ರಣಬೀರ್-ಆಲಿಯಾ ಮದುವೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಳು ಈ ಸುಂದರಿ..!

ಆಲಿಯಾರ ಬೆಸ್ಟ್ ಫ್ರೆಂಡ್ ಆಕಾಂಕ್ಷಾ ರಂಜನ್ ಕಪೂರ್ ಅವರು ಮೆಹಂದಿ ಕಾರ್ಯಕ್ರಮದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆಯ ಕಲರ್‍ಫುಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆಲಿಯಾರ ಬೆಸ್ಟ್ ಫ್ರೆಂಡ್ ಆಕಾಂಕ್ಷಾ ರಂಜನ್ ಕಪೂರ್ ಅವರು ಮೆಹಂದಿ ಕಾರ್ಯಕ್ರಮದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಫೋಟೋಗಳನ್ನು Instagramನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಾಲಿವುಡ್ ತಾರೆ ಆಲಿಯಾ ಭಟ್ ಅವರ ಆತ್ಮೀಯ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಇತ್ತೀಚೆಗೆ ತಮ್ಮ ಸ್ನೇಹಿತೆಯ ಮೆಹಂದಿ ಸಮಾರಂಭದ ಇತ್ತೀಚಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ನಟಿ ಆಕಾಂಕ್ಷಾ ತನ್ನ ಸ್ನೇಹಿತೆ ಆಲಿಯಾ ಭಟ್ ಅವರ ಮೆಹಂದಿ ಸಮಾರಂಭದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು.

2 /5

ಈ ವೇಳೆ ಆಕಾಂಕ್ಷಾ ರಂಜನ್ ಹಳದಿ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಈ ವೇಳೆ ಆಕಾಂಕ್ಷಾ ತುಂಬಾ ಸ್ಟೈಲಿಶ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದರು. ಈ ಚಿತ್ರದಲ್ಲಿ ನೀವು ಕರಣ್ ಜೋಹರ್ ಜೊತೆ ಆಕಾಂಕ್ಷಾ ಅವರನ್ನು ನೋಡಬಹುದು. ಕರಣ್ ಜೋಹರ್ ಜೊತೆ ಡ್ಯಾನ್ಸ್ ಮಾಡುವಾಗಲೂ ಆಕಾಂಕ್ಷಾ ರಂಜನ್ ಕಪೂರ್ ತುಂಬಾ ಅಳುತ್ತಿದ್ದರು.

3 /5

ಈ ಸಂದರ್ಭದಲ್ಲಿ ಆಲಿಯಾ ಭಟ್ ತನ್ನ ಸ್ನೇಹಿತೆಗೆ ಸಮಾಧಾನ ಹೇಳಿ ಸಮಾಧಾನಪಡಿಸಿದ್ದಾರೆ. ಈ ಚಿತ್ರಗಳು ಆಲಿಯಾ ಭಟ್ ಅವರ ಮೆಹಂದಿ ಸಮಾರಂಭದ್ದಾಗಿವೆ. ನಟಿ ಆಕಾಂಕ್ಷಾ ರಂಜನ್ ಕಪೂರ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗರುವ ಈ ಚಿತ್ರಗಳು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ.

4 /5

ರಣಬೀರ್ ಮತ್ತು ಆಲಿಯಾ ಮದುವೆ ಸಮಾರಂಭದಲ್ಲಿ ಆಕಾಂಕ್ಷಾ ರಂಜನ್ ಕಪೂರ್ ಬಿಕ್ಕಿ ಬಿಕ್ಕಿ ಅತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆಲಿಯಾ ಭಟ್ ಗೆಳತಿ ಇಷ್ಟೊಂದು ಭಾವುಕಳಾದದ್ದು ಯಾಕೆ ಎಂದು ಈ ಚಿತ್ರಗಳನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.  

5 /5

ಆಲಿಯಾ ಭಟ್ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಕೂಡ ರಣಬೀರ್- ಆಲಿಯಾ ಮದುವೆಯಲ್ಲಿ ಸಾಕಷ್ಟು ನೃತ್ಯ ಮಾಡಿ ಮೋಜು-ಮಸ್ತಿ ಮಾಡಿದ್ದಾರೆ. ಮದುವೆಯ ಈ ಚಿತ್ರಗಳನ್ನು ಆಕಾಂಕ್ಷಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಡೆ ಅತ್ತಿರುವ ಫೋಟೋಗಳು ಇನ್ನೊಂದು ಕಡೆ ನೃತ್ಯ ಮಾಡಿ ಖುಷಿಯಿಂದಿರುವ ಫೋಟೋಗಳನ್ನು ನೋಡಿ ನೆಟಿಜನ್‍ಗಳು ಕನ್ಫೂಸ್ ಆಗಿದ್ದಾರೆ.