Actress Malashri: ಮಾಲಾಶ್ರೀ ಅವರ ತಂಗಿ ಕೂಡ ಕನ್ನಡದ ಸ್ಟಾರ್ ನಟಿ! ಆದರೆ ಈ ವಿಚಾರ ಯಾರಿಗೂ ಗೊತ್ತಿಲ್ಲ!!

Actress Malashri Sister: ನಟಿ ಮಾಲಾಶ್ರೀ ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾ ಮಾಡಿದ ಈ ಚೆಲುವೆಗೆ ಸಹೋದರಿಯೊಬ್ಬರಿದ್ದಾರೆ.. ಆಕೆಯೂ ಕನ್ನಡದ ಸ್ಟಾರ್‌ ನಟಿ ಆದರೆ ಯಶಸ್ಸು ಸಿಗದ ಕಾರಣ ಚಿತ್ರರಂಗದಿಂದ ದೂರ ಉಳಿದಿದ್ದಾರೆ.. 
 

1 /7

ಕನ್ನಡ ಸಿನಿ ರಂಗದಲ್ಲಿ ಲೇಡಿ ಟೈಗರ್‌ ಎಂದೇ ಗುರುತಿಸಿಕೊಂಡವರು ನಟಿ ಮಾಲಾಶ್ರೀ.. ಇವರ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕಾಲವೊಂದಿತ್ತು.. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಿದ್ದ ಮಹಾನ್‌ ಕಲಾವಿದೆ ಈ ನಟಿ..     

2 /7

ಕನ್ನಡಿಗರ ಕನಸಿನ ರಾಣಿ ಎಂಬ ಪಟ್ಟ ಅಲಂಕರಿಸಿದ ಈ ಸ್ಟಾರ್‌ ನಟಿ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು.. ಎಲ್ಲ ದೊಡ್ಡ ದೊಡ್ಡ ಸ್ಟಾರ್‌ ನಟರೊಂದಿಗೂ ತೆರೆ ಹಂಚಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ..     

3 /7

ನಂಜುಂಡಿ ಕಲ್ಯಾಣ ಚಿತ್ರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಲಾಶ್ರೀ ಯಾವುದೇ ಭೇದವಿಲ್ಲದೇ ಎಲ್ಲ ಪಾತ್ರಗಳಲ್ಲಿಯೂ ನಟಿಸಿ ಮಿಂಚಿದ್ದಾರೆ.. ರಾಮಾಚಾರಿ, ದುರ್ಗಿ, ಕಿರಣ್‌ ಬೇಡಿ, ಚಾಮುಂಡಿ, ಹೀಗೆ ಹಲವಾರು ಪಾತ್ರಕ್ಕೆ ಜೀವತುಂಬಿದ ಖ್ಯಾತಿ ಇವರದ್ದು..      

4 /7

ನಟಿ ಮಾಲಾಶ್ರೀ ಅವರಿಗೆ ತಂಗಿಯೊಬ್ಬರಿದ್ದಾರೆ.. ಅವರ ಹೆಸರು ಶುಭಾಶ್ರೀ.. ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ ಇವರು ಅಷ್ಟಾಗಿ ಹೆಸರು ಮಾಡಲು ಸಾಧ್ಯವಾಗಲಿಲ್ಲ..  ದೇವರಾಜ್ ನಟನೆಯ ಸರ್ಕಲ್ ಇನ್ಸ್​ಸ್ಟೆಕ್ಟರ್ ಸಿನಿಮಾದಿಂದ ಇವರು ಖ್ಯಾತಿ ಗಳಿಸಿದರು..      

5 /7

ನಂತರ ಅವಕಾಶದಿಂದಾಗಿಯೋ ಅಥವಾ ಅದೃಷ್ಟದಿಂದಾಗಿಯೋ ಶುಭಾಶ್ರೀ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಟ್ಟಿರುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ ತಂಗಿ ಕಾಣಿಸಿಕೊಂಡಿದ್ದರು..     

6 /7

ಸದ್ಯ ಕನ್ನಡ ಸಿನಿರಂಗದ ಕಿರಣ್‌ಬೇಡಿ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್‌ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.. ಇವರೂ ಕೂಡ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರ ಹೃದಯ ಗೆದ್ದಿದ್ದಾರೆ..   

7 /7

ಮಾಲಾಶ್ರೀ ಅವರ ಮಗ ಕೂಡ ಸಖತ್‌ ಹ್ಯಾಂಡ್‌ಸಮ್‌ ಆಗಿದ್ದಾರೆ ಅವರೂ ಕೂಡ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರಾ ಅಥವಾ ಬೇರೆ ಕ್ಷೇತ್ರದಲ್ಲಿ ಬೆಳೆಯುತ್ತಾರಾ ಕಾದು ನೋಡಬೇಕಿದೆ..