ಒಂದೇ ದಿನದಲ್ಲಿ ಬಿಡುಗಡೆಯಾದ 'Sadak-2' ಚಿತ್ರದ ಮೂರು ಜಬರ್ದಸ್ತ್ ಪೋಸ್ಟರ್ ಗಳು

ಈ ಚಿತ್ರದಲ್ಲಿರುವ ಮೂವರು ಸ್ಟಾರ್ ಗಳ ಲುಕ್ ಭಾರಿ ಕಡಕ್ ಆಗಿ ಮೂಡಿಬಂದಿವೆ.

  • Aug 10, 2020, 17:27 PM IST

ನವದೆಹಲಿ: ಬಹುನಿರೀಕ್ಷಿತ ಚಿತ್ರ ಸಡಕ್-2'ರ ಆವೃತ್ತಿಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇಂದು ವಿಶೇಷ ದಿನವಾಗಿದೆ. ಚಿತ್ರ ನಿರ್ಮಾಪಕರು ಈ ಚಿತ್ರದ ಮೂರು ಹೊಸ ಪೋಸ್ಟರ್‌ಗಳನ್ನು ಒಟ್ಟಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರದ ಮೂರೂ ಪ್ರಮುಖ ಪಾತ್ರಗಳು ಈ ಪೋಸ್ಟರ್‌ಗಳಲ್ಲಿ ಕಂಡು ಬಂದಿದ್ದಾರೆ. ಚಿತ್ರದಲ್ಲಿನ ಆಲಿಯಾ ಭಟ್ (Alia Bhatt), ಸಂಜಯ್ ದತ್  (Sanjay Dutt), ಆದಿತ್ಯ ರಾಯ್ ಕಪೂರ್ (Aditya Roy Kapur) ಪಾತ್ರಗಳ ಈ ಪೋಸ್ಟರ್‌ಗಳು ಬಿಡುಗಡೆಯಾಗುತ್ತಲೇ  ಭಾರಿ ವೈರಲ್ ಆಗಿವೆ. ಚಿತ್ರದ ಮೂವರು ತಾರೆಯರ ಲುಕ್ ಭಾರಿ ಆಕರ್ಷಕವಾಗಿ ಮೂಡಿಬಂದಿವೆ.

1 /5

ಚಿತ್ರ ನಿರ್ಮಾಪಕರು ಈ ಚಿತ್ರದ ಬಿಡುಗಡೆಗೆ ತುದಿಗಾಲಲ್ಲಿ ಕಾಯುತ್ತಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. 

2 /5

ಬಿಡುಗಡೆಯಾಗಿರುವ ಈ ಪೋಸ್ಟರ್ ಗಳಲ್ಲಿ ಆದಿತ್ಯ ರಾಯ್ ಕಪೂರ್ ತುಂಬಾ ಕೂಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

3 /5

ತಮ್ಮ ಕೈಯಲ್ಲಿ ಮಣ್ಣಿನ ಮಡಿಕೆಯೊಂದನ್ನು ಹಿಡಿದು ಸಂಜಯ್ ದತ್ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಅವರೊಂದು ತಾಂತ್ರಿಕನಂತೆ ಕಂಗೊಳಿಸುತ್ತಿದ್ದಾರೆ.

4 /5

ಚಿತ್ರದಲ್ಲಿ ಆಲಿಯಾ ಅವರ ಪಾತ್ರ ತುಂಬಾ ಸಿಂಪಲ್ ಹಾಗೂ ಮೆಚ್ಯೋರ್ ಆಗಿರುವುದ್ ಕಂಡುಬರುತ್ತಿದೆ.

5 /5

ಚಿತ್ರದಲ್ಲಿ ಇದೀಗ ಪೂಜಾ ಭಟ್ ಅವರ ಲುಕ್ ಹೊರಬೀಳುವುದು ಮಾತ್ರ ಬಾಕಿ ಉಳಿದಿದೆ.