Health Care: ಥೈರಾಯ್ಡ್ ನಿಂದ ಕಾಣಿಸಿಕೊಳ್ಳುವ ಈ ಲಕ್ಷಣಗಳ ಬಗ್ಗೆ ಎಂದಿಗೂ ಮಾಡಬೇಡಿ ನಿರ್ಲಕ್ಷ!

Thyroid symptom: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ ಮತ್ತು ಒತ್ತಡವನ್ನು ಅನುಭವಿಸುವ ಜನರು ಥೈರಾಯ್ಡ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಥೈರಾಯ್ಡ್ ಸಮಸ್ಯೆಯಿಂದ ದೂರವಿರಲು ಬಯಸಿದರೆ ನಿಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ನೀವು ಗಮನ ಹರಿಸಬೇಕು. ಆದರೆ ನೀವು ಕೆಲವೊಂದು ವಿಚಾರಗಳ ಬಗ್ಗೆ ನಿರ್ಲಕ್ಷ ಮಾಡದೇ ಇರುವುದು ಉತ್ತಮ.  

1 /5

ಥೈರಾಯ್ಡ್‌ನಲ್ಲಿರುವ ಹಾರ್ಮೋನ್‌ಗಳು ಅನಿಯಂತ್ರಿತವಾಗುತ್ತವೆ. ಇದು ನಮ್ಮ ನಡವಳಿಕೆಯ ಮೇಲೂ ಪರಿಣಾಮ ಬೀರುತ್ತದೆ. ಥೈರಾಯ್ಡ್‌ನಲ್ಲಿ ಮೂಡ್ ಸ್ವಿಂಗ್‌ಗಳು ಸಾಮಾನ್ಯ ಲಕ್ಷಣವಾಗಿದೆ. ಈ ಸಮಯದಲ್ಲಿ ವ್ಯಕ್ತಿಯು ಅನಾವಶ್ಯಕವಾಗಿ ಕಿರಿಕಿರಿಗೊಳ್ಳಬಹುದು. ನಿಮಗೂ ಸಹ ಆಗಾಗ್ಗೆ ಮೂಡ್ ಸ್ವಿಂಗ್ಸ್ ಆಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

2 /5

ಥೈರಾಯ್ಡ್ ಕಾಯಿಲೆಯು ಬಂಜೆತನಕ್ಕೆ ಕಾರಣವಾಗಬಹುದು. ಥೈರಾಯ್ಡ್ ನಿಂದಾಗಿ ಮಹಿಳೆಯರು ಮತ್ತು ಪುರುಷರು ಬಂಜೆತನವನ್ನು ಎದುರಿಸಬೇಕಾಗಬಹುದು.

3 /5

ಕೂದಲು ಉದುರುವುದು ಥೈರಾಯ್ಡ್‌ನ ಲಕ್ಷಣವೂ ಆಗಿರಬಹುದು. ನೀವು ದೀರ್ಘಕಾಲದವರೆಗೆ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಥೈರಾಯ್ಡ್ ಪರೀಕ್ಷೆಯನ್ನು ಮಾಡಿಸಿ.

4 /5

ನಿರಂತರ ದಣಿವು ಥೈರಾಯ್ಡ್‌ನ ಲಕ್ಷಣವೂ ಆಗಿರಬಹುದು. ಥೈರಾಯ್ಡ್‌ನಿಂದಾಗಿ ದೇಹದಲ್ಲಿ ಶಕ್ತಿಯ ಕೊರತೆಯುಂಟಾಗುತ್ತದೆ.  

5 /5

ಥೈರಾಯ್ಡ್‌ ನಿಂದಾಗಿ ಕಾಲು ನೋವಿನ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳಬಹುದು. ಥೈರಾಯ್ಡ್ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ ನೀವು ನೋವು ಅನುಭವಿಸಬಹುದು. ದೀರ್ಘಕಾಲದ ಕಾಲು ನೋವನ್ನು ನಿರ್ಲಕ್ಷಿಸಬೇಡಿ.