Photo Gallery: ಕಾಫಿ ತೋಟದ ಯಜಮಾನನ ಹೃದಯ ಕದ್ದ ಆದಿತಿ ಪ್ರಭುದೇವ

1994ರ ಜನವರಿ 13ರಂದು ಜನಿಸಿದ ಅದಿತಿ ಪ್ರಭುದೇವ ಮೊದಲು ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದರು. ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದರು.

Aditi Prabhudeva: ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಆದಿತಿ ಪ್ರಭುದೇವ ಅಪ್ಪಟ ಕನ್ನಡತಿ. ಈ ಸ್ಯಾಂಡಲ್‌ವುಡ್‌ ಬ್ಯೂಟಿ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುಬೇಡಿಕೆ ನಟಿಯಾಗಿರುವ ಆದಿತಿ ಕಾಫಿ ತೋಟದ ಯಜಮಾನನ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಈ ಚಂದನವನದ ಚಂದದ ನಟಿಯ ಬಗ್ಗೆ ಮತ್ತಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಆದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ತಮ್ಮ ಅದ್ಭುತ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಾವಣಗೆರೆಯಲ್ಲಿ ಜನಿಸಿದ ಆದಿತಿ ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್‍ನಲ್ಲಿ ಮಾಸ್ಟರ್ ಮಾಡಿದ್ದಾರೆ.

2 /5

1994ರ ಜನವರಿ 13ರಂದು ಜನಿಸಿದ ನಟಿ ಆದಿತಿ ಪ್ರಭುದೇವ ಮೊದಲು ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದರು. ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದರು.

3 /5

'ಗುಂಡ್ಯಾನ ಹೆಂಡತಿ' ಅನ್ನೋ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ನಟಿ ಆದಿತಿ ಪ್ರಭುದೇವ ‘ನಾಗಕನ್ನಿಕೆ’ ಸಿರೀಯಲ್‍ನಲ್ಲಿ ಶಿವಾನಿ ಪಾತ್ರದಲ್ಲಿ ಮಿಂಚಿದ್ದರು.   

4 /5

2017ರಲ್ಲಿ ಕೃಷ್ಣ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟಿ ಆದಿತಿ ಪ್ರಭುದೇವ ಎಂಟ್ರಿ ಕೊಟ್ಟರು. ಆದಿತಿಯವರ ಮೂಲ ಹೆಸರು ಸುದೀಪನಾ. ‘ಬಜಾರ್’, ‘ಸಿಂಗಂ’, ‘ರಂಗನಾಯಕಿ’, ‘ಬ್ರಹ್ಮಚಾರಿ’,  ‘ಆನ’, ‘ಒಂಬತ್ತನೇ ದಿಕ್ಕು’, ಓಲ್ಡ್ ಮಂಕ್’, ಗಜಾನನ ಅಂಡ್ ಗ್ಯಾಂಗ್’, ತೋತಾಪುರಿ ಮುಂತಾದ ಸಿನಿಮಾಗಳಲ್ಲಿ ಮಿಂಚಿರುವ ಆದಿತಿ ಸದ್ಯ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. 

5 /5

ನಟಿ ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಕಾಫಿ ಪ್ಲಾಂಟರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಯಶಸ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.