ನವದೆಹಲಿ: G7 ರಾಷ್ಟ್ರಗಳ ಶೃಂಗಸಭೆಯ 2 ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹಲವು ದೇಶಗಳ ನಾಯಕರಿಗೆ ಭಾರತದ ವಿಶಿಷ್ಟ ಕಲಾ ಪರಂಪರೆ ಪರಿಚಯಿಸುವ ಸ್ಮರಣೀಯ ಉಡುಗೊರೆಗಳನ್ನು ನೀಡಿದ್ದಾರೆ. ಈ ವಿಶೇಷ ಉಡುಗೊರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್ ಅವರಿಗೆ ಪ್ರಧಾನಿ ಮೋದಿಯವರು ಮೂಂಜ್ ಬುಟ್ಟಿಗಳು ಮತ್ತು ಹತ್ತಿ ಡರ್ರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಪ್ರಧಾನಿ ಮೋದಿಯವರು ಗುಲಾಬಿ ಮೀನಕರಿ ಬ್ರೂಚ್ ಮತ್ತು ಕಫ್ಲಿಂಕ್ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಗುಲಾಬಿ ಮೀನಕರಿ ಉತ್ತರ ಪ್ರದೇಶದ ವಾರಣಾಸಿಯ GI-ಟ್ಯಾಗ್ ಮಾಡಲಾದ ಕಲಾ ಪ್ರಕಾರವಾಗಿದೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ಮೋದಿಯವರು ಕಪ್ಪು ಸುಂದರ ಮಡಿಕೆಗಳನ್ನು ಉಡುಗೊರೆಯಾಗಿ ನೀಡಿದರು. ಈ ವಿಶೇ ಕಪ್ಪು ಬಣ್ಣದ ಮಡಿಕೆಗಳನ್ನು ಉತ್ತರ ಪ್ರದೇಶದ ನಿಜಾಮಾಬಾದ್‌ನಲ್ಲಿ ತಯಾರಿಸಲಾಗುತ್ತದೆ.
ಪ್ರಧಾನಿ ಮೋದಿಯವರು ಲೋಹದಲ್ಲಿ ಸುಂದರವಾಗಿ ಕೆತ್ತನೆ ಮಾಡಿದ ಹಿತ್ತಾಳೆ ಪಾತ್ರೆಯನ್ನು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕೈಯಿಂದ ಕೆತ್ತಿದ ಹಿತ್ತಾಳೆ ಪಾತ್ರೆ ಮೊರಾದಾಬಾದ್ ಜಿಲ್ಲೆಯ ಒಂದು ಮೇರುಕೃತಿಯಾಗಿದೆ.
ಇಟಲಿಯ ಪ್ರಧಾನಿ ಮಾರಿಯೋ ದ್ರಾಘಿಯವರಿಗೆ ಪ್ರಧಾನಿ ಮೋದಿಯವರು ಮಾರ್ಬಲ್ ಇನ್ಲೇ ಟೇಬಲ್ ಟಾಪ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಪ್ರಾಚೀನ ಮತ್ತು ಮಧ್ಯಕಾಲೀನ ರೋಮನ್ ಜಗತ್ತಿನಲ್ಲಿ ಜನಪ್ರಿಯವಾಗಿರುವ ಪಿಯೆಟ್ರಾ ಡ್ಯುರಾದ ಒಂದು ರೂಪವಾಗಿದೆ.
ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಅವರಿಗೆ ಪ್ರಧಾನಿ ಮೋದಿಯವರು ನಂದಿ ಥೀಮ್ ಆಧರಿಸಿದ ಡೋಕ್ರಾ ಕಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ ಪ್ರಧಾನಿ ಮೋದಿಯವರು ರಾಮಾಯಣವನ್ನು ಆಧರಿಸಿದ ಡೋಕ್ರಾ ಕಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರಿಗೆ ಪ್ರಧಾನಿ ಮೋದಿ ಅವರು ‘ರಾಮ್ ದರ್ಬಾರ್’ಅನ್ನು ಉಡುಗೊರೆಯಾಗಿ ನೀಡಿದ್ದಾರೆ. GI-ಟ್ಯಾಗ್ ಪಡೆದಿರುವ ಮೆರುಗೆಣ್ಣೆ ಕಲಾ-ರೂಪವು ಉತ್ತರ ಪ್ರದೇಶದ ವಾರಣಾಸಿಯ ಮೂಲವನ್ನು ಹೊಂದಿದೆ.