ಪ್ರಿಯಾಂಕ ಚೋಪ್ರಾಗೆ Dress ತಂದ ಅವಾಂತರ; ಫೋಟೋ ಆಯ್ತು ವೈರಲ್

ಪ್ರಿಯಾಂಕಾ ಚೋಪ್ರಾ ಭಾನುವಾರ ರಾತ್ರಿ ನಡೆದ 77 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪತಿ ನಿಕ್ ಜೊನಸ್ ಅವರೊಂದಿಗೆ ಆಗಮಿಸಿದರು.

Jan 8, 2020, 10:44 AM IST

ನವದೆಹಲಿ: ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ತಾವು ಧರಿಸಿದ್ದ ಬಟ್ಟೆಯಿಂದ ಮುಜುಗರಕ್ಕೀಡಾಗಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಬ್ಯಾಗ್ ಬಳಸಿ ಸಣ್ಣದರಲ್ಲಿ ಪಾರಾದ ಘಟನೆ ನಡೆದಿದೆ. ಹೌದು, ಪ್ರಿಯಾಂಕಾ ಚೋಪ್ರಾ ಭಾನುವಾರ ರಾತ್ರಿ ನಡೆದ 77 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪತಿ ನಿಕ್ ಜೊನಸ್ ಅವರೊಂದಿಗೆ ಆಗಮಿಸಿದರು. ಈ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತಿದ್ದರು. ಆದರೆ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ Dress ಪ್ರಿಯಾಂಕಾ ಅವರಿಗೆ ಸಮಸ್ಯೆಯಾಯಿತು. ಬಳಿಕ ಪ್ರಿಯಾಂಕ ವಾರ್ಡ್ರೋಬ್ ಮಾಲ್‌ಫಂಕ್ಷನ್‌ನಿಂದ ತನ್ನನ್ನು ತಾನೇ ಅಪರೂಪವಾಗಿ ರಕ್ಷಿಸಿಕೊಂಡರು.
 

1/6

ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೊನಸ್ ಇಬ್ಬರೂ ಇಲ್ಲಿ ನಂತರದ ಪಾರ್ಟಿಗೆ ಹಾಜರಾಗುವ ಬದಲು ಕ್ಯಾಲಿಫೋರ್ನಿಯಾದಲ್ಲಿ ಭೋಜನ ಮಾಡಲು ನಿರ್ಧರಿಸಿದರು. ಆದರೆ ಇಲ್ಲಿ ಪ್ರಿಯಾಂಕ ತಮ್ಮ ಡ್ರೆಸ್ ಕಾರಣದಿಂದಾಗಿ ಇರುಸು-ಮುರುಸು ಅನುಭವಿಸುವಂತಾಯಿತು.

2/6

ಈ ಸಮಯದಲ್ಲಿ, ಪ್ರಿಯಾಂಕಾ ಅವರ ಕೈಯಲ್ಲಿ ಸಣ್ಣ ನೀಲಿ ಚೀಲವಿತ್ತು. ನಂತರ ಪ್ರಿಯಾಂಕಾ ಈ ಚೀಲದಿಂದ ತನ್ನನ್ನು ತಾನೇ ನಿಭಾಯಿಸಿಕೊಂಡಳು.  

3/6

ಪ್ರಿಯಾಂಕಾ ಈ ಬ್ಯಾಗ್ ಅನ್ನು ಶೀಲ್ಡ್ ರೀತಿಯಲ್ಲಿ ಬಳಸಿದರು. ಇದರಿಂದಾಗಿ ಅವರ ಡ್ರೆಸ್ ಕಾರಣದಿಂದ ಉಂಟಾಗುತ್ತಿದ್ದ ಮುಜುಗರವನ್ನು ತಪ್ಪಿಸಿಕೊಂಡರು.

4/6

ಒಂದರ್ಥದಲ್ಲಿ ಪ್ರಿಯಾಂಕ ಕೈಯಲ್ಲಿದ್ದ ಬ್ಯಾಗ್ ನಿಂದಾಗಿ ಅವರು ತಮ್ಮ ಮಾನವನ್ನು ರಕ್ಷಿಸಿಕೊಂಡರು ಎಂದೇ ಹೇಳಬಹುದು.

5/6

ಈಗ ಪ್ರಿಯಾಂಕಾ ಚೋಪ್ರಾ ಅವರ ಈ ಎಲ್ಲಾ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

6/6

ಪ್ರಿಯಾಂಕಾ ಕೊನೆಯ ಬಾರಿಗೆ ಬಾಲಿವುಡ್ ಚಿತ್ರ 'ದಿ ಸ್ಕೈ ಈಸ್ ಪಿಂಕ್' ನಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ, ಅವರು ಫರ್ಹಾನ್ ಅಖ್ತರ್ ಅವರೊಂದಿಗೆ ಕಾಣಿಸಿಕೊಂಡರು. (Photo courtesy: All photos were taken from social networking site Instagram)