Shani Star Change: ಕರ್ಮಫಲದಾತ ಶನಿ ಮಹಾತ್ಮ ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ತಕ್ಕಂತೆ ಫಲ ನೀಡುತ್ತಾನೆ. ಆದರೂ, ಸಹ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯನ್ನು ಹಿಡಿಯುವವರೇ ಇಲ್ಲ ಎನ್ನುವಷ್ಟು ಸನ್ಮಂಗಳವನ್ನೂ ಉಂಟುಮಾಡುತ್ತಾನೆ.
ಬೆಂಗಳೂರು: ಇಂದು (ಡಿಸೆಂಬರ್ 27) ಶನಿ ಮಹಾತ್ಮನು ಗುರುವಿನ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರವಾಗುವ ಸುಸಮಯ ಆರಂಭವಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಗುರು ಎರಡೂ ಸಹ ಪ್ರಭಾವಶಾಲಿ ಗ್ರಹಗಳು. ಇಂದು (ಡಿಸೆಂಬರ್ 27) ರಾತ್ರಿ 10:42ರ ಸುಮಾರಿಗೆ ಶನಿ ಗುರುವಿನ ನಕ್ಷತ್ರವಾದ ಪೂರ್ವಾಭಾದ್ರ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ.
ಪೂರ್ವಾಭಾದ್ರ ನಕ್ಷತ್ರದಲ್ಲಿ ಶನಿ ಪ್ರವೇಶದೊಂದಿಗೆ ಗುರುವಿನೊಂದಿಗೆ ಸಂಯೋಗ ಹೊಂದಲಿದ್ದಾನೆ. ಗುರು ಶನಿ ನಡುವೆ ಮಿತೃತ್ವ ಇದ್ದು ಶನಿ ಗುರು ಯುತಿಯಿಂದ ಕೆಲವು ರಾಶಿಯವರ ಬದುಕಿನಲ್ಲಿ ಬಂಗಾರದಂತ ಸಮಯ ಆರಂಭವಾಗಲಿದೆ.
ಮೇಷ ರಾಶಿ: ಶನಿ ಗುರು ಸಂಯೋಗವು ಈ ರಾಶಿಯವರಿಗೆ ಬಂಪರ್ ಧನಲಾಭವನ್ನು ತಂದುಕೊಡಲಿದೆ. ಕಳೆದುಹೋಗಿದ್ದ ಅಮೂಲ್ಯವಾದ ವಸ್ತುವೊಂದು ಮತ್ತೆ ನಿಮ್ಮ ಕೈ ಸೇರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ.
ಕರ್ಕಾಟಕ ರಾಶಿ: ಇಂದಿನಿಂದ ನಿಮ್ಮ ಬದುಕಿನಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟಗಳು ದೂರವಾಗಲಿವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ಪ್ರಾಪ್ತಿ. ಮನೆಯವರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ.
ತುಲಾ ರಾಶಿ: ಶನಿ ಗುರು ಯುತಿಯಿಂದ ಈ ರಾಶಿಯವರಿಗೆ ಹೂಡಿಕೆಯಿಂದ ಲಾಭವಾಗಲಿದೆ. ನಿಮ್ಮ ಹೊಸ ವ್ಯವಹಾರಗಳಿಗೆ ಮನೆಯವರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಉದ್ಯೋಗಸ್ಥರಿಗೆ ಪ್ರಗತಿಯ ಹಾದಿಗಳು ತೆರೆಯಲಿವೆ.
ಧನು ರಾಶಿ: ಶನಿಯ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ವಿದೇಶ ಪ್ರಯಾಣ ಯೋಗವನ್ನು ನೀಡಲಿದ್ದು, ಇದರಿಂದ ಭಾರೀ ಹಣಕಾಸಿನ ಪ್ರಯೋಜನವೂ ಸಿಗಲಿದೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶನಿ ದಯೆ ಇರಲಿದೆ.
ಮಕರ ರಾಶಿ: ಶನಿ ಗುರು ಯುತಿ ಪ್ರಭಾವದಿಂದ ಈ ರಾಶಿಯವರಿಗೆ ಭರ್ಜರಿ ಲಾಭವಾಗಲಿದೆ. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಆದಾಯವು ಸಾಲದ ಸುಳಿಯಿಂದ ನಿಮ್ಮನ್ನು ಹೊರತರಲಿದೆ. ಆಸ್ತಿಗೆ ಸಂಬಂಧಿಸಿದಂತೆ ಏನಾದರೂ ವಿವಾದಗಳಿದ್ದರೆ ಅದು ಬಗೆಹರಿಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.