Shirdi Sai Temple: Shiradi Saibaba ಭಕ್ತರಿಗೊಂದು ಸಂತಸದ ಸುದ್ದಿ, ತಪ್ಪದೆ ಓದಿ

Shirdi Sai Baba Temple To Reopen - ಶಿರಡಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಕುರಿತು ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ. ಕಳೆದ ದೀರ್ಘಕಾಲದಿಂದ ಮುಚ್ಚಲಾಗಿದ್ದ ಶ್ರೀ ಶಿರಡಿ ಸಾಯಿಬಾಬಾ (Shirdi Saibaba) ದೇವಸ್ಥಾನವನ್ನು ಭಕ್ತಾದಿಗಳ ದರ್ಶನಕ್ಕೆ ಮತ್ತೊಮ್ಮೆ ತೆರೆಯಲಾಗುತ್ತಿದೆ.

Shirdi Sai Baba Temple To Reopen - ಶಿರಡಿಯ ಶ್ರೀ ಸಾಯಿಬಾಬಾ (Shiradi Saibaba) ದೇವಸ್ಥಾನದ ಕುರಿತು ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ. ಕಳೆದ ದೀರ್ಘಕಾಲದಿಂದ ಮುಚ್ಚಲಾಗಿದ್ದ ಶ್ರೀ ಶ್ರಿರಡಿ ಸಾಯಿಬಾಬಾ ದೇವಸ್ಥಾನವನ್ನು ಭಕ್ತಾದಿಗಳ ದರ್ಶನಕ್ಕೆ ಮತ್ತೊಮ್ಮೆ ತೆರೆಯಲಾಗುತ್ತಿದೆ. ಭಾರತದ ವಿವಿಧ ರಾಜ್ಯಗಳಿಂದ ಸಾಯಿಬಾಬಾ ಭಕ್ತರು ಬಾಬಾ ದರ್ಶನಕ್ಕೆ ಇಲ್ಲಿಗೆ ಆಗಮಿಸುತ್ತಾರೆ. ಎರಡು ದಿನಗಳ ನಂತರ ಅಂದರೆ ಅಕ್ಟೋಬರ್ 7 ರಿಂದ ಸಾರ್ವಜನಿಕ ದರ್ಶನಕ್ಕಾಗಿ ದೇವಸ್ಥಾನದ ಕಪಾಟಗಳನ್ನು ತೆರೆಯಲಾಗುತ್ತಿದೆ. ಆದರೆ, ದೇವಸ್ಥಾನಕ್ಕೆ ದರುಶನ ಪಡೆಯಲು ಬರುವ ಭಕ್ತಾದಿಗಳು ಕೆಲ ಸಂಗತಿಗಳನ್ನು ನೆನಪಿನಲ್ಲಿಡಬೇಕಾಗಲಿದೆ.

 

ಇದನ್ನೂ ಓದಿ-2019 ರಲ್ಲಿ ದಾಖಲೆಯ ದೇಣಿಗೆ ಸಂಗ್ರಹಿಸಿದ ಶಿರಡಿ ಸಾಯಿಬಾಬಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ದೀರ್ಘಾವಧಿಯ ಬಳಿಕ ಭಕ್ತರು ಬಾಬಾ ದರ್ಶನ ಪಡೆಯಬಹುದು (Shirdi Saibaba Temple News Today)- ಕಳೆದ ದೀರ್ಘಾವಧಿಯಿಂದ ಭಕ್ತಾದಿಗಳು ದೇವಸ್ಥಾನದ ಬಾಗಿಲು ತೆರೆಯುವುದನ್ನು ನಿರೀಕ್ಷಿಸುತ್ತಾರೆ. ಆದರೆ, ಇದೀಗ ನವರಾತ್ರಿಯ ಮೊದಲ ದಿನ ದೇವಸ್ಥಾನವನ್ನು ತೆರೆಯುವುದರಿಂದ ಭಕ್ತರಲ್ಲಿ ಸಂತೋಷದ ವಾತಾವರಣವಿದೆ. ದೇವಸ್ಥಾನವು ಭಕ್ತರಿಗೆ ಭೇಟಿ ನೀಡಲು ಕೆಲವು ನಿಯಮಗಳನ್ನು ಹೊರಡಿಸಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ. ಆರಂಭದಲ್ಲಿ, ಕೇವಲ 15 ಸಾವಿರ ಭಕ್ತರು ಮಾತ್ರ ಸಾಯಿಬಾಬಾರವರ ದರ್ಶನ ಪಡೆಯಲು ಸಾಧ್ಯವಾಗಲಿದೆ. ಪ್ರತಿ ಗಂಟೆಗೆ, 1150 ಭಕ್ತರಿಗೆ ದರ್ಶನಕ್ಕೆ ಅವಕಾಶವಿರಲಿದೆ. ದರ್ಶನಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಸಹ ಸಲ್ಲಿಸಬಹುದು. 5000 ಜನರು ಒಂದು ದಿನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. (ಪಿಟಿಐ ಫೋಟೋ)

