Ujjain Mahakal Darshana: ಮನೆಯಲ್ಲಿಯೇ ಕುಳಿತು ಉಜ್ಜಯಿನಿ ಮಹಾಕಾಲನ ದರ್ಶನ ಪಡೆದು ನೀವೂ ಪುನೀತರಾಗಿ

Mahashivratri 2023: ಇಂದು ದೇಶದಾದ್ಯಂತ ಮಹಾಶಿವರಾತ್ರಿಯ ಮಹಾಪರ್ವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನ ಜೋತಿರ್ಲಿಂಗ ದರ್ಶನ ಪಡೆಯುವುದರಿಂದ ಸರ್ವ ಪಾಪಗಳು ನಾಶವಾಗುತ್ತವೆ ಎಂದು ಭಾವಿಸಲಾಗುತ್ತದೆ. 

Mahashivratri 2023: ಇಂದು ದೇಶದಾದ್ಯಂತ ಮಹಾಶಿವರಾತ್ರಿಯ ಮಹಾಪರ್ವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನ ಜೋತಿರ್ಲಿಂಗ ದರ್ಶನ ಪಡೆಯುವುದರಿಂದ ಸರ್ವ ಪಾಪಗಳು ನಾಶವಾಗುತ್ತವೆ ಎಂದು ಭಾವಿಸಲಾಗುತ್ತದೆ. ಈ 12 ಜೋತಿರ್ಲಿಂಗಗಳ ಪೈಕಿ ಒಂದಾದ ಉಜ್ಜೈನಿಯ ಮಹಾಕಾಲ್ ದೇವಸ್ಥಾನಕ್ಕೆ ದೂರದೂರದಿಂದ ಭಕ್ತಾದಿಗಳು ಭೇಟಿ ನೀಡಿ ಶಿವನ ದರ್ಶನ ಪಡೆಯುತ್ತಿದ್ದಾರೆ. ಆದರೆ, ಕಾರಣಾಂತರಗಳಿಂದ ಬಾಬಾನ ಆಸ್ಥಾನಕ್ಕೆ ತಲುಪಲು ಸಾಧ್ಯವಾಗದ ಅಂತಹ  ಅನೇಕ ಭಕ್ತರಿದ್ದಾರೆ. ನೀವೂ ಕೂಡ ಅವರಲ್ಲಿ ಶಾಮೀಲಾಗಿದ್ದಾರೆ, ಉಜ್ಜಯಿನಿಯಿಂದ ಬಾಬಾ ಮಹಾಕಾಲ್ ಅವರ ದಿವ್ಯ ದರ್ಶನದ ಈ ವಿಶೇಷ ಚಿತ್ರಗಳು ನಿಮಗಾಗಿ.

 

ಇದನ್ನೂ ಓದಿ-Mahashivratri 2023: ಇಂದು ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಶಿವನ ಆರಾಧನೆಗೆ ಮುಹೂರ್ತಗಳ ಪಟ್ಟಿ ಇಲ್ಲಿದೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮಹಾಶಿವರಾತ್ರಿಯ ಸಂದರ್ಭದಲ್ಲಿ, ನಿಮಗೆ ಉಜ್ಜಯಿನಿಯಲ್ಲಿ ಬಾಬಾ ಮಹಾಕಾಲ್ ದರ್ಶನ ಪಡೆಯಲು ಸಾಧ್ಯವಾಗಿಲ್ಲ ಎಂದರೆ ಇದಕ್ಕಾಗಿ ನೀವು ದುಃಖಿಸಬೇಕಾಗಿಲ್ಲ. ಇಲ್ಲಿ ನಾವು ನಿಮಗಾಗಿಯೇ ಕೆಲ ಚಿತ್ರಗಳನ್ನು ತಂದಿದ್ದೇವೆ, ಇವುಗಳನ್ನು ನೋಡಿ ನಿಮ್ಮ ಮನಸ್ಸು ಸಂತೋಷವಾಗುತ್ತದೆ. ಹಾಗೆಯೇ ಮಹಾಕಾಲನ ದಿವ್ಯ ದರ್ಶನ ಮನೆಯಿಂದಲೇ ಪಡೆದು ಪುನೀತರಾಗಿ.  

