Virat Kohli: ವಿರಾಟ್ ಕೊಹ್ಲಿ ಬೆಂಬಲಕ್ಕೆ ಬಂದ ಕ್ರಿಕೆಟಿಗರು ಇವರೇ ನೋಡಿ

ವ್ಯಾಪಕ ಟೀಕೆ ಮತ್ತು ಟ್ರೋಲ್‌ಗಳ ನಡುವೆ ದೇಶ-ವಿದೇಶದ ಸ್ಟಾರ್ ಆಟಗಾರರು ವಿರಾಟ್ ಕೊಹ್ಲಿಗೆ ಬೆಂಬಲ ನೀಡಿದ್ದಾರೆ. ಕಿಂಗ್ ಕೊಹ್ಲಿ ಮತ್ತೆ ಕಮ್‍ಬ್ಯಾಕ್ ಮಾಡುತ್ತಾರೆಂದು ಭರವಸೆ ವ್ಯಕ್ತಪಡಿಸಿದ್ದಾರೆ.   

ನವದೆಹಲಿ: ಭಾರತವು ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡು ಸಂಭ್ರಮಿಸಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ಸದ್ಯ ಚರ್ಚೆಯ ವಸ್ತುವಾಗಿದ್ದಾರೆ. ಒಂದು ಕಾಲದಲ್ಲಿ ಉತ್ತುಂಗಕ್ಕೇರಿದ್ದ ಕಿಂಗ್ ಕೊಹ್ಲಿ ಇಂದು ಪದೇ ಪದೇ ವೈಫಲ್ಯ ಎದುರಿಸುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕೊಹ್ಲಿಯನ್ನು ಭಾರತ ತಂಡದಿಂದ ಕೈಬಿಡಬೇಕೆಂಬುದರ ಬಗ್ಗೆ ವ್ಯಾಪಕ ಚರ್ಚೆ ಸಹ ಆಗುತ್ತಿದೆ. ಅನೇಕ ಹಿರಿಯ ಆಟಗಾರರು ಕೊಹ್ಲಿ ಕಳಪೆ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ಪದೇ ಪದೇ ಅವಕಾಶ ನೀಡುತ್ತಿದೆ ಎಂದು ಟೀಕಿಸಿದ್ದಾರೆ. ಈ ಎಲ್ಲಾ ಟೀಕೆಗಳ ನಡುವೆ ದೇಶ-ವಿದೇಶದ ಸ್ಟಾರ್ ಆಟಗಾರರು ಕೊಹ್ಲಿ ಬೆಂಬಲಕ್ಕೆ ಬಂದಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಮ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿರುವ ಬಾಬರ್, ‘This too shall pass. Stay strong. #ViratKohli’ ಎಂದು ಕ್ಯಾಪ್ಶನ್ ಬರೆದಿದ್ದಾರೆ.   This too shall pass. Stay strong. #ViratKohli pic.twitter.com/ozr7BFFgXt — Babar Azam (@babarazam258) July 14, 2022

2 /6

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಫೇಸ್‌ಬುಕ್‌ನಲ್ಲಿ ಕೊಹ್ಲಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಭಾರತ ತಂಡದಿಂದ ಹೊರಗಿಡಬೇಕೆಂಬ ಜನರ ಟೀಕೆಗಳ ನಡುವೆ ಕೊಹ್ಲಿಗೆ ಬೆಂಬಲ ನೀಡಿರುವ ಅವರು, ಸ್ಟ್ರಾಂಗ್ ಆಗಿ ಇರುವಂತೆ ಸಲಹೆ ನೀಡಿದ್ದಾರೆ.

3 /6

ಕಳಪೆ ಪ್ರದರ್ಶನದಿಂದ ಟೀಕೆಗಳಿಗೆ ಗುರಿಯಾಗಿರುವ ವಿರಾಟ್ ಕೊಹ್ಲಿಗೆ ರೋಹಿತ್ ಶರ್ಮಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಪ್ರದರ್ಶನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್, ಕೊಹ್ಲಿಗೆ ಕೊಹ್ಲಿಯವರೇ ಸಾಟಿ ಎಂದು ಹೇಳಿದ್ದಾರೆ. ‘ಇತ್ತೀಚೆಗೆ ವಿರಾಟ್ ಬಗ್ಗೆ ಸಾಕಷ್ಟು ಮಾತನಾಡಲಾಗುತ್ತಿದೆ. ಕೊಹ್ಲಿ ಬಗ್ಗೆ ಏಕೆ ಚರ್ಚಿಸಲಾಗುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ. ಶ್ರೇಷ್ಠ ಆಟಗಾರನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ’ವೆಂದು ಅವರು ಹೇಳಿದ್ದಾರೆ.     

4 /6

ವಿರಾಟ್ ಕೊಹ್ಲಿಯನ್ನು ಟಿ20 ಪಂದ್ಯಗಳಿಂದ ಕೈಬಿಡುವ ಬಗ್ಗೆ ಕಪಿಲ್ ದೇವ್ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಆಸ್ಟ್ರೇಲಿಯಾದ ಆಟಗಾರ ಉಸ್ಮಾನ್ ಖವಾಜಾ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರನ ಬಗ್ಗೆ ಈ ರೀತಿ ಟೀಕಿಸುವುದು ಸರಿಯಲ್ಲ’ವೆಂದು ಅವರು ಹೇಳಿದ್ದಾರೆ.    

5 /6

ವಿರಾಟ್ ಕೊಹ್ಲಿಗೆ ಇಂಗ್ಲೆಂಡ್‍ನ ಮಾಜಿ ನಾಯಕ ಕೇವಿನ್ ಪೀಟರ್ಸನ್ ಬೆಂಬಲ ನೀಡಿದ್ದಾರೆ. ‘ನೀವು ದೊಡ್ಡ ವ್ಯಕ್ತಿ! ಜನರು ನೀವು ಕ್ರಿಕೆಟ್‍ನಲ್ಲಿ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಮಾತ್ರ ಕನಸು ಕಾಣುತ್ತಾರೆ. ಅತ್ಯುತ್ತಮವಾಗಿ ಆಡಿದ ಆಟಗಾರನ ಬಗ್ಗೆ ಟೀಕಿಸುತ್ತಿರುವುವುದು ನನಗೆ ಬೇಸರ ಮೂಡಿಸಿದೆ’ ಎಂದು ಹೇಳಿದ್ದಾರೆ.

6 /6

ವಿರಾಟ್ ಕೊಹ್ಲಿ ವಿರುದ್ಧ ಕಪಿಲ್ ದೇವ್ ಟೀಕಿಸಿರುವುದಕ್ಕೆ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಕಪಿಲ್ ದೇವ್ ನನ್ನ ಹಿರಿಯರು ಮತ್ತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊಹ್ಲಿಯನ್ನು ಟೀಕಿಸುವ ಮೊದಲು ಅವರ ಸಾಧನೆ ಬಗ್ಗೆ ಗಮನಹರಿಸುವುದು ಸೂಕ್ತವೆಂದು ಅವರು ಕೊಹ್ಲಿ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.