ರಹಸ್ಯವಾಗಿ 7 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಮೊಟೊರೊಲಾ

Motorola M13 Smartphone: ಮೊಟೊರೊಲಾ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ. ಇದಕ್ಕೆ Moto E13 ಎಂದು ಹೆಸರಿಸಲಾಗಿದೆ.

ನವದೆಹಲಿ: ಮೊಟೊರೊಲಾ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ. ಇದಕ್ಕೆ Moto E13 ಎಂದು ಹೆಸರಿಸಲಾಗಿದೆ. ಈ ಎಂಟ್ರಿ ಲೆವೆಲ್ ಫೋನ್‌ನ ವಿನ್ಯಾಸವು ತುಂಬಾ ಇಷ್ಟವಾಗುತ್ತಿದೆ. ವೆಬ್ ಬ್ರೌಸ್, ವಾಟ್ಸಾಪ್ ಬಳಸಲು ಬಯಸುವವರಿಗೆ ಇದು ವಿಶೇಷ ಫೋನ್ ಆಗಿದೆ. ಈ ಫೋನ್ ಅನ್ನು 3 ಬಣ್ಣಗಳ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಫೋನ್‌ನಲ್ಲಿ ಯೋಗ್ಯವಾದ ಕ್ಯಾಮೆರಾ ಸಹ ನೀಡಲಾಗುತ್ತಿದೆ. Moto E13 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Moto E13 ಸ್ಮಾರ್ಟ್‍ಫೋನ್‍ಅನ್ನು 2 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 2GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ 6,999 ರೂ. ಆಗಿದ್ದರೆ, 4GB RAM ರೂಪಾಂತರದ ಬೆಲೆ 7,999 ರೂ. ಆಗಿದೆ. ಈ ಫೋನ್ ಅನ್ನು 3 ಬಣ್ಣಗಳಲ್ಲಿ ಪರಿಚಯಿಸಲಾಗಿದೆ.

2 /5

ಖರೀದಿಸಿದ 15 ದಿನಗಳಲ್ಲಿ ಜಿಯೋ ನೆಟ್‌ವರ್ಕ್ ಬಳಸುವ ಆಯ್ಕೆ ಮತ್ತು ಹೊಸ ಗ್ರಾಹಕರು 700 ರೂ. ಫ್ಲಾಟ್ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆಂದು ಎಂದು ಕಂಪನಿ ಹೇಳಿದೆ. ಆಫರ್ ಅನ್ನು ಪಡೆಯುವ ನಿಖರ ಮಾಹಿತಿ ಸ್ಪಷ್ಟವಾಗಿಲ್ಲ. ಆದರೆ ಕ್ಯಾಶ್‌ಬ್ಯಾಕ್ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ.

3 /5

Moto E13 IP52-ರೇಟಿಂಗ್‌ನೊಂದಿಗೆ ಬರುತ್ತದೆ. ಅಂದರೆ ಧೂಳು ಮತ್ತು ನೀರಿನಿಂದ ಇದು ಹಾನಿಯಾಗುವುದಿಲ್ಲ. ಬಾಕ್ಸ್ ಹೊರಗೆ Android 13 Go ಆವೃತ್ತಿಯಲ್ಲಿ ಫೋನ್ ರನ್ ಆಗುತ್ತದೆ. ಫೋನ್ 6.5-ಇಂಚಿನ IPS LCD ಡಿಸ್ಪ್ಲೇ ಮತ್ತು ಡಾಲ್ಬಿ ಸ್ಪೀಕರ್ಗಳನ್ನು ಹೊಂದಿದೆ. ಇದರ ತೂಕ 180 ಗ್ರಾಂ ಇದ್ದು, ಸ್ವಲ್ಪ ಭಾರವಾಗಿರುತ್ತದೆ. ಆದರೆ ಇದು ಅದರ ಪ್ರತಿಸ್ಪರ್ಧಿಗಳಿಗಿಂತ ಹಗುರವಾಗಿದೆ. ಫೋನ್‌ನಲ್ಲಿ ಸ್ಟೋರೇಜ್ ಹೆಚ್ಚಿಸಲು ಮೈಕ್ರೊ SD ಸ್ಲಾಟ್ ಸಹ ಲಭ್ಯವಿದೆ, ಇದರಿಂದ ಸ್ಟೋರೇಜ್ಅನ್ನು 1TBವರೆಗೆ ಹೆಚ್ಚಿಸಬಹುದು. ಫೋನ್ Unisic T606 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

4 /5

Moto E13 ಹಿಂಭಾಗದಲ್ಲಿ 13MP ಸಿಂಗಲ್ ಕ್ಯಾಮೆರಾ ಹೊಂದಿದೆ, ಇದು ಪೂರ್ಣ-HD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದು 2ನೇ ಕ್ಯಾಮೆರಾ ಸೆನ್ಸಾರ್ ಸಹ ಹೊಂದಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. ಕ್ಯಾಮರಾ ಅಪ್ಲಿಕೇಶನ್ ಪೋರ್ಟ್ರೇಟ್, AI ಬಣ್ಣಗಳು, ಫೇಸ್ ಬ್ಯೂಟಿ, ಆಟೋ ಸ್ಮೈಲ್ ಕ್ಯಾಪ್ಚರ್, HDR, ಸಹಾಯಕ ಗ್ರಿಡ್ ಮತ್ತು ಹೆಚ್ಚಿನ ಮೋಡ್‌ಗಳೊಂದಿಗೆ ಬರುತ್ತದೆ.

5 /5

Moto E13 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಹೊಂದಿದೆ. ಈ ಫೋನ್ ಬ್ಲೂಟೂತ್ 5.0, 3.5 MM ಆಡಿಯೋ ಜಾಕ್ ಮತ್ತು ಟೈಪ್-ಸಿ ಪೋರ್ಟ್ ಒಳಗೊಂಡಿದೆ.