ಮಾರಕ ಕೊರೊನಾ ವೈರಸ್ ಹಾವಳಿಗೆ ವಿಶ್ವವೇ ನಲುಗಿದೆ. ಇದೀಗ ಈ ವೈರಸ್ ನ ಭೀತಿಯ ಪ್ರಭಾವ ವಿಶ್ವದ ಅತ್ಯಂತ ಪಾಪ್ಯುಲರ್ ಬಿಯರ್ ಬ್ರಾಂಡ್ ಆಗಿರುವ Brewer Anheuser-Busch InBev (AB InBev) ಮೇಲ ಬೀರಿದ್ದು, ಕಂಪನಿಗೆ ಭಾರಿ ಹಾನಿಯುಂಟು ಮಾಡಿದೆ. ವಿಷಯ ಏನು ಅಂದ್ರೆ, ಈ ಕಂಪನಿ ಕೊರೊನಾ ಬೀಯರ್ ಹೆಸರಿನಡಿ ಬಿಯರ್ ತಯಾರಿಸುತ್ತದೆ. ಈ ಬಿಯರ್ ಗೆ ಅಮೆರಿಕಾದಲ್ಲಿ ಭಾರಿ ಬೇಡಿಕೆ ಇದೆ. ಆದರೆ, ಚೀನಾದಲ್ಲಿ ಕೊರೊನಾ ವೈರಸ್ ಹರಡಲು ಆರಂಭಿಸುತ್ತಿದ್ದಂತೆ, ಈ ಬ್ರಾಂಡ್ ನ ಬಿಯರ್ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ. ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಕಂಪನಿಗೆ ಕೋಟ್ಯಂತರ ರೂ. ನಷ್ಟವಾಗಿದೆ.
ಬ್ಲೂ ಬರ್ಗ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಕೊರೊನಾ ಬಿಯರ್ ಕುರಿತು ಜನರು ಇದೀಗ ಹಾಸ್ಯಮಯ ಮೀಮ್ ಹಾಗೂ ವಿಡಿಯೋಗಳನ್ನು ತಯಾರಿಸಲು ಆರಂಭಿಸಿದ್ದು, ಇವುಗಳನ್ನು ವ್ಯಾಪಕ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. "corona beer virus" ಹಾಗೂ "beer coronavirus" ಕುರಿತು ಆನ್ಲೈನ್ ನಲ್ಲಿ ನಡೆಸಲಾಗುತ್ತಿರುವ ಹುಡುಕಾಟದ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. Google ನೀಡಿರುವ ಮಾಹಿತಿ ಪ್ರಕಾರ ಕೊರೊನಾ ಕುರಿತು ಕಳೆದ ಒಂದು ತಿಂಗಳಿನಲ್ಲಿ ನಡೆಸಲಾದ ಸರ್ಚ್ ನಲ್ಲಿ ಶೇ.1100 ರಷ್ಟು ಏರಿಕೆ ದಾಖಲಾಗಿದೆ ಎನ್ನಲಾಗಿದೆ.
YouGov Plc ನೀಡಿರುವ ಮಾಹಿತಿ ಪ್ರಕಾರ ಅಮೇರಿಕಾದಲ್ಲಿ ಈ ಬಿಯರ್ ನ ಮಾರಾಟದಲ್ಲಿ ಕಳೆದ ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಷ್ಟೇ ಅಲ್ಲ ನ್ಯೂಯಾರ್ಕ್ ನಲ್ಲಿ ಈ ಕಂಪನಿಯ ಷೇರುಗಳ ಬೆಲೆ ಶೇ.8ರಷ್ಟು ಕುಸಿತ ದಾಖಲಿಸಿವೆ ಎನ್ನಲಾಗಿದೆ.
ಇದು ಅಮೆರಿಕಾದ ಮೂರನೇ ಅತಿ ಪಾಪ್ಯುಲರ್ ಬ್ರಾಂಡ್
ಕೊರೊನಾ ಬಿಯರ್ ಇದು ಅಮೆರಿಕಾದ ಮೂರನೇ ಅತ್ಯಂತ ಹೆಚ್ಚು ಪಾಪ್ಯುಲರ್ ಬಿಯರ್ ನ ಬ್ರಾಂಡ್ ಇದಾಗಿದೆ. ಮೊದಲ ಸ್ಥಾನದಲ್ಲಿ Guinness ಬಿಯರ್ ಬ್ರಾಂಡ್ ಇದ್ದರೆ, ಎರಡನೇ ಸ್ಥಾನದಲ್ಲಿ Heineken ಬಿಯರ್ ಇದೆ. Brewer Anheuser ಕಂಪನಿ ಕೊರೊನಾ ಬಿಯರ್ ಅನ್ನು ಹೊರತುಪಡಿಸಿ Budweiser ಹಾಗೂ Stella Artois ಬ್ರಾಂಡ್ ನ ಬಿಯರ್ ಕೂಡ ತಯಾರಿಸುತ್ತದೆ.
#coronabeer pic.twitter.com/oNkzy23sKV
— Leonardo Gallo (@LeonhardHahn) February 23, 2020
ಕಂಪನಿಯ ಆದಾಯದಲ್ಲಿ ಇಳಿಕೆ
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದಲ್ಲಿ ಶೇ.10ರಷ್ಟು ನಷ್ಟ ಉಂಟಾಗಿದೆ. ಕಂಪನಿಯ ಗಳಿಕೆಯಲ್ಲಿ 260 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ. ಅಷ್ಟೇ ಅಲ್ಲ ಈ ನಷ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿದೆ.