ಹುಣ್ಣಿಮೆ ಚಂದ್ರನನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಅದರಲ್ಲೂ ನಿನ್ನೆ ಅಂದರೆ ಜೂನ್ 24ರಂದು ಬಾನಂಗಳದಲ್ಲಿ ಕಂಡು ಬಂದಿದ್ದು ಸ್ಟ್ರಾಬೆರಿ ಸೂಪರ್ ಮೂನ್.
ನವದೆಹಲಿ : ಹುಣ್ಣಿಮೆ ಚಂದ್ರನನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಅದರಲ್ಲೂ ನಿನ್ನೆ ಅಂದರೆ ಜೂನ್ 24ರಂದು ಬಾನಂಗಳದಲ್ಲಿ ಕಂಡು ಬಂದಿದ್ದು ಸ್ಟ್ರಾಬೆರಿ ಸೂಪರ್ ಮೂನ್. ಈ ದೃಶ್ಯವಂತೂ ಕಣ್ಣುಗಳಿಗೆ ಪರಮಾನಂದವನ್ನುಂಟು ಮಾಡಿತ್ತು. ಆಕಾಶದಲ್ಲಿ ಹೊಳೆಯುತ್ತಿದ್ದ ಈ ಸ್ಟ್ರಾಬೆರಿ ಸೂಪರ್ ಮೂನ್ ಪ್ರಪಂಚದಾದ್ಯಂತ ಗೋಚರಿಸಿತ್ತು. ಹಲವರು ಈ ದೃಶ್ಯ ವೈಭವವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸ್ಟ್ರಾಬೆರಿ ಸೂಪರ್ ಮೂನ್‌ನ ಅದ್ಭುತ ಚಿತ್ರಗಳು ಇಲ್ಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದಿ ಸನ್‌ನ ವರದಿಯ ಪ್ರಕಾರ, ಗ್ರೀಸ್‌ನ ಕೇಪ್ ಸೌನಿಯನ್‌ನಲ್ಲಿರುವ ಪೋಸಿಡಾನ್‌ನ ಅಮೃತಶಿಲೆಯ ದೇವಾಲಯದ ಹಿಂಬದಿಯಲ್ಲಿ ಕಂಡು ಬಂದ ಸ್ಟ್ರಾಬೆರಿ ಸೂಪರ್ ಮೂನ್ ದೇವಾಲಯದ ಬ್ಯಾಕ್ ಗ್ರೌಂಡ್ ನಂತೆಯೇ ಕಂಡು ಬಂತು.
ಮಾಸ್ಕೋದ ವಿದೇಶಾಂಗ ಸಚಿವಾಲಯದ ಕಟ್ಟಡದ ಮೇಲೆ ಕಂಡು ಬಂದ ಸೂಪರ್ ಮೂನ್ ರೀತಿ ಹೊಳೆಯುತ್ತಿತ್ತು.
ಸೈಪ್ರಸ್‌ನ ರಾಜಧಾನಿಯಾದ ನಿಕೋಸಿಯಾದ ಫಮಾಗುಸ್ಟಾ ಗೇಟ್‌ನ ಮೇಲೆ ಕಂಡು ಬಂದ ಸೂಪರ್ ಮೂನ್ ಜನ ವೀಕ್ಷಿಸಿದರು.
ಕುವೈತ್‌ನ ನಿವಾಸಿಗಳು ಕೂಡಾ ಸ್ಟ್ರಾಬೆರಿ ಸೂಪರ್ ಮೂನ್‌ಗೆ ಸಾಕ್ಷಿಯಾದರು.
ಲಂಡನ್ನಿನಲ್ಲಿಯೂ ಈ ಸುಂದರ ದೃಶ್ಯವನ್ನು ಜನ ಆನಂದಿಸಿದರು. ಈ ಫೋಟೋ ಹ್ಯಾಂಪ್‌ಸ್ಟಡ್ ಹೀತ್ ಬಳಿಯ ಕಟ್ಟಡದ ಮೇಲೆ ಕಾಣಿಸಿದ ಸೂಪರ್ ಮೂನ್ ಆಗಿದೆ.
ಲಂಕಾಷೈರ್ನ ಬರ್ನೆಲ್ ನ ಆಕಾಶದಲ್ಲಿ ಅತ್ಯಂತ ಸುಂದರವಾದ ಸೂಪರ್ ಮೂನ್ ಪೂರ್ಣ ಹೊಳಪಿನೊಂದಿಗೆ ಕಾಣಿಸಿಕೊಂಡಿತು.
ಈಜಿಪ್ಟಿನ ಕೈರೋ ಉಪನಗರವಾದ ಜಹ್ರಾ ಎಲ್ ಮಡಿಯಲ್ಲಿರುವ ಅತಿದೊಡ್ಡ ಮಸೀದಿಯ ಗುಮ್ಮಟದ ಮೇಲೆ ಚಂದ್ರ ಗೋಚರಿಸಿದೆ. ಇದರಲ್ಲಿ, ಗುಮ್ಮಟದ ನೆರಳು ಚಂದ್ರನ ಮೇಲೆ ಬಿದ್ದಂತೆ ಭಾಸವಾಗುತ್ತಿತ್ತು.