PHOTOS: ನಿಖಿಲ್ ಪುತ್ರನ ನಾಮಕರಣ ಶಾಸ್ತ್ರ..‌ ದೊಡ್ಡ ಗೌಡರ ಮರಿ ಮೊಮ್ಮಗನ ಹೆಸರು ಇದೇ ನೋಡಿ

Nikhil Kumaraswamy: ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ನಡೆಯುತ್ತಿದೆ.

ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ನಡೆಯುತ್ತಿದೆ. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಜರುಗುತ್ತಿದೆ. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ. ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 9 ತಿಂಗಳು ತುಂಬಿರುವ ಹಿನ್ನೆಲೆ ನಿಖಿಲ್‌ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲು ಕುಟುಂಬಸ್ಥರು ನಿರ್ಣಯಿಸಿದ್ದಾರೆ. ನಾಮಕರಣಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶವಿದ್ದು, ವಿವಿಧ ಹೂಗಳಿಂದ ಬೆಳ್ಳಿ ತೊಟ್ಟಿಲನ್ನು ಸಿಂಗರಿಸಲಾಗಿದೆ. 

1 /6

ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಕಾರ್ಯಕ್ರಮ ಇಂದು ನಡೆಯುತ್ತಿದೆ.

2 /6

ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಜರುಗುತ್ತಿದೆ. 

3 /6

10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದೆ.

4 /6

ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

5 /6

9 ತಿಂಗಳು ತುಂಬಿರುವ ಹಿನ್ನೆಲೆ ನಿಖಿಲ್‌ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲು ಕುಟುಂಬಸ್ಥರು ನಿರ್ಣಯಿಸಿದ್ದಾರೆ. 

6 /6

ನಾಮಕರಣಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶವಿದ್ದು, ವಿವಿಧ ಹೂಗಳಿಂದ ಬೆಳ್ಳಿ ತೊಟ್ಟಿಲನ್ನು ಸಿಂಗರಿಸಲಾಗಿದೆ.