ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ಎಸ್ ಬಿಐ ನೀಡುತ್ತಿದೆ ಗೋಲ್ಡ್ ಲೋನ್..!

ವ್ಯಾಪಾರಸ್ಥರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲೆ ಸಾಲ ಸೌಲಭ್ಯವನ್ನು ಎಸ್ ಬಿಐ ನೀಡುತ್ತಿದೆ. ಈ ಆಫರ್ ಅಡಿಯಲ್ಲಿ 1 ಲಕ್ಷದಿಂದ 50 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು.  

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವ್ಯಾಪಾರಿಗಳಿಗೆ ಅತ್ಯಂತ ಅಗ್ಗದ ಬಡ್ಡಿ ದರದಲ್ಲಿ ಚಿನ್ನದ ಸಾಲವನ್ನು (Gold loan) ನೀಡುತ್ತಿದೆ.  ಪ್ರಮುಖ ವಿಷಯವೆಂದರೆ ಈ ಚಿನ್ನದ ಮೇಲಿನ ಸಾಲವು ತುಂಬಾ ಸುಲಭವಾಗಿ ಸಿಗುತ್ತದೆ.  ವ್ಯಾಪಾರಸ್ಥರಿಗೆ ಈ ಸಾಲವು ಬಹಳ ಅನುಕೂಲಕರವಾಗಲಿದೆ. ಎಸ್‌ಬಿಐನ ಈ ವಿಶೇಷ ಕೊಡುಗೆಯಡಿಯಲ್ಲಿ, ವ್ಯಾಪಾರಸ್ಥರು ಬ್ಯಾಲೆನ್ಸ್ ಶೀಟ್ (Balance sheet) ತೋರಿಸುವ ಅಗತ್ಯವೂ ಇರುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

 ಎಸ್‌ಬಿಐನ ಈ ಚಿನ್ನದ ಮೇಲಿನ ಸಾಲದ ಕೊಡುಗೆಯು ವ್ಯಾಪಾರಸ್ಥರಿಗೆ ಮಾತ್ರ ಸಿಗಲಿದೆ.  ಆಫರ್ ನ ಅಡಿಯಲ್ಲಿ 1 ಲಕ್ಷದಿಂದ 50 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು.  ಈ ಸಾಲ ಸೌಲಭ್ಯದಿಂದ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ. 

2 /4

ಎಸ್‌ಬಿಐನ ಈ ಆಫರ್ ಅಡಿಯಲ್ಲಿ ಚಿನ್ನದ ಮೇಲೆ ಸಾಲ ಪಡೆಯುವವರಿಗೆ  ವಾರ್ಷಿಕ 7.25 ಶೇಕಡಾ ಬಡ್ಡಿದರದಲ್ಲಿಸಾಲ ನೀಡಲಾಗುತ್ತದೆ. ಅಂದರೆ,  ವರ್ಷಕ್ಕೆ 1 ಲಕ್ಷ ರೂಪಾಯಿಗಳ ಚಿನ್ನದ ಸಾಲವನ್ನು ತೆಗೆದುಕೊಂಡರೆ, ಇದಕ್ಕಾಗಿ 7,250 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ.    

3 /4

ಸಾಮಾನ್ಯವಾಗಿ, ವ್ಯಾಪಾರಸ್ಥರು, ಯಾವುದೇ ರೀತಿಯ ಸಾಲವನ್ನು ಪಡೆಯಬೇಕಾದರೆ, ಬ್ಯಾಲೆನ್ಸ್ ಶೀಟ್ ಅನ್ನು ತೋರಿಸಬೇಕಾಗುತ್ತದೆ.  ಆದರೆ ಎಸ್‌ಬಿಐನ ಈ ವಿಶೇಷ ಕೊಡುಗೆಯಲ್ಲಿ ಬ್ಯಾಲೆನ್ಸ್ ಶೀಟ್ ಅನ್ನು ತೋರಿಸುವ ಅಗತ್ಯವಿರುವುದಿಲ್ಲ. ಚಿನ್ನವನ್ನು ಅಡವಿಟ್ಟು ಲೋನ್ ಪಡೆದುಕೊಳ್ಳಬಹುದು. 

4 /4

ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಶೇಷ ಚಿನ್ನ ಸಾಲದ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಹತ್ತಿರದ ಶಾಖೆಗೆ ಭೇಟಿ ನಿಡಿ, ಈ ವಿಶೇಷ ಚಿನ್ನದ ಸಾಲದ  ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ತನ್ನ ಗ್ರಾಹಕರಿಗೆ ಎಸ್ ಬಿಐ ತಿಳಿಸಿದೆ. ಸಾಲ ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಬಹಳ ಸರಳವಾಗಿದ್ದು, ಸಾಲಗಾರನಿಗೆ ತೊಂದರೆಯಾಗುವುದಿಲ್ಲ ಎಂದು ಎಸ್‌ಬಿಐ ಹೇಳಿದೆ.

You May Like

Sponsored by Taboola