Rangayana Raghu Wife and daughter: ನಟ ರಂಗಾಯಣ ರಘು ಅವರಷ್ಟೇ ಪತ್ನಿ ಮತ್ತು ಮಗಳು ಕೂಡ ಖ್ಯಾತಿ ಪಡೆದಿದ್ದಾರೆ.
1/5ಸ್ಯಾಂಡಲ್‌ವುಡ್ ಹಾಸ್ಯ ನಟ ರಂಗಾಯಣ ರಘು ಅವರ ನಟನೆ ಮೆಚ್ಚದವರಿಲ್ಲ. ರಂಗಾಯಣ ರಘು ನಿಜವಾದ ಹೆಸರು ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಅಲಿಯಾಸ್ ಕೆ.ಸಿ.ರಘುನಾಥ್.
2/5ರಂಗಾಯಣದಲ್ಲಿ ಸೇರಿಕೊಂಡ ಬಳಿಕ ಇವರ ಹೆಸರು ರಂಗಾಯಣ ರಘು ಎಂದೇ ಖ್ಯಾತಿ ಪಡೆಯಿತು. ರಂಗಾಯಣ ರಘು ಪೋಷಕ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
3/5ನಟ ರಂಗಾಯಣ ರಘು ಪತ್ನಿ ಮಂಗಳ. ಇವರೂ ಕೂಡ ರಂಗಭೂಮಿ ಕಲಾವಿದೆ ಮತ್ತು ನಟಿ. ರಘು ಮತ್ತು ಮಂಗಳ ಪ್ರೀತಿಸಿ ಮದುವೆಯಾದವರು.
4/5ನಟಿ ಮಂಗಳ ಅವರು ಸಂಚಾರಿ ಥಿಯೇಟರ್ ಕೂಡಾ ನಡೆಸುತ್ತಾರೆ. ರಂಗಾಯಣ ರಘು ಪತ್ನಿ ಮಂಗಳ ನಾಟಕಗಳಲ್ಲಿ ನಟಿಸಿ ಥೇಯೆಟರ್ ಆರ್ಟಿಸ್ಟ್ ಆಗಿ ಖ್ಯಾತಿ ಪಡೆದಿದ್ದಾರೆ. ನಾಟಕ ಆಯೋಜಿಸಿ ಖುದ್ದು ತಾವೇ ನಿರ್ದೇಶನ ಕೂಡಾ ಮಾಡುತ್ತಾರೆ.
5/5ನಟ ರಂಗಾಯಣ ರಘು ಪುತ್ರಿ ಚುಕ್ಕಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಟಕಗಳನ್ನು ನಿರ್ದೇಶಿಸುತ್ತಾರೆ. ಥೇಯೆಟರ್ ಆರ್ಟಿಸ್ಟ್ ಆಗಿ ಖ್ಯಾತಿ ಪಡೆದಿದ್ದಾರೆ.