Beerಗಾಗಿ ಖ್ಯಾತಿ ಪಡೆದಿರುವ ಈ ಪಟ್ಟಣದಲ್ಲಿ ಅಡಗಿದೆ Corona ಚಿಕಿತ್ಸೆ

ಅಂತರರಾಷ್ಟ್ರೀಯ ಬಿಯರ್ ತಯಾರಿಕೆಯ ಈ ಪಟ್ಟಣದಲ್ಲಿ, ವಿಶ್ವದ ಅತಿದೊಡ್ಡ ಮಹಾಮಾರಿ ಕರೋನಾ ವೈರಸ್ ಅನ್ನು ನಿರ್ಮೂಲನೆ ಮಾಡಲು ಮತ್ತು ತಡೆಗಟ್ಟಲು ಲಸಿಕೆ ತಯಾರಿಸಲಾಗುತ್ತಿದೆ.

  • Nov 16, 2020, 18:34 PM IST

ನವದೆಹಲಿ: ಬೆಲ್ಜಿಯಂನ ಒಂದು ಪಟ್ಟಣವು ಒಂದು ಕಾಲದಲ್ಲಿ ಬ್ಯೂಟಿ ಕ್ವೀನ್ ಮತ್ತು Beer ಗಾಗಿ ಹೆಸರುವಾಸಿಯಾಗಿತ್ತು. ಆದರೆ ಪ್ರಸ್ತುತ  ಇಡೀ ವಿಶ್ವದ ಕಣ್ಣುಗಳು ಬೇರೊಂದು ಕಾರಣಕ್ಕಾಗಿ ಈ ಪಟ್ಟಣದ ಮೇಲೆ ಕೆಂದ್ರೀಕರಿಸಿವೆ. ತಜ್ಞರ ಪ್ರಕಾರ, ಈ ಪಟ್ಟಣವು ಸಂಜೀವಿಯನ್ನು ಇಡೀ ಜಗತ್ತಿಗೆ ಸಿದ್ಧಪಡಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಯರ್ ತಯಾರಿಸುವ ಈ ಪಟ್ಟಣದಲ್ಲಿ ವಿಶ್ವದ ಅತಿದೊಡ್ಡ ಮಹಾಮಾರಿ  ಕೊರೊನಾವೈರಸ್ ಅನ್ನು ನಿರ್ಮೂಲನೆ ಮಾಡಲು ಮತ್ತು ತಪ್ಪಿಸಲು ಲಸಿಕೆ ತಯಾರಿಸಲಾಗುತ್ತಿದೆ. ಹಾಗಾದರೆ ಬನ್ನಿ ಈ ಪಟ್ಟಣದ ಕುರಿತು ತಿಳಿದುಕೊಳ್ಳೋಣ.

ಇದನ್ನು ಓದಿ-ಈ ಬಿಯರ್ ಕಂಪನಿಗೆ ತಗುಲಿದೆ CoronaVirus ಸೋಂಕು!

1 /5

ಬೆಲ್ಜಿಯಂನ ಈ ಪಟ್ಟಣದ ಹೆಸರು ಪುರಸ್. ಈ ಪಟ್ಟಣವು ಬ್ರಸೆಲ್ಸ್ ಮತ್ತು ಆಂಟ್ವೆರ್ಪ್ ನಗರಗಳ ನಡುವೆ ಇದೆ. ಕಳೆದ ವಾರ, ದಿನಾ ತೆರೇಸಾಗೊ ಮಿಸ್ ಬೆಲ್ಜಿಯಂಗಾಗಿಯೂ ಕೂಡ ಈ ಪಟ್ಟಣ ಹೆಸರುವಾಸಿಯಾಗಿದೆ. ಅವಳು ಟಿವಿ ಶೋ ಕೂಡ ನಡೆಸುತ್ತಿದ್ದಾಳೆ. ಇನ್ನೊಂದು ಕಾರಣ ಇಲ್ಲಿ ಪ್ರಸಿದ್ಧ ಬಿಯರ್ ಉತ್ಪಾದಿಸಲಾಗುತ್ತದೆ. ಈ ಬಿಯರ್ ಅನ್ನು ಶತಾವರಿಯಿಂದ ತಯಾರಿಸಲಾಗುತ್ತದೆ. ಪ್ರಸ್ತುತ, ಈ ಪಟ್ಟಣದಲ್ಲಿ ಶತಾವರಿ ಬೆಳೆಗಳಿವೆ.

2 /5

ಆದರೆ, ಪ್ರಸ್ತುತ ಈ ಪಟ್ಟಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.  ಏಕೆಂದರೆ ಇಲ್ಲಿರುವ ಫೈಜಾರ್ ಕಂಪನಿಯ ಕಾರ್ಖಾನೆಯಲ್ಲಿ ಕೋವಿಡ್ -19 ಲಸಿಕೆ ಉತ್ಪಾದನೆ ಪ್ರಾರಂಭವಾಗಿದೆ. ನಮ್ಮ ಜನರು ಮೊದಲು ಕೋವಿಡ್ -19 ರ ಲಸಿಕೆ ಪ್ರಮಾಣವನ್ನು ಪಡೆಯುತ್ತಾರೆ ಎಂದು ಪುರಸ್ ಟೌನ್ ಮೇಯರ್, ಕೊಯೆನ್ ವ್ಯಾನ್ ಡೆನ್ ಹೆವೆಲ್ ತಮಾಷೆಯಾಗಿ ಹೇಳುತ್ತಾರೆ. ಆದರೆ ಫೈಜರ್ ಕಂಪನಿಯು ಅನೇಕ ಒಪ್ಪಂದಗಳನ್ನು ಹೊಂದಿದೆ ಎಂದು ಮೇಯರ್ ಮತ್ತು ಇಲ್ಲಿನ ಜನರಿಗೆ ತಿಳಿದಿದೆ. ಅದೇ ಒಪ್ಪಂದದ ಪ್ರಕಾರ, ಅವರು ಲಸಿಕೆಯನ್ನು ವಿಶ್ವಾದ್ಯಂತ ವಿತರಿಸಲಿದ್ದಾರೆ.

