Plantain Benefits:ಕಚ್ಚಾ ಬಾಳೆಕಾಯಿಯ ಈ ಲಾಭಗಳು ನಿಮಗೆ ತಿಳಿದಿವೆಯೇ? ಇಂದೇ ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ

Benefits Of Plantain - ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಹಸಿ ಬಾಳೆಹಣ್ಣಿನಲ್ಲಿ (Plantain ) ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತವೆ. ಹಸಿ ಬಾಳೆಹಣ್ಣು ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಿತಕಾರಿ ಸಾಬೀತಾಗಬಹುದು. 
 

Health Benefits Of Plantain - ಭಾರತದಲ್ಲಿ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಮಾಗಿದ ಬಾಳೆಹಣ್ಣುಗಳ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಲುಬಹುದು ಮತ್ತು ನಿಯಮಿತವಾಗಿ ನೀವು ಅದನ್ನು ಸೇವಿಸುತ್ತಲೂ ಇರಬಹುದು. ಆದರೆ ಹಸಿ ಬಾಳೆಹಣ್ಣಿನ (Banana Benefits) ವಿಷಯಕ್ಕೆ ಬಂದರೆ, ಹೆಚ್ಚಿನ ಜನರಿಗೆ ಅದರ ಪ್ರಯೋಜನಗಳ (Benefits Of Plantain) ಬಗ್ಗೆ ತಿಳಿದಿರುವುದಿಲ್ಲ. ಕಚ್ಚಾ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಸಿಗುತ್ತವೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಬನ್ನಿ ಹಾಗಾದರೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ.

 

ಇದನ್ನೂ ಓದಿ-Banana Benefits : ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಪ್ರತಿದಿನ ಬಾಳೆಹಣ್ಣು ಸೇವಿಸಿ 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /8

1. ಇಮ್ಯೂನ್ ಸಿಸ್ಟಂ ಅನ್ನು ಗಟ್ಟಿಯಾಗಿಸುತ್ತದೆ - ಕಚ್ಚಾ ಬಾಳೆಕಾಯಿಯಲ್ಲಿ ಪೊಟ್ಯಾಸಿಯಂ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಇದು ಶರೀರವನ್ನು ದಿನವಿಡೀ ಆಕ್ಟಿವ್ ಆಗಿರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ6 ಜೀವಕೋಶಗಳಿಗೆ ಪೋಷಣೆ ನೀಡುವ ಕೆಲಸ ಮಾಡುತ್ತದೆ.

2 /8

2. ಆಂಟಿ-ಆಕ್ಸಿಡೆಂಟ್ ಗಳ ಆಗರ - ಹಸಿ ಬಾಳೆಹಣ್ಣಿನಲ್ಲಿ ಆರೋಗ್ಯಕರ ಪಿಷ್ಟ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಹಸಿ ಬಾಳೆಹಣ್ಣನ್ನು ನಿಯಮಿತವಾಗಿ ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

3 /8

3. ತೂಕ ಇಳಿಕೆಗೆ ಉತ್ತಮ (Plantain Benefits For Weight Loss)- ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಪ್ರತಿದಿನ ಹಸಿ ಬಾಳೆಹಣ್ಣು ತಿನ್ನಲು ಸಲಹೆ ನೀಡಲಾಗುತ್ತದೆ. ಏಕೆಂದರೆ, ಇದು ಫೈಬರ್‌ಗಳಿಂದ ಸಮೃದ್ಧವಾಗಿದೆ, ಇದು ಅನಗತ್ಯ ಕೊಬ್ಬಿನ ಕೋಶಗಳು ಮತ್ತು ಕಲ್ಮಶಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

4 /8

4. ಮಲಬದ್ಧತೆ ಸಮಸ್ಯೆಗೆ ಪರಿಹಾರ - ಹಸಿ ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಆರೋಗ್ಯಕರ ಪಿಷ್ಟವಿದೆ. ಇದು ಯಾವುದೇ ರೀತಿಯ ಕಲ್ಮಶಗಳನ್ನು ಕರುಳಿನಲ್ಲಿ ನೆಲೆಗೊಳ್ಳಲು ಬಿಡುವುದಿಲ್ಲ.ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ಆಗಾಗ್ಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ಹಸಿ ಬಾಳೆಹಣ್ಣನ್ನು ತಿನ್ನುವುದು ನಿಮಗೆ ತುಂಬಾ ಪ್ರಯೋಜನಕಾರಿ.

