ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಡೆಯಲಿದೆ ಭಾರತೀಯ ಸೇನೆಯ ಶಕ್ತಿ ಪ್ರದರ್ಶನ

ಜನವರಿ 26 ರಂದು, ಅಂದರೆ ನಾಳೆ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ಈ ಪರೇಡ್‌ನಲ್ಲಿ ಭಾರತೀಯ ಸೇನೆಯ ಶಕ್ತಿಯ ಪ್ರದರ್ಶನವಾಗಲಿದೆ.

ಬೆಂಗಳೂರು : ಜನವರಿ 26 ರಂದು, ಅಂದರೆ ನಾಳೆ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ಈ ಪರೇಡ್‌ನಲ್ಲಿ ಭಾರತೀಯ ಸೇನೆಯ ಶಕ್ತಿಯ ಪ್ರದರ್ಶನವಾಗಲಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ಕೂಡಾ ಬಹಳ ವಿಶೇಷವಾಗಿರಲಿದೆ. ಈ ಬಾರಿಯ ಪರೇಡ್‌ನಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದಡಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೆ ಒತ್ತು ನೀಡಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಭಾರತೀಯ ಸೇನೆಯ ಹೇಳಿಕೆಯ ಪ್ರಕಾರ, ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಪ್ರದರ್ಶಿಸಲಾಗುವುದು. ಈ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.  

2 /5

DRDO ಪ್ರಕಾರ, ಅರ್ಜುನ್ ಟ್ಯಾಂಕ್ ಅತ್ಯಾಧುನಿಕ ಟ್ಯಾಂಕ್ ಆಗಿದೆ. MBT ಅರ್ಜುನ್‌ನ ಹನ್ನೆರಡು Mk 1 ಮಾದರಿಗಳನ್ನು ನಿರ್ಮಿಸಲಾಗಿದೆ. ಇದು 120 ಎಂಎಂ ಗನ್ ಅನ್ನು ಹೊಂದಿದ್ದು, ಟ್ಯಾಂಕ್‌ನಲ್ಲಿ ಬಳಸುವ  ರಕ್ಷಾ ಕವಚವನ್ನು ಹೊಡೆದುರುಳಿಸುತ್ತದೆ. 

3 /5

ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ನಾಗ ಮಿಸೈಲ್ ಸಿಸ್ಟಮ್ ಈ ಬಾರಿ ಕರ್ತವ್ಯ ಪಥದಲ್ಲಿ ಸಾಗಲಿದೆ. ಇದರ ವಿಶೇಷತೆಯೆಂದರೆ ಇದನ್ನು BMP 2ಕ್ಯಾರಿಯರ್ ನಲ್ಲಿ ಅಳವಡಿಸಲಾಗಿದೆ. ಇದು ಫೈರ್ ಅಂಡ್ ಫರ್ಗೆಟ್ ಟಾಪ್ ಟೆಕ್ನಿಕ್ ಅನ್ನು ಆಧರಿಸಿದೆ. 4 ಕಿಲೋಮೀಟರ್ ಪರಿದಿಯಲ್ಲಿರುವ ಟ್ಯಾಂಕ್‌ಗಳನ್ನು ಸ್ಫೋಟಿಸುವುದು ಇದಕ್ಕೆ ಸಾಧ್ಯ. 

4 /5

ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನ ಕರ್ತವ್ಯ ಪಥದಲ್ಲಿ ಕೆ9 ವಜ್ರವೂ ರಾರಾಜಿಸಲಿದೆ. K-9 ನ ಫೈರ್‌ಪವರ್ ಅತ್ಯದ್ಭುತವಾಗಿದೆ. ದಾಳಿಯ ನಂತರ ತಕ್ಷಣವೇ ತನ್ನ ಸ್ಥಳವನ್ನು ಬದಲಾಯಿಸುತ್ತದೆ. ಈ ಕಾರಣಕ್ಕಾಗಿ, ಇದು ಶತ್ರುಗಳ ಪ್ರತೀಕಾರದಿಂದ ತಪ್ಪಿಸಿಕೊಳ್ಳುತ್ತದೆ. ಕೆ-9 ವಜ್ರವು 40 ಮೀಟರ್ ದೂರದಲ್ಲಿದಲ್ಲಿರುವ ಶತ್ರುಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ.

5 /5

ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪರೇಡ್‌ನಲ್ಲಿ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಕಾಣಿಸಿಕೊಳ್ಳಲಿದೆ. ಇದು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ DRDO ಮತ್ತು ಭಾರತ್ ಡೈನಾಮಿಕ್ಸ್ ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ.