ದೇಶದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಕಾಣಸಿಗುವ ಈ ಮಿಂಚುಹುಳುಗಳು ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪರಂಬಿಕುಲಂ ಮತ್ತು ನೆಲ್ಲಿಯಂಪತಿಯ ಕೆಲವು ಸ್ಥಳಗಳಲ್ಲಿ ಹೆಚ್ಚಾಗಿವೆ.
ಐಎಫ್‌ಎಸ್ ಅಧಿಕಾರಿ ರಾಮಸುಬ್ರಮಣ್ಯಂ ಅವರ ನಿರ್ದೇಶನದಲ್ಲಿ ಉಪನಿರ್ದೇಶಕರಾದ ಎಂ.ಜಿ.ಗಣೇಶನ್, ಸಾಫ್ಟ್‌ವೇರ್ ಇಂಜಿನಿಯರ್ ಶ್ರೀರಾಮ್ ಮುರಳಿ ಎಂಬವರು ಮಿಂಚುಹುಳುಗಳ ದೊಡ್ಡ ಗುಂಪನ್ನು ನೋಡಲೆಂದು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಈ ಅದ್ಭುತ ಕಣ್ಣಿಗೆ ಬಿದ್ದಿದೆ. ಈ ರೀತಿಯ ಚಿತ್ರ ಹಾಲಿವುಡ್‌ನ ಅವತಾರ್ ಎಂಬ ಸಿನಿಮಾದಲ್ಲಿ ಕಂಡುಬಂದಿತ್ತು. ಅಲ್ಲಿ ಕಾಲ್ಪನಿಕವಾಗಿದ್ದ ಚಿತ್ರ, ಇಲ್ಲಿ ನೈಜತೆಯಲ್ಲಿ ಮೂಡಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ರಾತ್ರಿ ವೇಳೆ ಮಿನುಗುವ ಮಿಂಚುಹುಳುಗಳು ಕಾಡನ್ನು ಫ್ಯಾಂಟಸಿ ಪಾರ್ಕ್ ತರ ಮಾಡಿದೆ.
ಈ ಅಪರೂಪದ ದೃಶ್ಯ ಕಂಡುಬಂದಿದ್ದು, ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ. ಮರಗಳ ಮೇಲೆ ಕುಳಿತಿರುವ ಗಂಡು ಮಿಂಚುಹುಳುಗಳು ಸಂಭಾವ್ಯ ಸಂಗಾತಿಗಳನ್ನು ಹುಡುಕಲು ಈ ಬೆಳಕಿನ ಪ್ರದರ್ಶನಗಳನ್ನು ಮಾಡುತ್ತವೆ ಎಂಬುದು ಅಧ್ಯಯನದ ಮೂಲಕ ತಿಳಿದುಬಂದಿದೆ.
ಜಗತ್ತಿನಲ್ಲಿ 2,000ಕ್ಕೂ ಹೆಚ್ಚು ಜಾತಿಯ ಮಿಂಚುಹುಳುಗಳಿವೆ. ಎಟಿಆರ್‌ನಲ್ಲಿ ಕಂಡುಬರುವ ಮಿಂಚುಹುಳುಗಳು ಅಬ್ಸ್‌ಕಾಂಡಿಟಾ ಜಾತಿಗೆ ಸೇರಿದವಾಗಿವೆ. ಇವು ಹೊಸ ಜಾತಿಯಾಗಿರಬಹುದು ಎಂದು ಸಹ ವಿಜ್ಞಾನಿಗಳು ಹೇಳುತ್ತಾರೆ. ಇವುಗಳನ್ನು ಸರಿಯಾಗಿ ಗುರುತಿಸಲು ವಿವರವಾದ ಸಂಶೋಧನೆ ಮತ್ತು ಡಿಎನ್ಎ ಅನುಕ್ರಮದ ಅಗತ್ಯವಿದೆ.
ಐಎಫ್‌ಎಸ್ ಅಧಿಕಾರಿ ರಾಮಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಉಪನಿರ್ದೇಶಕರಾದ ಎಂ.ಜಿ.ಗಣೇಶನ್, ಅರಣ್ಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಸಂರಕ್ಷಣಾ ತಜ್ಞರ ತಂಡವು ಈ ಮಿಂಚುಹುಳುಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಹೊರಟಿದ್ದ ಸಂದರ್ಭದಲ್ಲಿ ಈ ದೃಶ್ಯ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ದೇಶದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಕಾಣಸಿಗುವ ಈ ಮಿಂಚುಹುಳುಗಳು ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪರಂಬಿಕುಲಂ ಮತ್ತು ನೆಲ್ಲಿಯಂಪತಿಯ ಕೆಲವು ಸ್ಥಳಗಳಲ್ಲಿ ಹೆಚ್ಚಾಗಿವೆ.