5 /8

5. ಹಸಿವನ್ನು ನಿಯಂತ್ರಿಸುತ್ತದೆ -ಹಸಿ ಬಾಳೆಹಣ್ಣಿನಲ್ಲಿರುವ ಫೈಬರ್ ಮತ್ತು ಇತರ ಅನೇಕ ಪೋಷಕಾಂಶಗಳು ಹಸಿವನ್ನು ನಿಯಂತ್ರಿಸುವ ಕೆಲಸ ಮಾಡುತ್ತವೆ. ಹಸಿ ಬಾಳೆಹಣ್ಣು ತಿನ್ನುವುದರಿಂದ ಪದೇ ಪದೇ ನಿಮಗೆ ಹಸಿವು ಉಂಟಾಗುವುದಿಲ್ಲ ಮತ್ತು ನೀವು ಜಂಕ್ ಫುಡ್ ಮತ್ತು ಇತರ ಅನಾರೋಗ್ಯಕರ ಆಹಾರವನ್ನು ತಿನ್ನುವುದರಿಂದ ಪಾರಾಗುವಿರಿ.

6 /8

6. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿರಿಸುತ್ತದೆ - ಮಧುಮೇಹ ಇಂದು ಸಾಮಾನ್ಯ ರೋಗವಾಗಿ ಮಾರ್ಪಟ್ಟಿದೆ. ಇದು ಯಾವುದೇ ವಯಸ್ಸಿನ ಜನರಿಗೆ ಸಂಭವಿಸುತ್ತಿದೆ. ಇದಕ್ಕೆ ಮೊದಲ ಕಾರಣ ತಪ್ಪು ಆಹಾರ ಪದ್ಧತಿ. ನಿಮಗೆ ಸಕ್ಕರೆ ಕಾಯಿಲೆ ಇದೆ ಮತ್ತು ಅದು ಆರಂಭಿಕ ಹಂತದಲ್ಲಿದ್ದರೆ, ನೀವು ಹಸಿ ಬಾಳೆಹಣ್ಣನ್ನು ಸೇವಿಸುವ ಮೂಲಕ ಅದನ್ನು ನಿಯಂತ್ರಿಸಬಹುದು.

7 /8

7. ಮೂಳೆಗಳನ್ನು ಗಟ್ಟಿಗೊಳಿಸುತ್ತದೆ -ಹಸಿ ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ ಜೊತೆಗೆ ಅನೇಕ ಪೋಷಕಾಂಶಗಳಿವೆ, ಇವು ಮೂಲೆಗಳ ಆರೋಗ್ಯಕ್ಕೆ ಬಹಳ ಮುಖ್ಯವಾಗಿವೆ.  ನಿಮ್ಮ ಮೂಳೆಗಳ ವಯಸ್ಸನ್ನು ಹೆಚ್ಚಿಸಲು ನೀವು ಬಯಸಿದರೆ, ನೀವು ಹಸಿ ಬಾಳೆಹಣ್ಣನ್ನು ತಿನ್ನಲು ಪ್ರಾರಂಭಿಸಬೇಕು.

8 /8

8. ಲೈಂಗಿಕ ಸಮಸ್ಯೆಗಳಿಗೆ ಸಮಾಧಾನ (Plantain Increases Bedtime) - ಬಾಳೆಹಣ್ಣನ್ನು ಪುರುಷರಲ್ಲಿನ ದುರ್ಬಲತೆಯ ಸಮಸ್ಯೆಯನ್ನು ನಿವಾರಿಸಲು ಬಳಸಲಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದು ಬ್ರೋಮಲೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.