Actress Swathi Gurudutt: ಖ್ಯಾತ ಸ್ಯಾಂಡಲ್‌ವುಡ್‌ ತಾರೆಯ ಸೊಸೆ.. ಸಂತೂರ್ ಮಮ್ಮಿ, ನಟಿ ಸ್ವಾತಿ ನಿಜಕ್ಕೂ ಯಾರು ಗೊತ್ತೇ?

Swathi Gurudutt Real Life: ಕನ್ನಡಿಗರಿಗೆ ಕನ್ನಡ ಸಿನಿಮಾ ನೋಡುವವರಿಗೆ ನಟಿ ಪಂಡರಿಬಾಯಿ ಯಾರು ಎಂದು ಗೊತ್ತಿರದೇ ಇರುವುದು ಅಸಾಧ್ಯ.. ಕನ್ನಡ ಸಿನಿರಂಗ ಬೆಳೆಯುತ್ತಿರುವ ಕಾಲಘಟ್ಟದಲ್ಲೇ ಅಭಿನಯ ಶುರುಮಾಡಿದವರು ಈ ಹಿರಿಯ ನಾಯಕಿ.. ಅಂದಿನ ಕಾಲದಲ್ಲಿ ರಾಜ್‌ಕುಮಾರ್‌ ಸೇರಿದಂತೆ ಅನೇಕ ದೊಡ್ಡ ನಟದೊಂದಿಗೆ ಸಿನಿಮಾ ಮಾಡಿದ ಹೆಗ್ಗಳಿಕೆ ಇವರದ್ದು.. ಇಂತಹ ಮೇರು ನಟಿಯ ಸೊಸೆಯೇ ಕಿರುತೆರೆ ತಾರೆ ಸ್ವಾತಿ.. 

1 /5

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿಸಿ ಸೈ ಎನಿಸಿಕೊಂಡವರು ನಟಿ ಸ್ವಾತಿ.. ಗಟ್ಟಿಮೇಳ ಸಿರೀಯಲ್‌ನಲ್ಲಿ ಅಮ್ಮನ ಪಾತ್ರ ಮಾಡುವ ಎಲ್ಲರಿಗೂ ಹತ್ತಿರವಾದ ಚೆಲುವೆ ಇವರು.. ಹಾಗಾದ್ರೆ ನಟಿ ಸ್ವಾತಿ ಅವರ ಹಿನ್ನಲೆ ಏನು? ಕೆಲವು ದಿನ ಬಣ್ಣದ ಲೋಕವೇ ಬೇಡ ಎಂದು ಹಿಂದೆ ಸರಿದಿದ್ದೇಕೆ? ಇವರ ಪತಿ ಯಾರು? ಇದೆಲ್ಲದ ಮಾಹಿತಿ ಇಲ್ಲಿದೆ..   

2 /5

ನಟಿ ಪಂಡರಿಬಾಯಿ ಯಾವುದೇ ಪಾತ್ರಕ್ಕಾದರೂ ಜೀವ ತುಂಬುವ ಮಹಾನ್‌ ಕಲಾವಿದೆ.. ಇವರ ಅಭಿನಯಕ್ಕೆ ಅಂದಿನ ಕಾಲದಲ್ಲಿ ಮಾರು ಹೋಗದವರೇ ಇಲ್ಲ.. ಇವರಂತೆಯೇ ನಟಿ ಸ್ವಾತಿ..  ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆಯ ಮೊದಲ ಧಾರವಾಹಿ "ನೀ ಬರೆದ ಪಾತ್ರ ನಾನಲ್ಲ".. ಈ ಮೂಲಕ ಬೆಳ್ಳಿ ತೆರೆಗೂ ಕಾಲಿಟ್ಟ ಇವರು ಶೌರ್ಯ ಸಿನಿಮಾದಲ್ಲಿ ನಟಿಸಿದ್ದರು..   

3 /5

ಎಲ್ಲ ರೀತಿಯ ಪಾತ್ರಗಳನ್ನು ನಿಭಾಯಿಸಿದ ಸ್ವಾತಿ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಗುರುದತ್ತ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯ ನಂತರ ಬಣ್ಣದ ಲೋಕದಿಂದ ಸಂಪೂರ್ಣ ದೂರ ಉಳಿಯುತ್ತಾರೆ.. ಸುದೀರ್ಘ ಬ್ರೇಕ್‌ನಂತರ ನಟಿ ಮತ್ತೆ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಚಕ್ರವ್ಯೂಹ ಸಿನಿಮಾದ ಮೂಲಕ ಮತ್ತೆ ಕಂಬ್ಯಾಕ್‌ ಮಾಡುತ್ತಾರೆ..   

4 /5

ಹೀಗೆ ಹಲವಾರು ಧಾರವಾಹಿ, ಸಿನಿಮಾಗಳಲ್ಲಿ ಮಿಂಚಿದ ಸ್ವಾತಿ ಹಿರಿಯ ನಟಿ ಪಂಡರಿ ಬಾಯಿ ಸೊಸೆ.. ಆದರೆ ಈ ಬಗ್ಗೆ ಅವರೆಲ್ಲೂ ಹೇಳಿಕೊಂಡಿಲ್ಲ.. ಹೌದು ಅತ್ತೆಯ ಹೆಸರು ಹೇಳಿಕೊಂಡು ಮುಂದುವರೆಯುವ ಮನಸ್ಸಿಲ್ಲವೆಂದು ನಟಿ ಸ್ವಾತಿ ಈ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ..  

5 /5

ಇನ್ನು ಪಂಡರಿಬಾಯಿ ನಟಿ ಸ್ವಾತಿಯವರ ಸ್ವಂತ ಅತ್ತೆಯಲ್ಲ.. ಹಾಗಂತ ದೂರದ ಸಂಬಂಧಿಯೂ ಅಲ್ಲ.. ಪಂಡರಿಬಾಯಿ ಸಹೋದರಿಯ ಮಗ ಗುರುದತ್ತ.. ಇವರನ್ನು ಮದುವೆಯಾದವರು ಸ್ವಾತಿ.. ಹೀಗಾಗಿ ನಟಿ ಪಂಡರಿಬಾಯಿಯೂ ಇವರ ಅತ್ತೆ..