ಮುಂದಿನ ತಿಂಗಳು ಈ ರಾಶಿಯವರಿಗೆ ಪ್ರತಿ ಹಂತದಲ್ಲೂ ಸಿಗುವುದು ಯಶಸ್ಸು! ಸೋಲುವ ಮಾತೇ ಇಲ್ಲ

ಇನ್ನೊಂದೇ ದಿನ ಹೊಸ ವರ್ಷದ ಮೊದಲ ತಿಂಗಳು ಕಳೆದು ಹೋಗಲಿದೆ. ಫೆಬ್ರವರಿ ತಿಂಗಳು ಆರಂಭವಾಗಲಿದೆ. ಈ ತಿಂಗಳು 4 ರಾಶಿಯವರ ಮೇಲೆ ಹಣದ ಮಳೆಯಾಗುವ ಸಾಧ್ಯತೆಗಳಿವೆ. ಫೆಬ್ರವರಿಯಲ್ಲಿ 4  ರಾಶಿಯವರ ಜೀವನ ಅತ್ಯಂತ ಸುಖ ಸಂತೋಷದಿಂದ ಕಳೆಯಲಿದೆ. 

ಬೆಂಗಳೂರು : ಇನ್ನೊಂದೇ ದಿನ ಹೊಸ ವರ್ಷದ ಮೊದಲ ತಿಂಗಳು ಕಳೆದು ಹೋಗಲಿದೆ. ಫೆಬ್ರವರಿ ತಿಂಗಳು ಆರಂಭವಾಗಲಿದೆ. ಈ ತಿಂಗಳು 4 ರಾಶಿಯವರ ಮೇಲೆ ಹಣದ ಮಳೆಯಾಗುವ ಸಾಧ್ಯತೆಗಳಿವೆ. ಫೆಬ್ರವರಿಯಲ್ಲಿ 4  ರಾಶಿಯವರ ಜೀವನ ಅತ್ಯಂತ ಸುಖ ಸಂತೋಷದಿಂದ ಕಳೆಯಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರಿಗೆ ಈ ತಿಂಗಳು ಚೆನ್ನಾಗಿಯೇ ಸಾಗಲಿದೆ. ಇವರ ಪಾಲಿಗೆ ಇಡೀ ತಿಂಗಳು ಉತ್ಸಾಹದಿಂದ ಕಳೆದುಹೋಗಲಿದೆ. ಈ ತಿಂಗಳು ಮಾಡಿದ ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡಲಿವೆ. ಈ ತಿಂಗಳು ಸಾಕಷ್ಟು ಹಣ ಗಳಿಕೆಯ ಮಾರ್ಗಗಳು ತೆರೆದುಕೊಳ್ಳುವುದು. 

2 /4

ಮಿಥುನ ರಾಶಿ : ಈ ರಾಶಿಯ ಜನರು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದಿಂದಾಗಿ, ಈ ತಿಂಗಳು ಉತ್ತಮ ಯಶಸ್ಸನ್ನು ನಿರೀಕ್ಷಿಸಬಹುದು. ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ತಿಂಗಳು ತುಂಬಾ ಉತ್ತಮವಾಗಿರಲಿದೆ. ಈ ತಿಂಗಳು ಸ್ವಂತ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹೂಡಿಕೆ ಮಾಡಿದರೆ ಲಾಭ ಖಂಡಿತಾ.   

3 /4

 ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಈ ತಿಂಗಳು ತುಂಬಾ ಅದ್ಭುತವಾಗಿರಲಿದೆ. ಇದರಲ್ಲಿ, ಈ ರಾಶಿಯವರ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವು ಈ ತಿಂಗಳು ಆರಾಮವಾಗಿ ಸಮಯ ಕಳೆಯುವಂತೆ ಮಾಡುತ್ತದೆ. ಸ್ವಂತ ಇಚ್ಛೆಯಿಂದ ಕೆಲಸ ಮಾಡುವ ಅವರು ಇಡೀ ತಂಡವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ. ಸಂಬಂಧಿಕರು ಪ್ರೋತ್ಸಾಹಿಸುವರು. 

4 /4

ಧನು ರಾಶಿ : ಈ ರಾಶಿಯವರಿಗೆ ಈ ತಿಂಗಳು ತುಂಬಾ ಅದ್ಭುತವಾಗಿರಲಿದೆ. ವೃತ್ತಿಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಬಡ್ತಿ ಮಾತ್ರವಲ್ಲ, ಹೊಸ ಜವಾಬ್ದಾರಿಗಳನ್ನೂ ನೀಡಲಾಗುವುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ನಿಮ್ಮ ಯಶಸ್ಸಿನಲ್ಲಿ ಅಡಚಣೆ ಉಂಟಾಗಬಹುದು. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)