Shani Deva Blessings: ಶನಿಯ ಕೃಪೆಗೆ ಪಾತ್ರರಾಗಲು ಈ 5 ಸರಳ ಮಾರ್ಗ ಅನುಸರಿಸಿ

Follow these 5 simple steps to be blessed by Shani: ಶನಿದೇವರನ್ನು ಸುಲಭವಾಗಿ ಒಲಿಸಿಕೊಳ್ಳಲು ಬಡವರ, ವೃದ್ಧರ ಸೇವೆ ಮಾಡಬೇಕು. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕೈಲಾದಷ್ಟು ದಾನ-ಧರ್ಮ ಮಾಡಬೇಕು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಸಹ ಶನಿ ದೇವರನ್ನು ಒಲಿಸಿಕೊಳ್ಳಲು ಇರುವ ಮತ್ತೊಂದು ಮಾರ್ಗವಾಗಿದೆ.

Shani Deva Blessings: ಹಿಂದೂಗಳ ಧಾರ್ಮಿಕ ಆಚರಣೆಗಳ ಪ್ರಕಾರ ಶನಿವಾರ ಶನಿದೇವರಿಗೆ ಮೀಸಲಾದ ದಿನ. ಈ ವಿಶೇಷ ದಿನದಂದು ದಾನ–ಧರ್ಮ ಮುಂತಾದ ಆಚರಣೆಗಳನ್ನು ಮಾಡಲಾಗುತ್ತದೆ. ಶನಿ ದೇವರನ್ನು ಒಲಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿದೇವರು ಕರ್ಮ ಮತ್ತು ನ್ಯಾಯವನ್ನು ನೀಡುವ ದೇವರಾಗಿದ್ದಾನೆ. ಮನುಷ್ಯನ ಕರ್ಮ ಫಲಗಳಿಗನುಸಾರವಾಗಿ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿ ದೇವರ ಕೃಪೆಗೆ ಪಾತ್ರರಾಗುವುದು ಹೇಗೆ? ಈ ಐದು ಸರಳ ಮಾರ್ಗಗಳನ್ನು ಅನುಸರಿಸುವ ಮೂಲಕ ನೀವು ಶನಿದೇವರ ಕೃಪೆಗೆ ಪಾತ್ರರಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿದೇವನ ಆಶೀರ್ವಾದ ಪಡೆದುಕೊಳ್ಳಲು ಶಿಸ್ತು, ಪ್ರಾಮಾಣಿಕತೆ, ನೈತಿಕತೆ & ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುವುದು ಅಗತ್ಯ. ಹೀಗಾಗಿ ಯಾವುದೇ ಕಾರಣಕ್ಕೂ ನೀವು ಅಶಿಸ್ತನ್ನು ರೂಢಿಸಿಕೊಳ್ಳಬೇಡಿ. ಮಲಗುವ & ಏಳುವ ಸಮಯ ನಿಗದಿಪಡಿಸಿಕೊಳ್ಳಿ. ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನ ಮಾಡಿ ಭಕ್ತಿಯಿಂದ ದೇವರ ಪೂಜೆ ಮಾಡಿರಿ.

2 /5

ಶನಿ ದೇವನನ್ನು ಸುಲಭವಾಗಿ ಒಲಿಸಿಕೊಳ್ಳಲು ಬಡವರ, ವೃದ್ಧರ ಸೇವೆ ಮಾಡಬೇಕು. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕೈಲಾದಷ್ಟು ದಾನ-ಧರ್ಮ ಮಾಡಬೇಕು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಸಹ ಶನಿ ದೇವರನ್ನು ಒಲಿಸಿಕೊಳ್ಳಲು ಇರುವ ಉತ್ತಮ ಮಾರ್ಗವಾಗಿದೆ.

3 /5

ಮಂತ್ರಗಳು ಸಂಖ್ಯಾಶಾಸ್ತ್ರದ ಪ್ರಬಲ ಕಂಪನಗಳಾಗಿವೆ. ಮಂತ್ರಗಳ ಉಚ್ಛಾರಣೆ ಮಾಡುವುದರಿಂದ ಶನಿ ದೇವನ ಕೃಪೆಗೆ ಪಾತ್ರರಾಗಬಹುದು. ʼಧ್ವಜಿನಿ ಧಾಮಿನೀ ಚೈವ ಕಾ೦ಕಾಲೀ, ಕ೦ಠಕಿ ಕಲಹಿ ಚಥಾ ತುರ೦ಗಿ ಮಹಿಷಿ ಅಜಾ ಶನೇರ್ನಾಮನಿ ಪತ್ನೀನಾಮೇತಾನಿ ಸಂಜಪನ್ ಪುಮಾನ್, ದುಃಖಾನಿ ನಾಶಯೇನ್ನಿತ್ಯಂ ಸೌಭಾಗ್ಯಮೇಧತೇ ಸುಖಮ್ʼ|| ಶನಿ ಮಂತ್ರವನ್ನು ಪ್ರತಿ ಶನಿವಾರ ಕನಿಷ್ಠ 33 ಬಾರಿ ಜಪಿಸಬೇಕು.

4 /5

ಬೇವು, ಕಪ್ಪು ಎಳ್ಳು, ಎಳ್ಳೆಣ್ಣೆ, ತುಳಸಿ ಎಲೆ, ನಾಗರಮೋತದ ಪುಡಿ & ನೀಲಗಿರಿ ತೈಲದಿಂದ ಶನಿ ದೇವನನ್ನು ಪೂಜಿಸಲಾಗುತ್ತದೆ. ಈ ಗಿಡಮೂಲಿಕೆ ಬಳಸಿ ಸ್ನಾನ ಮಾಡುವುದರಿಂದ ಭೌತಿಕ ದೇಹವನ್ನು ಶುದ್ಧೀಕರಿಸಬಹುದಾಗಿದೆ. ಹೀಗಾಗಿ ಗಿಡ ಮೂಲಿಕೆಗಳಿಂದ ಸ್ನಾನ ಮಾಡಿ ಶುಚಿಯಾದರೆ ಶನಿ ದೇವರ ಆಶೀರ್ವಾದಕ್ಕೆ ಪಾತ್ರರಾಗಬಹುದು.

5 /5

ಜನ್ಮ ದಿನಾಂಕ, ಹೆಸರು & ಜಾತಕದಲ್ಲಿ ಶನಿಯ ಸ್ಥಾನವನ್ನಾಧರಿಸಿ ಶನಿಯ ಆಶೀರ್ವಾದ ಪಡೆಯಲು ಉತ್ತಮ ಮಾರ್ಗಗಳಿವೆ. ಶನಿಯ ಕೃಪೆಗೆ ಪಾತ್ರರಾಗಲು ಸಂಗೀತ ಧ್ಯಾನವು ಉತ್ತಮವಾಗಿದೆ. ಸಂಗೀತ ಧ್ಯಾನವು ಮನಸ್ಸನ್ನು ಶಾಂತಗೊಳಿಸಿ ಉತ್ತಮ ಯೋಚನೆ ಬರುವಂತೆ ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಸಂಗೀತ ಧ್ಯಾನ ಮಾಡಬೇಕು.