2 /5

2. ವಿಶ್ವವಿಖ್ಯಾತ ಜ್ಯೋತಿರ್ಲಿಂಗ ಬಾಬಾ ಮಹಾಕಲ್ ಅವರ ನಗರವಾದ ಆವಂತಿಕಾದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಾರಿ ಹರ್ಶೋಲ್ಲಾಸದಿಂದ ಆಚರಿಸಲಾಗುತ್ತದೆ. ಕಳೆದ 8 ದಿನಗಳಿಂದ ದೇವಸ್ಥಾನದಲ್ಲಿ ಉತ್ಸವವನ್ನು ಆಚರಿಸಲಾಗುತ್ತಿದೆ. ಇಂದು, ಒಂಬತ್ತನೇ ದಿನ, ಶನಿ ಪ್ರದೋಷ ಮತ್ತು ಮಹಾಶಿವರಾತ್ರಿಯ ಹಬ್ಬಗಳ ಅದ್ಭುತ ಸಂಯೋಜನೆಯಲ್ಲಿ ಮಹಾಶಿವರಾತ್ರಿಯನ್ನು ಅಲ್ಲಿ ಆಚರಿಸಲಾಗಿದೆ.  

3 /5

3. ಮಧ್ಯಾಹ್ನ 2:30ರಿಂದ ಭಸ್ಮಾರ್ಥಿಗಾಗಿ ದೇವಸ್ಥಾನದ ಬಾಗಿಲು ತ್ರೆಯಲಾಗಿದೆ. ಶಾಸ್ತ್ರಿಗಳು ಮತ್ತು ಅರ್ಚಕರು ಬಾಬಾ ಮಹಾಕಾಲ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಭಿಷೇಕದಲ್ಲಿ, ಬಾಬಾರವರಿಗೆ ಪಂಚಾಮೃತ ಮತ್ತು ಅನೇಕ ವಿಧದ ಹಣ್ಣುಗಳ ರಸದಿಂದ ಸ್ನಾನ ಮಾಡಿ ಭಸ್ಮವನ್ನು ಹಚ್ಚಲಾಗಿದೆ.  

4 /5

4. ಭಸ್ಮಾರ್ಥಿಯ ಜತೆಗೆ ಸಾಮಾನ್ಯ ಪ್ರವಾಸಿಗರು ಕೂಡ ಮಹಾಕಾಲನ ದರ್ಶನ ಪಡೆದು ಪುನೀತರಾಗಿದ್ದಾರೆ. ಬೆಳಗಿನ ಜಾವ 1.40ರ ಹೊತ್ತಿಗೆ ಭಕ್ತರ ಉದ್ದನೆಯ ಸರತಿ ಸಾಲು ಆರಂಭಗೊಂಡಿದೆ. ಈಗ ಈ ದರ್ಶನ 44 ಗಂಟೆಗಳ ಕಾಲ ನಿರಂತರವಾಗಿ ಮುಂದುವರೆಯಲಿದೆ. ಈ ಸಮಯದಲ್ಲಿ ಇಡೀ ದೇವಾಲಯದ ಸಂಕೀರ್ಣವು ಹರಹರ ಮಹಾದೇವ್, ಜೈ ಮಹಾಕಾಲ್ ಎಂಬ ಘೋಷಣೆಗಳೊಂದಿಗೆ ಪ್ರತಿಧ್ವನಿಸಿತು.  

5 /5

5. ದಿನವಿಡೀ ಪೂಜೆ ಸಲ್ಲಿಸಿದ ನಂತರ ಸಂಜೆ ಬಾಬಾ ಮಹಾಕಾಲ್ ನಗರದಲ್ಲಿ ಶಿಪ್ರಾದ ಘಾಟ್‌ಗಳಲ್ಲಿ ದೀಪ ಬೆಳಗಿಸಿ ವಿಶ್ವ ದಾಖಲೆ ನಿರ್ಮಿಸಲಿದ್ದು, ಸಿಎಂ ಶಿವರಾಜ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಿಮಿತ್ತ ಇಡೀ ನಗರದಲ್ಲಿ ಆಕರ್ಷಕ ವಿದ್ಯುತ್ ಅಲಂಕಾರ ಮಾಡಲಾಗಿದೆ.