ಏಷ್ಯಾಕಪ್ 1984ರಲ್ಲಿ ಪ್ರಾರಂಭವಾಯಿತು. ಭಾರತ ತಂಡ ಅತಿ ಹೆಚ್ಚು ಅಂದರೆ 7 ಬಾರಿ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇನ್ನು ಶ್ರೀಲಂಕಾ ಐದು ಬಾರಿ ಮತ್ತು ಪಾಕಿಸ್ತಾನ ತಂಡ ಎರಡು ಬಾರಿ ಏಷ್ಯಾಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಆಗಸ್ಟ್ 27 ರಿಂದ ಏಷ್ಯಾಕಪ್ ಆರಂಭವಾಗುತ್ತಿದೆ. ಇನ್ನು ಈ ವರದಿಯಲ್ಲಿ ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ. ಮತ್ತು ಭಾರತದ ಇಬ್ಬರು ಬಲಿಷ್ಠ ಬ್ಯಾಟ್ಸ್ಮನ್ಗಳ ಬಗ್ಗೆ ತಿಳಿಸಲಿದ್ದೇವೆ.
ಶ್ರೀಲಂಕಾದ ಸನತ್ ಜಯಸೂರ್ಯ ಏಷ್ಯಾಕಪ್ನಲ್ಲಿ ಗರಿಷ್ಠ ಸಾಧನೆ ಮಾಡಿದವರು. ಈ ಟೂರ್ನಿಯಲ್ಲಿ 25 ಪಂದ್ಯಗಳನ್ನು ಆಡಿರುವ ಅವರು 53ರ ಸರಾಸರಿಯಲ್ಲಿ 1,220 ರನ್ ಗಳಿಸಿದ್ದಾರೆ. ಶ್ರೀಲಂಕಾಗೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶ್ರೀಲಂಕಾದ ಧಕದ್ ಕುಮಾರ್ ಸಂಗಕ್ಕಾರ ಅವರು ಏಷ್ಯಾಕಪ್ನ 23 ಪಂದ್ಯಗಳಲ್ಲಿ 1075 ರನ್ ಗಳಿಸಿದ್ದಾರೆ. ಏಷ್ಯಾಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ. 23 ಪಂದ್ಯಗಳಲ್ಲಿ 971 ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಏಷ್ಯಾಕಪ್ನಲ್ಲಿ ರನ್ ಗಳಿಸುವುದರ ಜೊತೆಗೆ 17 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಶೋಯೆಬ್ ಮಲಿಕ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ಬ್ಯಾಟ್ಸ್ಮನ್. ಏಷ್ಯಾಕಪ್ನ 21 ಪಂದ್ಯಗಳಲ್ಲಿ 907 ರನ್ ಗಳಿಸಿದ್ದಾರೆ.
ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು 2018 ರ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಏಷ್ಯಾಕಪ್ನ 27 ಪಂದ್ಯಗಳಲ್ಲಿ ರೋಹಿತ್ ಶರ್ಮಾ 883 ರನ್ ಗಳಿಸಿದ್ದಾರೆ.