ಇಂಡೋನೇಷ್ಯಾದ ಲುಂಪುಂಗ್‌ನ ಪ್ರಿಂಗ್‌ಸೆವು ರೀಜೆನ್ಸಿ ಲ್ಯಾಂಪಂಗ್‌ನಲ್ಲಿ 12 ವರ್ಷದ ಮಗು ದೈತ್ಯ ಡ್ರ್ಯಾಗನ್ ಗಾಳಿಪಟದೊಂದಿಗೆ 30 ಅಡಿಗಳಷ್ಟು ಎತ್ತರದವರೆಗೆ ಗಾಳಿಯಲ್ಲಿ ಹಾರಿರುವ ಘಟನೆ ನಡೆದಿದೆ.
ಶಾಲೆಯೊಂದರಲ್ಲಿ ಗಾಳಿಪಟ ಹಾರಿಸುತ್ತಿದ್ದ ಸಮಯದಲ್ಲಿ ದೊಡ್ಡ ಅಪಘಾತವೊಂದು ಸಂಭವಿಸಿದೆ. ದೈತ್ಯ ಡ್ರ್ಯಾಗನ್ ಗಾಳಿಪಟವನ್ನು ಹಾರಿಸುತ್ತಿದ್ದ 12 ವರ್ಷದ ಬಾಲಕ ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಿರುವ ಘಟನೆ ನಡೆದಿದೆ. ಗಾಳಿಪಟ ತುಂಬಾ ದೊಡ್ಡದಾಗಿದ್ದು, ಮಗು ಗಾಳಿಯಲ್ಲಿ ಸುಮಾರು 30 ಅಡಿಗಳಷ್ಟು ಹಾರಿ ನಂತರ ನೆಲದ ಮೇಲೆ ಬಿದ್ದಿದ್ದಾನೆ. ಆದಾಗ್ಯೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಸ್ಥಳದಲ್ಲಿದ್ದ ಜನರು ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಡೈಲಿ ಮೇಲ್ ವರದಿಯ ಪ್ರಕಾರ, ಕೆಲವರು ಶಾಲೆಯ ಸಮೀಪವಿರುವ ಮೈದಾನದಲ್ಲಿ ಗಾಳಿಪಟ ಹಾರಿಸುತ್ತಿದ್ದರು. ಈ ಸಮಯದಲ್ಲಿ ಡ್ರ್ಯಾಗನ್ ಆಕಾರದ ದೊಡ್ಡ ಗಾಳಿಪಟವನ್ನು (Dragon kite) ಹಾರಿಸುತ್ತಿದ್ದ 12 ವರ್ಷದ ಮಗು ಅದರೊಂದಿಗೆ 30 ಅಡಿ ಎತ್ತರಕ್ಕೆ ಹಾರಿತು.
ಈ ಘಟನೆ ಇಂಡೋನೇಷ್ಯಾದ ಲ್ಯಾಂಪಂಗ್‌ನಲ್ಲಿರುವ ಪ್ರಿಂಗ್‌ಸೆವು ರೀಜೆನ್ಸಿ ಲ್ಯಾಂಪಂಗ್‌ನದ್ದಾಗಿದೆ.
ಮಗು ಗಾಳಿಪಟದೊಂದಿಗೆ ಸುಮಾರು 30 ಅಡಿ ಎತ್ತರಕ್ಕೆ ತಲುಪಿತು, ಆದರೆ ಅದರ ನಂತರ ಬಾಲಕನು ನೆಲಕ್ಕೆ ಬಿದ್ದನು. ಮಗುವಿನ ಜೀವ ಉಳಿಯಿತಾದರೂ ಅವನ ದೇಹದ 6 ಭಾಗಗಳು ಫ್ರಾಕ್ಚರ್ ಆಗಿವೆ. ಇದರ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬಾಲಕನಿಗೆ 2 ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಈಗ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ಹುಡುಗನ ಹಿರಿಯ ಸಹೋದರ ನಾವು ಸೋದರ-ಸೋದರಿ ಡ್ರ್ಯಾಗನ್ ಆಕಾರದ ಗಾಳಿಪಟವನ್ನು ಹಾರಿಸುತ್ತಿದ್ದೆವು. ಅದು ನನ್ನ ಕಿರಿಯ ಸಹೋದರನಿಗಿಂತ ಕನಿಷ್ಠ ಮೂರು ಪಟ್ಟು ದೊಡ್ಡದು. ಈ ಸಮಯದಲ್ಲಿ ಬಲವಾದ ಗಾಳಿಯಿಂದಾಗಿ ನನ್ನ ಸಹೋದರ ಕೂಡ ಗಾಳಿಪಟದೊಂದಿಗೆ ಗಾಳಿಯಲ್ಲಿ ಹಾರಿದ ಎಂದು ಘಟನೆ ಬಗ್ಗೆ ವಿವರಿಸಿದರು.
ವೀಡಿಯೊ ಹೊರಹೊಮ್ಮಿದ ನಂತರ ಆಡಳಿತವು ಜನರಿಗೆ ಎಚ್ಚರಿಕೆ ನೀಡಿದೆ ಮತ್ತು ಮಕ್ಕಳು ಹೆಚ್ಚು ದೊಡ್ಡ ಗಾಳಿಪಟವನ್ನು ಹಾರಿಸಬಾರದು ಎಂದು ಹೇಳಿದ್ದಾರೆ. ಏಕೆಂದರೆ ಇದು ಜಕಾರ್ತದಲ್ಲಿ ಮಕ್ಕಳು ಗಾಳಿಪಟದೊಂದಿಗೆ ಹಾರಿರುವ ಮೊದಲ ಘಟನೆಯಲ್ಲ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಯೋಗಕರ್ತದ ಬಂಟುಲ್ ರೀಜೆನ್ಸಿಯಲ್ಲಿ 14 ವರ್ಷದ ಬಾಲಕ ಗಾಳಿಪಟದೊಂದಿಗೆ ಗಾಳಿಯಲ್ಲಿ ಸುಮಾರು 11 ಅಡಿ ಹಾರಾಟ ನಡೆಸಿ ತಂತಿಯಲ್ಲಿ ಸಿಕ್ಕಿಹಾಕಿಕೊಂಡು ಗಾಯಗೊಂಡಿದ್ದ.
ಈ ವರ್ಷದ ಆಗಸ್ಟ್‌ನಲ್ಲಿ, ತೈವಾನ್‌ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದ್ದು, ಇದರಲ್ಲಿ ಮೂರು ವರ್ಷದ ಬಾಲಕಿ ಗಾಳಿಪಟದೊಂದಿಗೆ 100 ಅಡಿ ಎತ್ತರಕ್ಕೆ ಹಾರಿರುವ ಘಟನೆ ನಡೆದಿತ್ತು. ಹುಡುಗಿ ಗಾಳಿಪಟದೊಂದಿಗೆ ಹಾರಿದ್ದರಿಂದ ಈ ಅಪಘಾತವೂ ಸಂಭವಿಸಿದೆ. ಆದರೆ, ಈ ಸಂದರ್ಭದಲ್ಲಿ ಹಾಜರಿದ್ದ ಜನರು ಬಾಲಕಿಯನ್ನು ಉಳಿಸಿದ್ದಾರೆ.