Puneeth Rajkumar: ಪುನೀತ್, ಚಿರು ಸೇರಿದಂತೆ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನಗಲಿದ ನಟರು

Actors Who Left Us in their early age: ಇತ್ತೀಚಿನ ದಿನಗಳಲ್ಲಿ, ನಾವು ಬಹಳಷ್ಟು ದುರದೃಷ್ಟಕರ ಮತ್ತು ಅಕಾಲಿಕ ಮರಣಗಳನ್ನು ನೋಡಿದ್ದೇವೆ. ಇತ್ತೀಚಿಗೆ ಹಲವಾರು ಪ್ರತಿಭಾವಂತ ಮತ್ತು ಅದ್ಭುತ ಸೆಲೆಬ್ರಿಟಿಗಳನ್ನು ನಾವು ಕಳೆದುಕೊಂಡಿದ್ದೇವೆ.                      

Puneeth Rajkumar: ಚಂದನವನದ ಪವರ್ ಸ್ಟಾರ್, ಯುವರತ್ನ ಪುನೀತ್ ರಾಜ್ ಕುಮಾರ್, ಕರುನಾಡಿನ ಪ್ರೀತಿಯ ಅಪ್ಪು ಅವರ ಈ ಅಕಾಲಿಕ ಮರಣಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.  ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುತ್ತಿದ್ದ ಅಪ್ಪು ಅವರು ಈಗ ನಮ್ಮೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿರುವುದನ್ನು ನಾವು ಕೇಳಿದ್ದೇವೆ. ಆದರೆ ಸದಾ ಚಟುವಟಿಕೆಯಿಂದ ಇರುತ್ತಿದ್ದ, ಪ್ರತಿದಿನವೂ ತಮ್ಮ ವ್ಯಾಯಾಮ, ವರ್ಕ್ಔಟ್ ಮಿಸ್ ಮಾಡದ ಅಪ್ಪು ಅತಿ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿರುವುದು ಎಲ್ಲರಲ್ಲೂ ಒಂದು ರೀತಿಯ ದಿಗ್ಬ್ರಮೆಯನ್ನು ಉಂಟು ಮಾಡಿದೆ.  46 ವರ್ಷದ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ವರ್ಕ್ ಔಟ್ ಮಾಡುವಾಗ ಭಾರೀ ಹೃದಯ ಸ್ತಂಭನಕ್ಕೆ ಒಳಗಾದರು ಎಂದು ವರದಿಯಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ, ನಾವು ಬಹಳಷ್ಟು ದುರದೃಷ್ಟಕರ ಮತ್ತು ಅಕಾಲಿಕ ಮರಣಗಳನ್ನು ನೋಡಿದ್ದೇವೆ ಮತ್ತು ಹಲವಾರು ಪ್ರತಿಭಾವಂತ ಮತ್ತು ಅದ್ಭುತ ಸೆಲೆಬ್ರಿಟಿಗಳನ್ನು ಕಳೆದುಕೊಂಡಿದ್ದೇವೆ. ಕಳೆದ ವರ್ಷ ನಮ್ಮನ್ನಗಲಿದೆ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ, ಬಾಲಿವುಡ್ ನಟ ಇರ್ಫಾನ್ ಖಾನ್, ಸುಶಾಂತ್ ಸಿಂಗ್ ರಜಪೂತ್ ಹಾಗೂ ಇತ್ತೀಚಿಗಷ್ಟೇ ವಿಧಿವಶರಾದ ಹಿಂದಿ ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ಮರಣದ ವರದಿಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.  

