Actress Ambika: ಅತಿಲೋಕ ಸುಂದರಿ.. ನಟಿ ಅಂಬಿಕಾ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ? ಅವರ ಪತಿಯರು ಇವರೇ!!

Actress Ambika Real Life: 80-90 ರ ದಶಕದಲ್ಲಿ ತಮ್ಮ ಅಧ್ಬುತ ಅಭಿನಯದ ಮೂಲಕವೇ ಸಿನಿರಂಗದಲ್ಲಿ ಧೂಳೆಬ್ಬಿಸಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದ ನಟಿ ಅಂಬಿಕಾ.. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟಿ ಇವರು.. 

1 /5

ಅತೀ ಕಡಿಮೆ ಸಮಯದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಪ್ರತಿ ಇಂಡಸ್ಟ್ರಿಯಲ್ಲೂ ಬೇಡಿಗೆ ಗಳಿಸಿಕೊಂಡಿದ್ದ ಖ್ಯಾತ ನಟಿ ಅಂಬಿಕಾ.. ಆದರೆ ಇವರು ವೃತ್ತಿ ಬದುಕಿನಲ್ಲಿ ಕಂಡಂತ ಯಶಸ್ಸು ಇವರ ವೈಯಕ್ತಿ ಜೀವನಕ್ಕೆ ಲಭ್ಯವಾಗಲಿಲ್ಲ..   

2 /5

ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ಹೆಜ್ಜೆ ಇಟ್ಟ ನಟಿ ಅಂಬಿಕಾ ತಮ್ಮ ವೈಯಕ್ತಿಕ ಜೀವನವನ್ನೇ ಹಾಳು ಮಾಡಿಕೊಂಡರು.. ಹಾಗಾದರೆ ಈ ಹಿರಿಯ ತಾರೆಯ ಪತಿಯರು ಯಾರ್ಯಾರು? ಎಷ್ಟು ಮದುವೆಯಾಗಿದ್ದಾರೆ ಎನ್ನುವ ಸಣ್ಣ ಮಾಹಿತಿ ಇಲ್ಲಿದೆ..   

3 /5

 1967 ರಲ್ಲಿ ಜನಿಸಿದ ನಟಿ ಅಂಬಿಕಾ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟರು.. ‘ಚಕ್ಕಲಾತಿ’ ಎಂಬ ತಮಿಳು ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು.. ಹೀಗೆ ಹಲವು ಬಾಷೆಗಳಲ್ಲಿ ನಟಿಸಿ ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದ್ದ ನಟಿ ಅದೇ ಸಮಯದಲ್ಲೇ ಎಂದರೇ 1988ರಲ್ಲಿ ಶೀನು ಜಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ನಂತರ ಸಿನಿರಂಗದಿಂದ ದೂರ ಉಳಿದು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದರು..   

4 /5

 ಆದರೆ ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿ ವಿಚ್ಛೇದನ ಪಡೆದು ದೂರವಾಗುತ್ತಾರೆ... ನಂತರ ನಟಿ ಅಂಬಿಕಾ ರವಿಕಾಂತ್ ಎಂಬುವರನ್ನು ಪ್ರೀತಿಸಿ 2000ರಲ್ಲಿ ಎರಡನೇ ಮದುವೆಯಾಗುತ್ತಾರೆ.. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯದೇ 2002ರಲ್ಲಿ ಡಿವೋರ್ಸ್‌ ಪಡೆದುಕೊಂಡರು..   

5 /5

ಎರಡೆರಡು ಮದುವೆಯಾದರೂ ನೆಮ್ಮದಿ ಸಿಗಲಿಲ್ಲ ನಟಿ ಅಂಬಿಕಾ ಅವರಿಗೆ.. ಈ ವೈಯಕ್ತಿಕ ಜೀವನದ ವಿಚಾರಕ್ಕಾಗಿ ಅಂಬಿಕಾ ಸಾಕಷ್ಟು ಬಾರಿ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗಿದೆ..