Richest Cricketer: ವಿರಾಟ್-ಧೋನಿ ಅಲ್ಲ… ಈ ಆಟಗಾರನೇ ವಿಶ್ವದ ಶ್ರೀಮಂತ ಕ್ರಿಕೆಟಿಗ! ಇವರ ಆಸ್ತಿ ಮೌಲ್ಯ 3100 ಕೋಟಿ

World's Richest Cricketer: ಕ್ರಿಕೆಟ್ ಅನ್ನು ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕ್ರಿಕೆಟ್‌’ನಲ್ಲಿ ಖ್ಯಾತಿಯ ಜೊತೆಗೆ ಸಾಕಷ್ಟು ಹಣವೂ ಮಾಡಬಹುದು. ಸದ್ಯದ ಮಟ್ಟಿಗೆ ಶ್ರೀಮಂತ ಕ್ರಿಕೆಟಿಗ ಯಾರು ಎಂದು ತಿಳಿಯೋಣ. ಆದರೆ ವಿಶೇಷವೆಂದರೆ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರಿಗಿಂತ 15 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ ಆಟಗಾರನ ಹೆಸರಿದೆ.

1 /5

ಸಿಇಒ ವರ್ಲ್ಡ್ ಮ್ಯಾಗಜೀನ್ ಪ್ರಕಾರ, ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಡಮ್ ಗಿಲ್‌ ಕ್ರಿಸ್ಟ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಗಿಲ್‌ ಕ್ರಿಸ್ಟ್ ಅವರ ನಿವ್ವಳ ಮೌಲ್ಯವು ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿಗಿಂತಲೂ ಹೆಚ್ಚು. ಸುಮಾರು 3130 ಕೋಟಿಯ ಒಡೆಯ ಗಿಲ್‌ಕ್ರಿಸ್ಟ್.

2 /5

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ನಿವ್ವಳ ಮೌಲ್ಯ ಸುಮಾರು 1400 ಕೋಟಿ ರೂ.

3 /5

ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದ ಮೂರನೇ ಶ್ರೀಮಂತ ಕ್ರಿಕೆಟಿಗ. ಎಂಎಸ್ ಧೋನಿ ನಿವ್ವಳ ಮೌಲ್ಯ 949 ಕೋಟಿ ರೂ.

4 /5

ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯ 923 ಕೋಟಿ ರೂ. ಕ್ರಿಕೆಟ್ ಹೊರತಾಗಿ, ವಿರಾಟ್ ಕೊಹ್ಲಿ ಜಾಹೀರಾತುಗಳ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ.

5 /5

ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಐದನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ ಅವರ ನಿವ್ವಳ ಮೌಲ್ಯ ಸುಮಾರು 617 ಕೋಟಿ ರೂ.