Salman Khan Statement about his marriage: ಸದ್ಯ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ವಿಚಾರ ಬಿಸಿಬಿಸಿ ಸುದ್ದಿಯಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಹಲವಾರು ಬಾರಿ ಬೆದರಿಕೆ ಹಾಕಿದ್ದರು,. ಅಷ್ಟೇ ಅಲ್ಲದೆ, ಇತ್ತೀಚೆಗೆ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗೈದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸದ್ಯ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ವಿಚಾರ ಬಿಸಿಬಿಸಿ ಸುದ್ದಿಯಾಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ. ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಹಲವಾರು ಬಾರಿ ಬೆದರಿಕೆ ಹಾಕಿದ್ದರು,. ಅಷ್ಟೇ ಅಲ್ಲದೆ, ಇತ್ತೀಚೆಗೆ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗೈದಿದ್ದರು.
ಇಂದು ಸಲ್ಮಾನ್ ಮತ್ತು ಅವರ ಇಡೀ ಕುಟುಂಬ ತಮ್ಮ ಭದ್ರತೆಯ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಸಲ್ಮಾನ್ ಖಾನ್ ತಮ್ಮ ಮದುವೆ ಮತ್ತು ಬ್ರೇಕಪ್ಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದರಂತೆ. ಸಲ್ಮಾನ್ ಐಶ್ವರ್ಯಾ ರೈ ಮತ್ತು ಸೋಮಿ ಅಲಿಯಿಂದ ಕತ್ರಿನಾ ಕೈಫ್ ಮತ್ತು ಸಂಗೀತಾ ಬಿಜ್ಲಾನಿಯವರೆಗೆ ಅನೇಕರ ಜೊತೆ ಡೇಟಿಂಗ್ ಮಾಡಿದ್ದರು. ಆದರೆ ಯಾವುದೇ ಸಂಬಂಧಗಳು ಮದುವೆಯ ರೂಪವನ್ನು ಪಡೆಯಲು ಸಾಧ್ಯವಾಗಲಿಲ್ಲ.
ವಯಸ್ಸು 58 ಆದರೂ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ. ಅಷ್ಟಕ್ಕೂ ಹೀಗೆ ಮದುವೆಯಾಗದಿರಲು ಕಾರಣ ಏನೆಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಸಲ್ಮಾನ್ ಖಾನ್ ಕೆಲವು ವರ್ಷಗಳ ಹಿಂದೆ 'ಆಪ್ ಕಿ ಅದಾಲತ್'ಗೆ ಹೋಗಿದ್ದರು. ಆ ಶೋನಲ್ಲಿ, ಸಲ್ಮಾನ್ ಬ್ರೇಕಪ್ ಮತ್ತು ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ಹೇಳಿದ್ದರು, 'ಮೊದಲನೆಯವಳು ದೂರವಾದಾಗ ಅವಳ ತಪ್ಪಿರಬಹುದು ಎಂದನಿಸುತ್ತದೆ, ಮತ್ತೆ ಎರಡನೇಯವರಳು, ಮೂರನೆಯವಳು ಹೀಗೆ ಬಿಟ್ಟು ಹೋದಾಗಲು ಅವರದ್ದೇ ತಪ್ಪಿರಬಹುದು ಎಂದನಿಸುತ್ತದೆ. ಆದರೆ ನಾಲ್ಕನೇ ಸಂಬಂಧ ಕೂಡ ಮುರಿದಾಗ, ನನ್ನ ತಪ್ಪೋ? ಅವಳ ತಪ್ಪೋ ಎಂಬ ಅನುಮಾನ ಕಾಡುತ್ತದೆ. ಬಹುಶಃ ಆಕೆ ಬಯಸಿದ ಜೀವನ ಅಥವಾ ಸಂತೋಷವನ್ನು ನಾನು ಅವಳಿಗೆ ನೀಡಲಾರೆ ಎಂಬ ಭಯ ನನ್ನದು" ಎಂದಿದ್ದಾರೆ.
ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ ಅವರ ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿತ್ತು. ಆದರೆ ಕಾರಣಾಂತರಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು. ಈ ಬಗ್ಗೆ ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಸಲ್ಮಾನ್ ಹೇಳಿದ್ದರು ಎನ್ನಲಾಗಿದೆ.
