ಮಹಾಕಾಲನ ಸನ್ನಿದಾನದಲ್ಲಿ ನಮೋ : ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ

ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಿರ್ಮಿಸಲಾಗಿರುವ 856 ಕೋಟಿ ರೂ. ವೆಚ್ಚದ ʼಮಹಾಕಾಲ ಕಾರಿಡಾರ್‌ʼನ ಮೊದಲ ಹಂತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿದ ಮೋದಿಯವರ ಫೋಟೋಗಳು ಇಲ್ಲವೆ ನೋಡಿ.

  • Oct 11, 2022, 21:32 PM IST

PM Narendra Modi : ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಿರ್ಮಿಸಲಾಗಿರುವ 856 ಕೋಟಿ ರೂ. ವೆಚ್ಚದ ʼಮಹಾಕಾಲ ಕಾರಿಡಾರ್‌ʼನ ಮೊದಲ ಹಂತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿದ ಮೋದಿಯವರ ಫೋಟೋಗಳು ಇಲ್ಲವೆ ನೋಡಿ.

1 /4

ಉಜ್ಜಯಿನಿ ಮಹಾಕಾಲ್ ಲೋಕ ಯೋಜನೆಯ ಅಡಿಯಲ್ಲಿ ಮಾಹಾಕಾಲ ಕಾರಿಡಾರ್‌ ನಿರ್ಮಿಸಲಾಗಿದೆ. ದೇವಾಲಯದ ಆವರಣವನ್ನು ದೊಡ್ಡದಾಗಿ ಮತ್ತು ಬಹಳ ಚೊಕ್ಕವಾಗಿ ಕಟ್ಟಲಾಗಿದೆ. ಯಾತ್ರಾರ್ಥಿಗಳಿಗೆ ಪೂಜೆ ಸಲ್ಲಿಸಲು ಸುಲಭವಾಗುವ ನಿಟ್ಟಿನಲ್ಲಿ ಕಾರಿಡಾರ್‌ನ ಮೊದಲ ಹಂತ ಉದ್ಘಾಟನೆಯಾಗಿದೆ.

2 /4

ಸಂಜೆ 7 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಅವರು 'ಮಹಾಕಲ್ ಲೋಕ' ಕಾರಿಡಾರ್‌ನ್ನು ಉದ್ಘಾಟಿಸಿದರು. ನಂತರ ಆರಾಧ್ಯ ದೈವ ಮಹಾಕಾಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

3 /4

ಕಾಶಿ ವಿಶ್ವನಾಥ ಧಾಮದಂತೆಯೇ ಮಹಾಕಾಲ್‌ ಕಾರಿಡಾರ್‌ ನಿರ್ಮಿಸಲಾಗಿದೆ. ಗಂಗಾ ಘಾಟ್‌ನಿಂದ ದೇವಾಲಯದ ಸಂಕೀರ್ಣದವರೆಗೆ ದೊಡ್ಡದಾಗಿ ಕಾರಿಡಾರ್ ನಿರ್ಮಿಸಲಾಗುತ್ತಿದ್ದು ಇಂದು ಮೊದಲ ಹಂತದ ಕಾರಿಡಾರ್‌ ನಿರ್ಮಿಸಲಾಗಿದೆ. 

4 /4

856 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಈ ಕಾರಿಡಾರ್‌ ನಿರ್ಮಾಣವಾಗಿದೆ. ನೂತನ ಆವರಣದಲ್ಲಿ 190ಕ್ಕೂ ಹೆಚ್ಚು ಶಿವನ ಪ್ರತಿಮೆಗಳನ್ನು ಕೆತ್ತಲಾಗಿದೆ. 12 ಮೀ. ಅಗಲದ ಪ್ರದೇಶವನ್ನು ಭಕ್ತರ ಓಡಾಟಕ್ಕೆ ಮೀಸಲಿಡಲಾಗಿದೆ.