ಹೊಸ ವರ್ಷದಂದು ಇವುಗಳಲ್ಲಿ ಯಾವುದಾದರೂ ಒಂದನ್ನು ಮನೆಗೆ ತನ್ನಿ: ನೀವು ವರ್ಷವಿಡೀ ಯಶಸ್ಸು ಪಡೆಯುತ್ತೀರಿ

ನೂತನ ವರ್ಷದ ಸಂಭ್ರಮದಂದು ಯಾವುದಾದರೂ ಒಂದು ವಸ್ತುವನ್ನು ಮನೆಗೆ ಅಂದರೆ ಅದೃಷ್ಟ ನಿಮ್ಮದಾಗುತ್ತದೆ. ಹೀಗೆ ಮಾಡಿದರೆ ವರ್ಷವಿಡೀ ಯಶಸ್ಸು ನಿಮ್ಮದಾಗುತ್ತದೆ.

2022ರ ಹೊಸ ವರ್ಷದಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹೊಸ ವರ್ಷವು ನಮಗೆ ಅದೃಷ್ಟ ತಂದುಕೊಡಲಿ ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಜೀವನದಲ್ಲಿ ಪ್ರಗತಿ, ಆರ್ಥಿಕ ಸ್ಥಿತಿ ಉತ್ತಮವಾಗಲಿ, ಪ್ರತಿ ಕೆಲಸದಲ್ಲೂ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತಾರೆ.  ಹೊಸ ವರ್ಷದಂದು ಹೊಸ ಜೀವನ ನಮ್ಮದಾಗಲಿ ಎನ್ನುವವರು ಅನೇಕ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೂತನ ವರ್ಷದ ಸಂಭ್ರಮದಂದು ಯಾವುದಾದರೂ ಒಂದು ವಸ್ತುವನ್ನು ಮನೆಗೆ ಅಂದರೆ ಅದೃಷ್ಟ ನಿಮ್ಮದಾಗುತ್ತದೆ. ಹೀಗೆ ಮಾಡಿದರೆ ವರ್ಷವಿಡೀ ಯಶಸ್ಸು ನಿಮ್ಮದಾಗುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸನಾತನ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಸ್ವಸ್ತಿಕ್ ಚಿಹ್ನೆಯನ್ನು ಪೂಜೆಯಿಂದ ಹಿಡಿದು ಪ್ರತಿಯೊಂದು ಶುಭ ಕಾರ್ಯದಲ್ಲಿ ಬಳಸಲಾಗುತ್ತದೆ. ಸ್ವಸ್ತಿಕವು ಮೊದಲ ಪೂಜಕ ಮತ್ತು ಹಿತಚಿಂತಕನಾದ ಗಣೇಶನಿಗೆ ಸಂಬಂಧಿಸಿದೆ. ಮನೆಯ ಸರಿಯಾದ ಸ್ಥಳದಲ್ಲಿ ಸ್ವಸ್ತಿಕ್ ಚಿಹ್ನೆಯ ಚಿತ್ರವನ್ನು ಬಿಡಿಸಬೇಕು. ಹೊಸ ವರ್ಷದ ದಿನದಂದು ಮನೆಗೆ ಸ್ವಸ್ತಿಕ್ ಚಿಹ್ನೆಯ ವಸ್ತುಗಳನ್ನು ತಂದು ನಿಯಮಾನುಸಾರ ಪೂಜಿಸುವುದರಿಂದ ಮನೆಯಲ್ಲಿ ವರ್ಷವಿಡೀ ಸುಖ-ಸಮೃದ್ಧಿ ನೆಲೆಸುತ್ತದೆ.

2 /5

ಸನಾತನ ಧರ್ಮದಲ್ಲಿ ತೆಂಗಿನಕಾಯಿಗೆ ಶ್ರೀಫಲದ ಸ್ಥಾನಮಾನ ನೀಡಲಾಗಿದೆ. ಅದರಲ್ಲಿ ತ್ರಿದೇವರು ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ. ಅದಕ್ಕಾಗಿಯೇ ಪ್ರತಿ ಶುಭ ಕಾರ್ಯವನ್ನು ತೆಂಗಿನಕಾಯಿ ಒಡೆಯುವ ಮೂಲಕ ಪ್ರಾರಂಭಿಸಲಾಗುತ್ತದೆ. ಶ್ರೀಫಲವನ್ನು ದೇವತೆಗಳಿಗೂ ಅರ್ಪಿಸಲಾಗುತ್ತದೆ. ಹೊಸ ವರ್ಷದಂದು ಮನೆಯಲ್ಲಿ ತುರಿದ ತೆಂಗಿನಕಾಯಿಯನ್ನು ತರುವುದು ತ್ರಿದೇವರ ಆಶೀರ್ವಾದವನ್ನು ತರುತ್ತದೆ. ಆತನ ಕೃಪೆಯಿಂದ ಇಡೀ ವರ್ಷವೂ ಸುಖಮಯವಾಗಿರುತ್ತದೆ.

3 /5

ಧಾರ್ಮಿಕ ಜ್ಯೋತಿಷ್ಯದಲ್ಲಿ ದಕ್ಷಿಣಾವರ್ತಿ ಶಂಖ ಮತ್ತು ಮೋತಿ ಶಂಖಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೊಸ ವರ್ಷದಂದು ಮೋತಿ ಶಂಖವನ್ನು ತಂದು ಸರಿಯಾಗಿ ಪೂಜಿಸಿ ಮತ್ತು ಅದನ್ನು ಕಮಾನು ಅಥವಾ ಕೆಲಸದ ಸ್ಥಳದಲ್ಲಿ ಇರಿಸಬೇಕು. ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗುತ್ತದೆ. ನಿಮ್ಮ ಸಮಸ್ಯೆಗಳು ಮಾಯವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ

4 /5

ನವಿಲು ಗರಿಗಳನ್ನು ಸಹ ಬಹಳ ಮಂಗಳಕರ ಮತ್ತು ಅದ್ಭುತವೆಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟವನ್ನು ಹೆಚ್ಚಿಸುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ನವಿಲು ಗರಿಗಳನ್ನು ಮನೆಗೆ ತಂದರೆ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳು ದೂರವಾಗುತ್ತವೆ. ಆದರೆ ನೆನಪಿನಲ್ಲಿಡಿ, ನವಿಲು ಗರಿಗಳ ಗೊಂಚಲು ತರಬಾರದು. ಒಂದು ಅಥವಾ ಮೂರು ನವಿಲು ಗರಿಗಳನ್ನು ಮಾತ್ರ ತರಬೇಕು.

5 /5

ಶ್ರೀಗಂಧ, ತುಳಸಿ, ಕಮಲದ ಮಾಲೆ ಇರುವ ಮನೆಯಲ್ಲಿ ಸದಾ ಸುಖ, ಶಾಂತಿ, ಸಮೃದ್ಧಿ ನೆಲೆಸಿರುತ್ತದೆ. ಹೊಸ ವರ್ಷದಂದು ಕಮಲಗಟ್ಟೆ ಮಾಲೆಯನ್ನು ತಂದರೆ ಆದಾಯದ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಈ ಮಾಲೆಯನ್ನು ಪೂಜಿಸಿ ಮತ್ತು ಅದನ್ನು ಪೂಜಾ ಮನೆಯಲ್ಲಿ ಇರಿಸಿ. ಇದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ, ನಿಮ್ಮದಿಯ ಜೀವನವು ನಿಮ್ಮದಾಗುತ್ತದೆ.

You May Like

Sponsored by Taboola