Photos: ಬೆವರು ಸುರಿಸಿ ದುಡಿವ ಜನರಿಗೆ ಮಹತ್ವದ ಮತದಾನ ಜಾಗೃತಿ ಪಾಠ

ಮತದಾನ ಜಾಗೃತಿ ಚಟುವಟಿಕೆಯಲ್ಲಿ ರಾಜ್ಯದಲ್ಲಿಯೇ ಗಮನ ಸೆಳೆದ ಕೊಪ್ಪಳ ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿದ್ದು, ನರೇಗಾ ಕೂಲಿ ಕಾರ್ಮಿಕರು ಇರುವ ಕಡೆಗೆ ಸಂಚರಿಸಿ ಅವರಿಗೆ ಮತದಾನ ಜಾಗೃತಿ ಪಾಠ ಹೇಳಲಾಯಿತು.

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಮಾರ್ಗದರ್ಶನದಲ್ಲಿ ವಾಕ್‌ಥಾನ್, ಬೈಕ್ ರ‍್ಯಾಲಿ, ಬೃಹತ್ ಮಾನವ ಸರಪಳಿ, ಮನೆ-ಮನೆ ಭೇಟಿ, ಬೀದಿನಾಟಕ, ಆಡಿಯೋ ಮೂಲಕ ಪ್ರಚಾರ, ಬಸ್ ನಿಲ್ದಾಣಗಳಲ್ಲಿ ಪ್ರಚಾರ, ಶಾಲಾ-ಕಾಲೇಜು ಹಂತದಲ್ಲಿ ಜಾಗೃತಿ ಸೇರಿದಂತೆ ಹತ್ತು ಹಲವು ಬಗೆಯ ಸ್ವೀಪ್ ಚಟುವಟಿಕೆಗಳು ನಿತ್ಯ ನಿರಂತರ ನಡೆಯುತ್ತಲೇ ಇದ್ದು, ಮೇ 7ರಂದು ಸಹ ಬಿಸಿಲ ನಾಡು, ಬಯಲುಸೀಮೆಯ ಕೊಪ್ಪಳ ಜಿಲ್ಲೆಯಲ್ಲಿ ಸಹ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಂದ ಏಕಕಾಲದಲ್ಲಿ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. 

ಗಂಗಾವತಿ ತಾಲೂಕಿನ ವಿಠಲಾಪುರ ಕೆರೆಯ ಹೂಳೆತ್ತುವ ನರೇಗಾ ಕೂಲಿಕಾರರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಕಾಶಿನಾಥ ಹಂಚಿನಾಳ ಅವರ ನೇತೃತ್ವದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಮತದಾನ ಮಹತ್ವ ಕುರಿತು ಕೂಲಿಕಾರರಿಗೆ ಮಾಹಿತಿ ನೀಡಿ ಕಡ್ಡಾಯ ಮತದಾನ ಮಾಡುವಂತೆ ತಿಳಿಸಲಾಯಿತು. ಕೂಲಿಕಾರರಿಗೆ ತಾಲೂಕು ಐಇಸಿ ಸಂಯೋಜಕರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಪಂ ಕಾರ್ಯದರ್ಶಿಗಳು, ಗ್ರಾಪಂ ಸಿಬ್ಬಂದಿ, ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಇದ್ದರು.

1 /5

ಕಾರಟಗಿ ತಾಲೂಕಿನ ತಾಲೂಕಿನ ಗುಂಡೂರು, ಹುಳ್ಕಿಹಾಳ್ ಹಾಗೂ ಚಳ್ಳೂರು ಗ್ರಾಮ ಪಂಚಾಯತಿಯ ಕೂಲಿಕಾರರಿಗೆ ನರೇಗಾದಡಿ ಜೀರಾಳ್ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ ಎನ್.ಅವರು ಮಾತನಾಡಿ, ಮತದಾರರು ಯಾವುದೇ ಆಸೆ-ಆಮೀಷಕ್ಕೆ ಒಳಗಾಗದೆ ಮತದಾನ ಹಕ್ಕು ಚಲಾಯಿಸಬೇಕು ಎಂದರು.ಗುಂಡೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕನಕಪ್ಪ ಅವರು ಮತದಾನದ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಇದೆ ವೇಳೆ ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಗುಂಡೂರು ಪಿಡಿಓ ಮಹೆಬೂಬ್ ಸಾಬ್, ಹುಳ್ಕಿಹಾಳ್ ಪಿಡಿಓ ಹನುಮಂತಪ್ಪ ನಾಯಕ, ತಾಪಂ ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿಎಫ್ಟಿಗಳು, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ಕೂಲಿಕಾರರರು ಇದ್ದರು.

2 /5

ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯತಿಯ ಬೆಳವಿನಾಳ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮೇ 7ರಂದು ನಡೆಯಿತು. ಕೊಪ್ಪಳ ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ ಎಚ್ ಮಾತನಾಡಿ, ನರೇಗಾ ಕೂಲಿಕಾರರು ಮತದಾನ ಕೇಂದ್ರಕ್ಕೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಬೇಕು. ಕುಟುಂಬದ ಸದಸ್ಯರಿಗೂ ಸಹ ಮತದಾನ ಮಾಡಲು ತಿಳಿಸಬೇಕು. ಯಾವುದೇ ಆಸೆ-ಆಮಿಷೆಗಳಿಗೆ ಒಳಗಾಗದೇ ನಿರ್ಬಿತರಾಗಿ ಮತ ಚಲಾಯಿಸಬೇಕು ಎಂದರು.

3 /5

ಕನಕಗಿರಿ ತಾಲೂಕಿನ 11 ಗ್ರಾ.ಪಂ ವ್ಯಾಪ್ತಿಯಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂನಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ್ ಕಂದಕೂರ್ ಅವರು ಮಾತನಾಡಿ, ಕಳೆದ ಎರಡ್ಮೂರು ತಿಂಗಳಿನಿಂದದ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಮತದಾನ ಕುರಿತು ಅರಿವು ಮೂಡಿಸಲಾಗಿದೆ. ಮೇ.10ರಂದು ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ನರೇಗಾ ಕೂಲಿ ಕಾರ್ಮಿಕರು ಗೈರು ಆಗದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಭಿವೃದ್ದಿ ಅಧಿಕಾರಿಗಳು, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಇನ್ನೀತರರು ಇದ್ದರು. 

4 /5

ಗಿಣಿಗೇರಾ ಗ್ರಾಮದಲ್ಲಿ ಈ ಹಿಂದೆ ಕಡಿಮೆ ಮತದಾನವಾದ ಪ್ರಯುಕ್ತ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಗಿಣಿಗೇರಾ ಗ್ರಾಪಂ ಪಿಡಿಓ ಮಂಜುಳಾ ದೇವಿ ಹೂಗಾರ ಅವರನ್ನೊಳಗೊಂಡ ತಂಡವು ಗಿಣಿಗೇರಾ ಗ್ರಾಮದ ಊರ ಮುಂದಿನ ಕೆರೆಯ ಬೋಟಿನಲ್ಲಿ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿತು. 

5 /5

ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಾಪಂ ಇಓ, ಪಿಡಿಓಗಳು ಸೇರಿದಂತೆ ತಾಲೂಕು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಪಂ ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿಎಫ್ಟಿಗಳು, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯತಿ ಸಿಬ್ಬಂದಿ ಸಕ್ರಿಯ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.