ಗಂಡನ ಎರಡನೇ ಪತ್ನಿಗೆ ಬಾಣಂತನ.. ನಟಿ ರೇಖಾ ಲೈಫ್‌ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ! ಅಷ್ಟಕ್ಕೂ ಈಕೆಯ ಪತಿ ಯಾರು?

Actress Rekha Das: ಪ್ರಸ್ತುತ ಕಲರ್ಸ್ ಕನ್ನಡದ 'ನನ್ನ ದೇವ್ರು' ಧಾರವಾಹಿಯಲ್ಲಿ ಮಯೂರಿಯ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಖ್ಯಾತ ನಟಿ ರೇಖಾ ದಾಸ್, 80-90ರ ದಶಕದಲ್ಲಿ ಹಾಸ್ಯ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ನಟಿ ರೇಖಾದಾಸ್ ಹೆಸರು ಕೇಳಿದೊಡನೆ ನೆನಪಾಗುವುದು ಅವರ ಹಾಸ್ಯ ನಟನೆ, ಪೋಷಕ ಪಾತ್ರಗಳಿವೆ ಜೀವ ತುಂಬುವ ಅವರ ಅಮೋಘ ಅಭಿನಯ. 

2 /10

ಮೂಲತಃ ನೇಪಾಳದವರಾದ ರೇಖಾದಾಸ್ ರೂಪವತಿ ಅಷ್ಟೇ ಅಲ್ಲ, ಅಭಿನಯದಲ್ಲೂ ಸಾಕಷ್ಟು ಹೆಸರು ಮಾಡಿದವರು. 80-90ರ ದಶಕದಲ್ಲಿ ಬಹು ಬೇಡಿಕೆಯ ಹಾಸ್ಯ ಕಲಾವಿದೆ. 

3 /10

ಬದುಕು ಕಟ್ಟಿಕೊಳ್ಳುವ ಸಲುವಾಗಿ ನೇಪಾಳದಿಂದ ಬೆಂಗಳೂರಿಗೆ ಕೆಲಸ ಹರಸಿ ಬಂದ ರೇಖಾದಾಸ್ ಸಿನಿ ರಂಗದಲ್ಲಿ ಬದುಕು ಕಂಡುಕೊಂಡವರು. ಆದರಿದು, ಅವರಿಗೆ ಹೂವಿನ ಹಾದಿಯಾಗಿರಲಿಲ್ಲ. 

4 /10

ತಮ್ಮ ಕಷ್ಟದ ದಿನಗಳಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಇವರಿಗೆ ನಟನೆಯೇ ಆಧಾರವಾಯಿತು. ಹಾಗಾಗಿಯೇ ಆ ಕಷ್ಟದ ದಿನಗಳಲ್ಲಿ ತಮಗೆ ಸಿಕ್ಕ ಪಾತ್ರಗಳಲ್ಲೇ ತೃಪ್ತಿಪಟ್ಟು,ಅದಕ್ಕೆ ಜೀವ ತುಂಬುತ್ತಿದ್ದರು. 

5 /10

ಸಿನಿಮಾಗಳಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದ ರೇಖಾ ದಾಸ್ ಅವರಿಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರೊಂದಿಗೆ ಪ್ರೇಮವಾಗಿ, ಇಬ್ಬರೂ ಮದುವೆಯಾಗುತ್ತಾರೆ. ವಿವಾಹದ ಬಳಿಕ ಮಗು ಹುಟ್ಟುವವರೆಗೂ ಇವರ ದಾಂಪತ್ಯ ಜೀವನವೂ ಸುಂದರವಾಗಿರುತ್ತದೆ. 

6 /10

ರೇಖಾದಾಸ್-ಓಂ ಪ್ರಕಾಶ್ ರಾವ್ ದಂಪತಿಗೆ ಶ್ರಾವ್ಯ ಎಂಬ ಮಗಳಿದ್ದಾಳೆ. ಮಗು ಜನಿಸುವವರೆಗೂ ಸುಮಧುರವಾಗಿದ್ದ ಇವರ ದಾಂಪತ್ಯ ಜೀವನದಲ್ಲಿ ಕಲಹ ಶುರುವಾಗಿದ್ದೇ ಆನಂತರದಲ್ಲಿ. 

7 /10

ದಿನಗಳೆದಂತೆ ಪತಿ ಓಂ ಪ್ರಕಾಶ್ ರಾವ್ ಅವರ ನಡವಳಿಕೆಯನ್ನು ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲವಂತೆ. ಕಷ್ಟ ಎಷ್ಟೇ ಇದ್ದರೂ, ಪತಿ ಎಂದು ಸಹಿಸಿಕೊಂದಿದ್ದ ರೇಖಾದಾಸ್ ಅವರಿಗೆ ಆತನ ಎರಡನೇ ಹೆಂಡತಿಗೆ ಬಾಣಂತನ ಮಾಡುವ ಪರಿಸ್ಥಿತಿಯೂ ಬಂದೊದಗಿತ್ತು. 

8 /10

ಒಂದೆಡೆ ಪತಿ ಎರಡನೇ ಹೆಂಡತಿಯೊಂದಿಗೆ ಸುಖವಾಗಿದ್ದರೆ, ಮತ್ತೊಂದೆಡೆ ಪತಿಯ ಹಿಂಸೆ ತಾಳಲಾರದೆ ಪುಟ್ಟ ಮಗುವಿನೊಂದಿಗೆ ಮನೆಬಿಟ್ಟು ಬಂದ ರೇಖಾದಾಸ್ ಮಗಳಿಗೆ ವಿದ್ಯಾಭ್ಯಾಸ ನೀಡಿ, ಆಕೆಯನ್ನು ದೊಡ್ಡವಳ್ಳನ್ನಾಗಿ ಮಾಡಲು ಪಟ್ಟ ಕಷ್ಟ ಮಾತ್ರ ಹೇಳತೀರದು.   

9 /10

ಇಷ್ಟೆಲ್ಲಾ ಕಷ್ಟದ ನಡುವೆ ಮಗಳನ್ನು ಸಾಕಿ ಬೆಳಸಿದ ರೇಖಾದಾಸ್ ತಮ್ಮಂತೆ ತಮ್ಮ ಮಗಳು ಶ್ರಾವ್ಯ ಅವರನ್ನು ಕೂಡ ನಟನೆಗೆ ಕರೆತಂದಿದ್ದಾರೆ.  

10 /10

ಸದ್ಯ, ರೇಖಾದಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗಿರುವ "ನನ್ನ ದೇವ್ರು" ಧಾರಾವಾಹಿಯಲ್ಲಿ ನಾಯಕಿ ಮಯೂರಿಯ ಸಾಕುತಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.