2 /5

ಕಳೆದ ವರ್ಷ 2020ರ ಜೂನ್ 7 ರಂದು ಸ್ಯಾಂಡಲ್ ವುಡ್ ಖ್ಯಾತ ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರು ಹೃದಯಾಘಾತದಿಂದ ಮರಣ ಹೊಂದಿದರು. ಚಿರು ಕಳೆದುಕೊಂಡ ದುಃಖವನ್ನು ಕರುನಾಡು ಇನ್ನೂ ಮರೆತಿಲ್ಲ. ಜೂನ್ 7, 2020 ರಂದು ಮಧ್ಯಾಹ್ನದ ಹೊತ್ತಿವೆ ನಟನಿಗೆ ಭಾರಿ ಹೃದಯ ಸ್ತಂಭನವಾಯಿತು. ನೋಡು ನೋಡುತ್ತಿದ್ದಂತೆ ಚಿರಂಜೀವಿ ನಮ್ಮನ್ನಗಲಿದ್ದಾರೆ ಎಂಬ ಸುದ್ದಿ ಆಘಾತವನ್ನು ಉಂಟು ಮಾಡಿತು. ಚಿರಂಜೀವಿ ಸರ್ಜಾ ನಿಧನರಾದಾಗ ಅವರಿಗೆ 35 ವರ್ಷ.

3 /5

ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ನಟ, ಇರ್ಫಾನ್ ಖಾನ್ (Irrfan Khan) ತಮ್ಮ 53 ನೇ ವಯಸ್ಸಿನಲ್ಲಿ ಏಪ್ರಿಲ್ 29, 2020 ರಂದು ಅಕಾಲಿಕವಾಗಿ ನಿಧನರಾದರು. ವಾಸ್ತವವಾಗಿ, ಇರ್ಫಾನ್‌ಗೆ 2018 ರಲ್ಲಿ ನ್ಯೂರೋಎಂಡೋಕ್ರೈನ್ ಟ್ಯೂಮರ್ ಇರುವುದು ಪತ್ತೆಯಾಯಿತು ಮತ್ತು 2020 ರಲ್ಲಿ ಕೊಲೊನ್ ಸೋಂಕಿನಿಂದ ಅವರು ಇಹಲೋಕ ತ್ಯಜಿಸಿದರು. ಇದನ್ನೂ ಓದಿ- Puneeth Rajkumar: ಅತಿಯಾದ ‘ವರ್ಕೌಟ್’ ಅಪ್ಪು ಜೀವಕ್ಕೆ ಮಾರಕವಾಯ್ತಾ..?

4 /5

ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಜೂನ್ 14, 2020 ರಂದು 34 ವರ್ಷದ ಈ ಪ್ರತಿಭಾವಂತ ನಟನ ಸಾವಿನ ಬಗ್ಗೆ ತಿಳಿದು ಭಾರತೀಯ ಚಲನಚಿತ್ರೋದ್ಯಮವು ಆಘಾತಕ್ಕೊಳಗಾಯಿತು. ವರದಿಯ ಪ್ರಕಾರ ಇದು ಆತ್ಮಹತ್ಯೆಯಿಂದ ಸಾವು, ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ಅವರ ದೇಹವು ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವು ರಾಷ್ಟ್ರದಾದ್ಯಂತ ಆಘಾತ ತರಂಗಗಳನ್ನು ಸೃಷ್ಟಿಸಿತು. ಇದನ್ನೂ ಓದಿ- Puneeth Rajkumar: OTT ವೇದಿಕೆಗಳಲ್ಲಿ ಬ್ರ್ಯಾಂಡ್ ಆಗಿದ್ದ ಪುನೀತ್ ರಾಜಕುಮಾರ್

5 /5

ಕಳೆದ ತಿಂಗಳು ಸೆಪ್ಟೆಂಬರ್ 2, 2021 ರಂದು ಬೆಳಿಗ್ಗೆ  ಸಿದ್ಧಾರ್ಥ್ ಶುಕ್ಲಾ (Siddharth Shukla) ಅವರ ಅಕಾಲಿಕ ಮರಣದ ವರದಿಗಳು ರಾಷ್ಟ್ರವನ್ನು ಬೆಚ್ಚಿಬೀಳಿಸಿತು. ಹಿಂದಿ ಬಿಗ್ ಬಾಸ್ 13 ರ ವಿಜೇತರಾಗಿ ಖ್ಯಾತಿ ಪಡೆದಿದ್ದ ಸಿದ್ಧಾರ್ಥ್ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ನಿಧನರಾದಾಗ ನಟನಿಗೆ 40 ವರ್ಷ.