ಯಾಕೆ ಮದುವೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಲ್ಮಾನ್, ಈಗ ಮದುವೆಯಾಗುವ ಸಮಯವಲ್ಲ ಎಂದು ಹೇಳಿದ್ದರು. ಆದರೆ, ಅವರು ಮದುವೆಯಾಗುವ ಸಮಯ ಖಂಡಿತವಾಗಿಯೂ ಇತ್ತು. ಸಲ್ಮಾನ್ ಪ್ರಕಾರ, ತನ್ನ ಸಂಗಾತಿಯನ್ನು ಸಂತೋಷವಾಗಿಡಲು ಸಾಧ್ಯವಿಲ್ಲ ಎಂದು ಅವರಲ್ಲಿ ಭಯ ಕಾಡುತ್ತಿದೆಯಂತೆ.
ಇನ್ನು ಕೆಲವು ವರ್ಷಗಳ ಹಿಂದೆ ಶಾರುಖ್ ಖಾನ್ ಅವರು ಸಲ್ಮಾನ್ ಖಾನ್ ಬಳಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದರು. ಸ್ಟಾರ್ ಸ್ಕ್ರೀನ್ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್, ಶಾರುಖ್ ಪ್ರಶ್ನೆಗೆ ಶಾಕಿಂಗ್ ಉತ್ತರ ಕೊಟ್ಟಿದ್ದರು.
"ಸೀಕ್ರೆಟ್ ಏನೆಂದರೆ ನನ್ನ ಮದುವೆ ಆಗಿದೆ" ಎಂದು ದಬಾಂಗ್ ನಟ ಹೇಳುತ್ತಿದ್ದಂತೆ ಶಾರುಖ್ ಖಾನ್ ಸೇರಿ ನೆರೆದಿದ್ದ ಸೆಲೆಬ್ರಿಟಿಗಳು ಅಚ್ಚರಿಗೊಂಡಿದ್ದರು.
ಮಾತು ಮುಂದುವರಿಸಿದ ಸಲ್ಮಾನ್ ಖಾನ್, "ನನ್ನ ಮದುವೆ ಬಗ್ಗೆ ಕೇಳುವವರಿಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ. ನನ್ನ ಮದುವೆಯ ಪ್ಲಾನಿಂಗ್ ಬಗ್ಗೆ ಸುಳ್ಳು ಹೇಳಿ ಸಾಕಾಗಿದೆ" ಎಂದಿದ್ದಾರೆ. ಅದಕ್ಕೆ ಶಾರುಖ್ ಖಾನ್ ಪ್ರತಿಕ್ರಿಯಿಸಿ ನೀವು ಎಲ್ಲಿ ಮದುವೆಯಾಗಿದ್ದು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ "ನಾವು ಮದುವೆಯಾಗಿ ಸ್ವಲ್ಪ ಸಮಯವಾಯಿತು. ಈ ಸತ್ಯವನ್ನು ಜಗತ್ತಿನಿಂದ ಮುಚ್ಚಿಟ್ಟಿದ್ದೆ. ಆದರೆ ಈ ಸತ್ಯ ಹೊರಗೆ ಬಂದಿದೆ" ಎಂದಿದ್ದಾರೆ.
ಈ ಮದುವೆ ಬಗ್ಗೆ ಮತ್ತಷ್ಟು ಹೇಳುವಂತೆ ಶಾರುಖ್ ಖಾನ್ ಒತ್ತಾಯಿಸಿದಾಗ, "ಈ ಮದುವೆ ಆಗಿದ್ದು ಕನಸಿನಲ್ಲಿ" ಎಂದು ಸಲ್ಲು ಹೇಳಿದ್ದಾರೆ. ಸಲ್ಮಾನ್ ಖಾನ್ ಕೊಟ್ಟ ಉತ್ತರದಿಂದ ಎಲ್ಲರೂ ನಗುವಿನಲ್ಲಿ ಮುಳುಗುತ್ತಾರೆ. ಇನ್ನು ಕನಸಿನಲ್ಲಿ ನೀವು ಯಾರನ್ನು ಮದುವೆಯಾದಿರಿ ಎಂದು ಶಾರುಖ್ ಕೇಳಿದಾಗ, "ಯಾರೇ ಹುಡುಗಿ ನನ್ನ ಕನಸಿಗೆ ಬಂದರೂ ನನಗೆ ಭಯವಾಗಿ ತಕ್ಷಣ ಎಚ್ಚರವಾಗುತ್ತದೆ. ಹಾಗಾಗಿ ನಾನು ಯಾವ ಹುಡುಗಿ ಎಂದು ನೋಡಲಿಲ್ಲ" ಎಂದಿದ್ದಾರೆ.