದೇಶಕ ಅಟ್ಲೀ ವಿರುದ್ಧ ನಯನತಾರಾ ಕಿಡಿ..! ಶಾರುಖ್ ಏನ್ ಹೇಳಿದ್ರು ಗೊತ್ತಾ?

Sharukh Khan: ಜವಾನ್‌ ಸಿನಿಮಾ ನಿರ್ದೇಶಕ ಅಟ್ಲೀ ಅವರವಿರುದ್ಧ ವಿರುದ್ಧ ನಯನತಾರಾ ಕೋಪಗೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಬಾಲಿವುಡ್‌ ಅಂಗಳದಲ್ಲಿ ಜೋರಾಗಿದೆ. ತಮ್ಮ ಪಾತ್ರಕ್ಕಿಂತ ದೀಪಿಕಾ ಪಾತ್ರವನ್ನು ಹೈಲೈಟ್‌ ಮಾಡಿದ್ದಕ್ಕಾಗಿ  ಲೇಡಿ ಸೂಪರ್‌ ಸ್ಟಾರ್‌ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಬಗ್ಗೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಪ್ರತಿಕ್ರಿಯಿಸಿದ್ದಾರೆ.. 
 

1 /5

ಜವಾನ್‌ ಚಿತ್ರದಲ್ಲಿ ನಯನತಾರಾ ಅವರ ಪಾತ್ರ ಸಖತ್‌ ಪವರ್‌ಫುಲ್‌ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ದೀಪಿಕಾ ಸಹ ಈ ಚಿತ್ರದಲ್ಲಿ ನಟಿಸಿರುವುದರಿಂದ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ನಯನತಾರಾ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿತ್ತು..  

2 /5

ಈ ವಿಚಾರವಾಗಿ ನಯನತಾರಾ ಚಿತ್ರದ ನಿರ್ದೇಶಕ ಅಟ್ಲಿ ಮೇಲೆ ಕೋಪಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ನಂತರ ಚಿತ್ರತಂಡ ಒಟ್ಟಾಗಿ ಇರುವುದನ್ನು ನೋಡಿ ಅಂಥದ್ದೇನೂ ವೈಮನಸ್ಯೆವಿಲ್ಲವೆಂದು ಹೇಳಲಾಗಿತ್ತು.  

3 /5

ಆದರೆ ಇದೀಗ ಈ ವಿಚಾರವಾಗಿ ಚಿತ್ರದ ನಾಯಕ ಮತ್ತು ನಿರ್ಮಾಪಕ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದು, ನಯನತಾರಾ ಅವರಿಗೆ ಸ್ಕ್ರೀನ್‌ ಮೇಲೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ‘ನರ್ಮದಾ ಪಾತ್ರಕ್ಕೆ ಸಿಗಬೇಕಾದ ಮನ್ನಣೆ ತೆರೆಯಲ್ಲಿ ಸಿಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ.   

4 /5

ಈ ಜವಾನ್‌ ಚಿತ್ರದ ಕಲೆಕ್ಷನ್‌ ವಿಚಾರವಾಗಿ ಸಾಕಷ್ಟು ವರದಿಗಳು ಹೊರಬೀಳುತ್ತಿದ್ದವು..ಆದರೆ ಅದರಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ತಿಳಿಯುವುದು ಕಷ್ಟವಾಗಿತ್ತು. ಆದ್ದರಿಂದ ಇದೀಗ ಜವಾನ್‌  ಚಿತ್ರದ ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದೆ  

5 /5

ಇನ್ನು ಜವಾನ್‌ ಚಿತ್ರ 15 ದಿನಕ್ಕೆ ವಿಶ್ವದಾದ್ಯಂತ ಬರೋಬ್ಬರಿ 937.61 ಕಲೆಕ್ಷನ್‌ ಮಾಡಿ ಗೆದ್ದು ಬೀಗುತ್ತಿದೆ. ಇದಲ್ಲದೇ ಶೀಘ್ರದಲ್ಲೇ ಸಾವಿರ ಕೋಟಿ ರೂಪಾಯಿಯನ್ನು ಈ ಸಿನಿಮಾ ಬಾಚಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.