ಶಬರಿಮಲೆ ಸಧ್ಯದ ಪರಿಸ್ಥಿತಿ ಹೇಗಿದೆ..? ಎಲ್ಲಿ ನೋಡಿದರೂ ಅಯ್ಯಪ್ಪ ಭಕ್ತಸಾಗರ.. ಫೋಟೋಸ್‌ ಇಲ್ಲಿವೆ..

Sabarimala news : ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರತಿವರ್ಷಕ್ಕಿಂತ ಈ ವರ್ಷ ಅಯ್ಯಪ್ಪ ಮಾಲಾಧಾರಿಗಳು ಹೆಚ್ಚಾಗಿ ಸ್ವಾಮಿಯ ದರ್ಶನಕ್ಕೆ ಬಂದಿದ್ದಾರೆ. ಅಲ್ಲದೆ, ಆಡಳಿತ ಮಂಡಳಿಯ ಕೆಲವು ಬದಲಾವಣೆಯಿಂದಾಗಿ ಮಾಲಾಧಾರಿಗಳು ಕಷ್ಟ ಪಡುವಂತಾಗಿದೆ.. ಇಂದಿನ ಭಕ್ತಸಾಗಾರದ ಈ ಚಿತ್ರಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತದೆ. 

1 /7

ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಹರಿವು ಮುಂದುವರಿದಿದೆ. ಇಂದು ರಜಾ ದಿನವಾದ ಕಾರಣ 90,000 ಜನರು ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಿದ್ದಾರೆ.  

2 /7

ಇಂದು 1 ರಿಂದ 6:30 ರವರೆಗೆ 21,000 ಭಕ್ತರು 18 ಮೆಟ್ಟಿಲು ಹತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ನಿನ್ನೆ ರಾತ್ರಿ 12 ಗಂಟೆಯವರೆಗೆ 84,793 ಮಂದಿ 18ನೇ ಮೆಟ್ಟಿಲು ಏರಿದ್ದರು.    

3 /7

ಪಂಪಾ ಜನಜಂಗುಳಿಯಾಗುತ್ತಿದ್ದಂತೆ ಸತ್ರಂ-ಪುಲ್ಲುಮೇಡು ಕಾನನಪಥದ ಮೂಲಕ ಸನ್ನಿಧಾನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿದೆ. ಶಬರಿಮಲೆ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ.    

4 /7

ಮಂಡಲ ಅವಧಿ ಆರಂಭವಾದ 28 ದಿನಗಳ ನಂತರದ ಒಟ್ಟು ಆದಾಯ ಕಳೆದ ವರ್ಷಕ್ಕಿಂತ 20 ಕೋಟಿ ಕಡಿಮೆಯಾಗಿದೆ ಎಂದು ದೇವಸ್ವಂ ಮಂಡಳಿ ಅಂದಾಜಿಸಿದೆ.     

5 /7

ಡಿಸೆಂಬರ್ 7 ರಿಂದ 11 ರವರೆಗೆ ಪಂಪಾ ಮೂಲಕ ಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು.    

6 /7

ಪ್ರವಾಹದಿಂದಾಗಿ ಈ ಬಾರಿ ತಮಿಳುನಾಡಿನ ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.     

7 /7

ಮಂಡಲ ಅವಧಿಯ ಆರಂಭದಲ್ಲಿ ಶಬರಿಮಲೆಯಲ್ಲಿ ಜನಸಂದಣಿ ಕಡಿಮೆ ಇತ್ತು.  ಕಳೆದೊಂದು ವಾರದಿಂದ ಶಬರಿಮಲೆಗೆ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.