2 /4

2. ದೇವಸ್ಥಾನಕ್ಕೆ ಹೋಗುವ ಮುನ್ನ ಈ ಸಂಗತಿಗಳನ್ನು ನೆನಪಿನಲ್ಲಿಡಿ (Shirdi Saibaba Temple Update) - ದೇವಾಲಯದ ಒಳಗೆ ಅರ್ಚನೆಗಾಗಿ ಬರುವ ಹೂವಿನ ಹಾರ ತೆಂಗಿನಕಾಯಿಗೆ ನಿಷೇಧವಿರಲಿದೆ. ಗುರುವಾರ ಸಂಜೆ ಹೊರಡುವ ಬಾಬಾ ಪಲ್ಲಕ್ಕಿ ಮೆರವಣಿಗೆಗೆ ನಿಷೇಧ ವಿಧಿಸಲಾಗಿದೆ. ಸತ್ಯನಾರಾಯಣ ಪೂಜೆ ಮತ್ತು ಅಭಿಷೇಕಕ್ಕೆ ಅವಕಾಶವಿಲ್ಲ. ಭಕ್ತರು ಬಾಬಾರನ್ನು ಕೈಮುಗಿದು ದರ್ಶನ ಪಡೆದು ತಕ್ಷಣ ಹೊರಡಬೇಕು. ಜನರ ನಡುವೆ 6 ಅಡಿ ಅಂತರವಿರಬೇಕು. ಗರ್ಭಿಣಿಯರನ್ನು ಹೊರತುಪಡಿಸಿ, 65 ವರ್ಷ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ದೇವಸ್ಥಾನಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಪ್ರತಿ 2 ಗಂಟೆಗಳಿಗೊಮ್ಮೆ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗುವುದು. (ಪಿಟಿಐ ಫೋಟೋ)

3 /4

3. ಪ್ರತಿ ಆರತಿಯಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ - ಇದಲ್ಲದೇ, ಪ್ರತಿ ಆರತಿಯಲ್ಲಿ ಕೇವಲ 90 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎನ್ನಲಾಗಿದೆ. ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ದೇವಸ್ಥಾನ ಪ್ರವೇಶಿಸಲು ಗೇಟ್ ಸಂಖ್ಯೆ 2 ಬಳಸಲಾಗುವುದು.  ಗೇಟ್ ಸಂಖ್ಯೆ 4 ಮತ್ತು 5 ರಿಂದ ನಿರ್ಗಮನ ವ್ಯವಸ್ಥೆ ಮಾಡಲಾಗುವದು.  ದೇವಾಲಯದ ಕೆಲವು ಕೊಠಡಿಗಳು ಮುಚ್ಚಿದ್ದರೆ ಇನ್ನು ಕೆಲವು ಕೊಠಡಿಗಳು ತೆರೆದಿರುತ್ತವೆ. ಇವುಗಳಲ್ಲಿ, ಧ್ಯಾನ ಮಂದಿರ ಮತ್ತು ಪಾರಾಯಣ ಕೊಠಡಿ ಮುಚ್ಚಿರುತ್ತದೆ. ಇದರೊಂದಿಗೆ, ಸಾಯಿ ದೇವಸ್ಥಾನಕ್ಕೆ ಭೇಟಿ, ವಸತಿ, ರೆಸ್ಟೋರೆಂಟ್, ಆನ್‌ಲೈನ್-ಆಫ್‌ಲೈನ್ ವ್ಯವಸ್ಥೆ ಮತ್ತು ದೇವಾಲಯದ ದೈನಂದಿನ ಕಾರ್ಯಕ್ರಮಗಳು ಮುಂದುವರೆಯಲಿವೆ (ಪಿಟಿಐ ಫೋಟೋ)

4 /4

4. ಸುಮಾರು 9 ತಿಂಗಳುಗಳ ಬಳಿಕ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ - ಕರೋನಾ ವೈರಸ್ (Covid-19)ಸಾಂಕ್ರಾಮಿಕದ ನಂತರ ಕಳೆದ ವರ್ಷ ಶಿರಡಿಯ ಸಾಯಿಬಾಬಾ ದೇವಸ್ಥಾನವನ್ನು ಭಕ್ತಾದಿಗಳ ದರ್ಶನಕ್ಕಾಗಿ ಮುಚ್ಚಲಾಗಿತ್ತು. ಅದಾದ ಒಂಬತ್ತು ತಿಂಗಳು ನಂತರ  ಅಂದರೆ ನವೆಂಬರ್ 16, 2020 ರಂದು ದರ್ಶನಕ್ಕಾಗಿ ಪುನಃ ತೆರೆಯಲಾಗಿತ್ತು. ಆ ಸಮಯದಲ್ಲಿ 6,000 ಭಕ್ತರಿಗೆ ದಿನವಿಡೀ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ನಂತರ ಈ ಸಂಖ್ಯೆ ಸುಮಾರು 14,000 ದಿಂದ 20,000 ಕ್ಕೆ ಹೆಚ್ಚಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ನಂತರ ಸಾಯಿ ದೇವಸ್ಥಾನವನ್ನು ಮತ್ತೆ ಏಪ್ರಿಲ್ 5 ರಂದು ಮುಚ್ಚಲಾಗಿತ್ತು (ಪಿಟಿಐ ಫೋಟೋ)