Shani Dev: ಶನಿವಾರ ಈ ಕೆಲಸ ಮಾಡಿದ್ರೆ ಶನಿ ದೋಷ ಬರಬಹುದು!

Written ByPuttaraj K AlurUpdated byPuttaraj K Alur
Published: Aug 22, 2024, 04:20 AM IST|Updated: Aug 22, 2024, 04:20 AM IST

Shani Dev Hindu God of Karma: ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬಾರದು.

Shani Dev Hindu God of Karma1/5

ಶನಿವಾರವನ್ನು ಶನಿ & ಭೈರವನಿಗೆ ಸಮರ್ಪಿಸಲಾಗಿದೆ. ಶನಿದೇವನ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ, ಅವರಿಗೆ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಶನಿವಾರದಂದು ಕಪ್ಪು ಎಳ್ಳು ಅಥವಾ ಅದರಿಂದ ಮಾಡಿದ ಯಾವುದೇ ಖಾದ್ಯವನ್ನು ಶನಿ ದೇವರಿಗೆ ಅರ್ಪಿಸಬೇಕು. ಶನಿದೇವನು ಇದರಿಂದ ಸಂತಸಗೊಂಡು ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬುತ್ತಾನೆಂಬ ನಂಬಿಕೆಯಿದೆ.

Shani Dev Hindu God of Karma2/5

ಶನಿವಾರ ಮದುವೆ, ಮುಂಜಿ, ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮವಾದ ದಿನವಲ್ಲ. ಆದರೆ ಅಪರಕ್ರಿಯೆಗಳನ್ನು ಮಾಡುವುದಕ್ಕೆ ಸಮಸ್ಯೆಯಿಲ್ಲ. ಅದೇ ರೀತಿ ಶುಭ ವಸ್ತುಗಳು, ಮಂಗಲ ವಸ್ತುಗಳನ್ನು ಖರೀದಿಸಲೂ ಇಂದಿನ ದಿನ ಶುಭ ದಿನವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.

Shani Dev Hindu God of Karma3/5

ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬಾರದಂತೆ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬೇಡಿ. ಅದೇ ರೀತಿ ಛತ್ರಿ, ಉದ್ದಿನ ಬೇಳೆ ಮುಂತಾದ ವಸ್ತುಗಳನ್ನು ಮನೆಗೆ ತಂದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾದೀತು.

Shani Dev Hindu God of Karma4/5

ಶನಿಯ ವಕ್ರದೃಷ್ಟಿಯಿಂದ ಪಾರಾಗಬೇಕು ಎಂದರೆ ಶನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ ಅರಳಿ ಮರದ ಬುಡದಲ್ಲಿಡಬೇಕೆಂದು ಹೇಳಲಾಗುತ್ತದೆ. 

Shani Dev Hindu God of Karma5/5

ಶನಿದೇವನ ಅವಕೃಪೆಗೊಳಗಾಗಿದ್ದರೆ ಶನಿವಾರ ಆಂಜನೇಯ ಸ್ವಾಮಿಗೆ ಪೂಜೆ ಮಾಡುವುದರಿಂದಲೂ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.