SBI Personal Loan: SBI ನ Express Credit Personal Loan ಸೇವೆಯ ಅಡಿ ಫಟಾಫಟ್ ಸಾಲ ಸಿಗುತ್ತಿದೆ. ಇದಕ್ಕಾಗಿ ಗ್ರಾಹಕರು ಕೇವಲ ಒಂದು ಮಿಸ್ಡ್ ಕಾಲ್ ನೀಡಬೇಕು. ಬಳಿಕ ಬ್ಯಾಂಕ್ ತ್ವರಿತಗತಿಯಲ್ಲಿ ಅಪ್ರೂವಲ್ ಕೂಡ ನೀಡುತ್ತದೆ. ಈ ಸಾಲಕ್ಕೆ ಅತ್ಯಂತ ಕಡಿಮೆ ಅಂದರೆ ಶೇ.9.6ರಷ್ಟು ಬಡ್ಡಿ ನೀಡುತ್ತದೆ.
ನವದೆಹಲಿ: SBI Personal Loan - ಯಾವುದೇ ರೀತಿಯ ಆಕಸ್ಮಿಕ ಅವಶ್ಯಕತೆಗೆ ಒಂದು ವೇಳೆ ನೀವು ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗೆ ಭಾರಿ ನೆಮ್ಮದಿ ನೀಡಲಿದೆ. ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಒಂದು ವಿಶೇಷ ಸೌಕರ್ಯವನ್ನು ಆರಂಭಿಸಿದೆ. ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬ್ಯಾಂಕ್(SBI) ಈ ಕುರಿತು ಮಾಹಿತಿ ನೀಡಿದೆ.
All it takes is an SMS, to begin with your personal loan process.
— State Bank of India (@TheOfficialSBI) February 16, 2021
SMS <PERSONAL> on 7208933145.
To know more: https://t.co/TH5bnGWu1V pic.twitter.com/EJin90BhxV
ಇದನ್ನೂ ಓದಿ- Jandhan ಖಾತೆದಾರರಿಗೆ ಸಿಗುತ್ತಿರುವ ಈ ಲಾಭ ನಿಮ್ಮದಾಗಿಸಲು ಈ ಕೆಲಸ ತಪ್ಪದೆ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
SBI ಮಾಡಿರುವ ಟ್ವೀಟ್ ಪ್ರಕಾರ, SBI ನ Express Credit Personal Loan ಸೇವೆಯ ಅಡಿ ಫಟಾಫಟ್ ಸಾಲ ಸಿಗುತ್ತಿದೆ. ಇದಕ್ಕಾಗಿ ಗ್ರಾಹಕರು ಕೇವಲ ಒಂದು ಮಿಸ್ಡ್ ಕಾಲ್ ನೀಡಬೇಕು. ಬಳಿಕ ಬ್ಯಾಂಕ್ ತ್ವರಿತಗತಿಯಲ್ಲಿ ಅಪ್ರೂವಲ್ ಕೂಡ ನೀಡುತ್ತದೆ. ಈ ಸಾಲಕ್ಕೆ ಅತ್ಯಂತ ಕಡಿಮೆ ಅಂದರೆ ಶೇ.9.6ರಷ್ಟು ಬಡ್ಡಿ ನೀಡುತ್ತದೆ.
ಎಷ್ಟು ಸಾಲ ಸಿಗುತ್ತದೆ? - SBI ನ ಈ ಯೋಜನೆಯ ಅಡಿ ನೀವು 25 ಸಾವಿರ ರೂ.ಗಳಿಂದ 20 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು ಎಂದು ಬ್ಯಾಂಕ್ ತನ್ನೆ ಟ್ವೀಟ್ ನಲ್ಲಿ ಹೇಳಿದೆ. ಇದಲ್ಲದೆ 5 ರಿಂದ 20 ಲಕ್ಷಗಳ ಓವರ್ ಡ್ರಾಫ್ಟ್ ಸರ್ವಿಸ್ ಕೂಡ ಸಿಗುತ್ತಿದೆ. ಇದರಲ್ಲಿ ನಿಮಗೆ ಯಾವುದೇ ರೀತಿಯ ಗ್ಯಾರಂಟಿ ಅಥವಾ ಸಿಕ್ಯೂರಿಟಿ ಅವಶ್ಯಕತೆ ಇಲ್ಲ.
ಯಾರಿಗೆ ಸಿಗಲಿದೆ ಈ ಸಾಲ? - 1. ಇದಕ್ಕಾಗಿ SBI ನಲ್ಲಿ ನೀವು ಸ್ಯಾಲರಿ ಅಕೌಂಟ್ ಹೊಂದಿರಬೇಕು. 2. ನಿಮ್ಮ ತಿಂಗಳ ವೇತನ 15,000 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. 3. EMI / NMI ರೆಶ್ಯೋ ಶೇ.50ಕ್ಕಿಂತ ಕಡಿಮೆ. 4. SBI ಅಕೌಂಟ್ ಹೋಲ್ಡರ್ ಗಳು ಕೇಂದ್ರ/ ರಾಜ್ಯ/ ಸೆಮಿ ಗವರ್ನಮೆಂಟ್, ಕೇಂದ್ರೀಯ PSU, ಲಾಭದಾಯಕ PSUs ಅಥವಾ ಆಯ್ದ ಕಾರ್ಪೋರೆಟ್ಸ್ ಗಳ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.