Shocking! ಶೌಚಾಲಯಕ್ಕೆ ಹೋದಾಗ ಗರ್ಭದಿಂದ ಇದ್ದಕ್ಕಿದ್ದಂತೆ ಹೊರಬಂದ ಮಗುವಿನ ತಲೆ, ಮುಂದೆ...

                     

  • Nov 30, 2020, 16:14 PM IST

ಸೌತ್ ವೇಲ್ಸ್‌ನಲ್ಲಿ 18 ವರ್ಷದ ಬಾಲಕಿಗೆ ತನ್ನ ಗರ್ಭಧಾರಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಹೊಟ್ಟೆ ನೋವಿನಿಂದಾಗಿ ಶೌಚಾಲಯಕ್ಕೆ ಹೋದಾಗ ಮಗುವಿನ ತಲೆ ಹೊರಗೆ ಬರುತ್ತಿರುವುದನ್ನು ನೋಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

1 /6

ಬ್ರಿಟನ್ನಿನ ಸೌತ್ ವೇಲ್ಸ್ ನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅಲ್ಲಿ 18 ವರ್ಷದ ಬಾಲಕಿ ಹೊಟ್ಟೆ ನೋವಿನಿಂದ ಶೌಚಾಲಯಕ್ಕೆ ಹೋಗಿ ಅಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ವಾಸ್ತವವಾಗಿ 18 ವರ್ಷದ ಬಾಲಕಿಗೆ ತನ್ನ ಗರ್ಭಧಾರಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಅವಳು ಕಳೆದ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಳು. ಈ ಹಿನ್ನಲೆಯಲ್ಲಿ ವೈದ್ಯರನ್ನು ಸಂಪರ್ಕಿಸಲು ಅವರು ಆಸ್ಪತ್ರೆಗೆ ಹೋದರು, ಅಲ್ಲಿ ಹೊಟ್ಟೆ ನೋವಿನಿಂದಾಗಿ ಶೌಚಾಲಯಕ್ಕೆ ಹೋದಾಗ ಇದ್ದಕ್ಕಿದ್ದಂತೆ ಮಗುವಿನ ತಲೆ ಹೊರಬಂದಿದೆ. ಯುವತಿ ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.  

2 /6

ಸೌತ್ ವೇಲ್ಸ್ ನಿವಾಸಿ ಡಿಯೋನ್ ಸೀಬೋರ್ನ್ ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು ಮತ್ತು ನೋವು ಹೆಚ್ಚಾದಾಗ ಅವರು ರಾಯಲ್ ಗ್ವೆಂಟ್ ಆಸ್ಪತ್ರೆಗೆ ತೆರಳಿದ್ದರು. ಹೊಟ್ಟೆಯ ನೋವು ಕಾಣಿಸಿಕೊಂಡಾಗ ಇಲ್ಲಿ ಆಕೆ ಟೆಸ್ಟ್ ಮಾಡಿಸುತ್ತಿದ್ದರು.

3 /6

ಹೊಟ್ಟೆ ನೋವಿನಿಂದಾಗಿ ಡಿಯೋನ್ ಸೀಬೋರ್ನ್ ಆಸ್ಪತ್ರೆಯ ಶೌಚಾಲಯಕ್ಕೆ ತೆರಳಿದಾಗ ಅಲ್ಲಿ ಆಕೆಗೆ ಹೊಟ್ಟೆ ನೋವು ಹೆಚ್ಚಾಗಿದೆ. ತನಗೆ ಏನಾಗುತ್ತಿದೆ ಎಂಬುದೇ ಆಕೆಗೆ ಅರ್ಥವಾಗಿಲ್ಲ. ಸ್ವಲ್ಪ ಸಮಯದ ನಂತರ ಮಗುವಿನ ತಲೆ ಗರ್ಭದಿಂದ ಹೊರಬರುತ್ತಿರುವುದನ್ನು ಗಮನಿಸಿದ ಡಿಯೋನ್ ಭಯಭೀತರಾಗಿ ಕಿರುಚಲು ಪ್ರಾರಂಭಿಸಿದಳು.

4 /6

ಡಿಯೋನ್ ಶೌಚಾಲಯದಿಂದಲೇ ದಾದಿಯನ್ನು ಕರೆದರು, ಆದರೆ ಯಾರಿಗೂ ಆಕೆಯ ಧ್ವನಿ ಕೇಳಲಿಲ್ಲ ಮತ್ತು ನಂತರ ಆಕೆ ತನ್ನ ಗೆಳೆಯ ಕ್ಯಾಲಮ್ ಮೋರಿಸ್ಗೆ ಕರೆ ಮಾಡಿ ಇಡೀ ವಿಷಯವನ್ನು ವಿವರಿಸಿದರು. ಇದರ ನಂತರ ಡಿಯೋನ್ ಶೌಚಾಲಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

5 /6

ಮಾಹಿತಿ ಪಡೆದ ನಂತರ ಡಿಯೋನ್‌ನ ಗೆಳೆಯ ಕ್ಯಾಲಮ್ ಬೆಳಿಗ್ಗೆ 4 ಗಂಟೆಗೆ ಆಸ್ಪತ್ರೆ ತಲುಪಿದರು ಮತ್ತು ಅವರ ಮಗಳನ್ನು ನೋಡಿ ಸಂತೋಷಪಟ್ಟರು. ಕ್ಯಾಲಮ್ ತಾನು ತಂದೆಯಾದ ಖುಷಿಯಲ್ಲಿ ಮಗುವನ್ನು ತನ್ನ ಮಡಿಲಿನಲ್ಲಿ ಹೊತ್ತು ಮುದ್ದಾಡಿದನು ಎಂದು ಡಿಯೋನ್ ಹೇಳಿದ್ದಾರೆ.

6 /6

ಡಿಯೋನ್ ತನಗೆ ಗರ್ಭಧಾರಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಈ ಅವಧಿಯಲ್ಲಿ ತೂಕ ಕೂಡ ಹೆಚ್ಚಾಗಿರಲಿಲ್ಲ. ಇದಲ್ಲದೆ ಕೆಲವರು ನಾನು ತೂಕ ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದರು ಎಂದು ಆಕೆ ಮಾಹಿತಿ ಹಂಚಿಕೊಂಡಿದ್ದಾಳೆ. ಲೇಬರ್ ಪೇನ್‌ಗೆ ಸಂಬಂಧಿಸಿದಂತೆ ಈ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಡಿಯೋನ್ ಹೇಳುತ್ತಾರೆ.