3 /5

ಮಾಹಿತಿಗಳ ಪ್ರಕಾರ ಪುರುಸ್ ಪಟ್ಟಣ ಎರಡು ರಸ್ತೆಗಳಿಂದ ವಿಭಾಜಿಸಲ್ಪಟ್ಟಿದೆ . ಈ ಪಟ್ಟಣದಲ್ಲಿ ಒಂದು ಚರ್ಚ್, ಶಾಲೆ, ಔಷಧಿ ಅಂಗಡಿಗಳು, ರೆಸ್ಟೋರೆಂಟ್ ಹಾಗೂ ಶತಾವರಿ ಬೆಲೆ ಬೆಳೆಯಲಾಗುತ್ತದೆ. ಹಲವು ದಶಕಗಳ ಕಾಲ ಮೂರ್ಟ್ಗಾತ್ ಬ್ರೆವರಿಯಿಂದ ತಯಾರಿಸಲಾಗುವ ಡುವೆಲ್ ಬಿಯರ್ ಗಾಗಿ ಹೆಸರುವಾಸಿಯಾಗಿತ್ತು. ಫೈಜರ್ ನ ಅಂಗಸಂಸ್ಥೆ ಕಂಪನಿಯಾಗಿರುವ ಆಪ್ ಜಾನ್ 1960ರಲ್ಲಿ ಇಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದೆ. ಇದರಲ್ಲಿ ಸುಮಾರು 3000 ಉದ್ಯೋಗಿಗಳಿದ್ದಾರೆ. ಈ ಕಂಪನಿಯಿಂದ ಈ ಪಟ್ಟಣದ ಅದೃಷ್ಟವೆ ಬದಲಾಗಿದೆ.

4 /5

ಫೈಜರ್ ಹಾಗೋ ಬಯೋ ಎನ್ ಟೆಕ್ ಕಂಪನಿಗಳು ಏಕಕಾಲಕ್ಕೆ ತಮ್ಮ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವಿಡ್ 19 ವ್ಯಾಕ್ಸಿನ್ ಶೇ. 90 ರಷ್ಟು ಪ್ರಭಾವಶಾಲಿಯಾಗಿದೆ ಎಂದು ಪ್ರಕಟಿಸಿವೆ. ಹೀಗಾಗಿ ಇಡೀ ವಿಶ್ವದ ಕಣ್ಣು ಇದೀಗ ಪುರುಸ್ ಪಟ್ಟಣದ ಮೇಲೆ ಕೆಂದ್ರೀಕರಿಸಿದೆ. ಏಕೆಂದರೆ ಈ ಪಟ್ಟಣದಲ್ಲಿರುವ ಫೈಜರ್ ಕಂಪನಿಯಲ್ಲಿಯೇ ವ್ಯಾಕ್ಸಿನ್ ನ ಹೆಚ್ಚುವರಿ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಇತೀಚೆಗಷ್ಟೇ ಸ್ಥಳೀಯ ಮಟ್ಟದಲ್ಲಿ ಫೈಜರ್ ಕಂಪನಿ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ.

5 /5

ಈ ಜಾಹೀರಾತಿನಲ್ಲಿ ಕಂಪನಿ ವ್ಯಾಕ್ಸಿನ್ ತಯಾರಕರು ಬೇಕಾಗಿದ್ದಾರೆ ಎಂದು ಹೇಳಿದೆ. ಮುಂದಿನ ವರ್ಷಾಂತ್ಯಕ್ಕೆ ಒಂದು ಬಿಲಿಯನ್ ಗೂ ಅಧಿಕ ವ್ಯಾಕ್ಸಿನ್ ಡೋಸ್ ಗಳನ್ನು ತಯಾರಿಸಬೇಕಿದೆ. ಮಹಾಮಾರಿ ಕೂಡ ಇಷ್ಟು ಬೇಗ ಮುಕ್ತಾಯಗೊಳ್ಳುವುದಿಲ್ಲ. ಆದರೆ ಈ ಲಸಿಕೆ ಈ ಸಮಸ್ಯೆಗೆ ಮಾತ್ರ ಪರಿಹಾರವಾಗದಿರಬಹುದು. ಏಕೆಂದರೆ ವೈರಸ್‌ಗಳನ್ನು ರೂಪಾಂತರಿಸಬಹುದು. ಆದ್ದರಿಂದ, ಈ ಲಸಿಕೆ ಜನರನ್ನು ಕೆಲವೇ ತಿಂಗಳುಗಳವರೆಗೆ ಉಳಿಸಬಹುದು.