Surya grahan 2024 : ಏಪ್ರಿಲ್ 08 ರಂದು ಸಂಭವಿಸುವ ಸೂರ್ಯ ಗ್ರಹಣ ಈ 4 ರಾಶಿಯವರಿಗೆ ಒಳ್ಳೆಯದಲ್ಲ...!

Surya grahan 2024 : ವರ್ಷದ ಮೊದಲ ಸೂರ್ಯಗ್ರಹಣ ಮುಂದಿನ ತಿಂಗಳು ಅಂದ್ರೆ ಏಪ್ರಿಲ್‌ 08 ರಂದು ಸಂಭವಿಸಲಿದೆ. ಇದು 12 ರಾಶಿಚಕ್ರದ ಚಿಹ್ನೆಗಳ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಅದರಲ್ಲಿ ಈ ನಾಲ್ಕು ರಾಶಿಚಕ್ರ ಚಿಹ್ನೆಗಳಿಗೆ ವಿಘ್ನ ಶುರುವಾಗಲಿದೆ.
 

Surya grahan 2024 Zodiac Signs : ಈ ವರ್ಷದ ಮೊದಲ ಸೂರ್ಯಗ್ರಹಣವು ಚೈತ್ರ ಅಮವಾಸ್ಯೆಯಂದು ಸಂಭವಿಸಲಿದೆ. ಈ ಗ್ರಹಣವು ನವರಾತ್ರಿಗೆ ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 08 ರಂದು ಸಂಭವಿಸಲಿದೆ. 

1 /5

ಸಾಮಾನ್ಯವಾಗಿ ಗ್ರಹಣಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ, ಕೆಲವೊಮ್ಮೆ ಅಶುಭವನ್ನು ತರುತ್ತವೆ. ಆದರೆ ಮುಂದಿನ ತಿಂಗಳು ಜರುಗಲಿರುವ ಸೂರ್ಯಗ್ರಹಣದ ಸಮಯದಲ್ಲಿ ಈ 4 ರಾಶಿಚಕ್ರದ ಚಿಹ್ನೆಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಬನ್ನಿ ಆ ದುರದೃಷ್ಟಕರ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ..  

2 /5

ಕನ್ಯಾ ರಾಶಿ : ಸೂರ್ಯಗ್ರಹಣದ ಪ್ರಭಾವದಿಂದ ಕನ್ಯಾ ರಾಶಿಯವರ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರದಲ್ಲಿ ನಷ್ಟ ಉಂಟಾಗಲಿದೆ. ನೀವು ಬಯಸಿದ ಲಾಭ ಸಿಗುವುದಿಲ್ಲ. ದಾಂಪತ್ಯ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಕಲಹಗಳು ಹೆಚ್ಚಾಗುತ್ತವೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ.   

3 /5

ಕುಂಭ ರಾಶಿ : ವರ್ಷದ ಮೊದಲ ಸೂರ್ಯಗ್ರಹಣವು ಕುಂಭ ರಾಶಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಜಗಳ, ಕುಟುಂಬ ಸದಸ್ಯರ ಜೊತೆ ಕಾದಾಟ. ನಿಮ್ಮ ಇಷ್ಟಾರ್ಥಗಳು ಯಾವುವೂ ಈಡೇರುವುದಿಲ್ಲ. ನಿಮ್ಮನ್ನು ಬಡತನ ಕಾಡುತ್ತದೆ, ಹಣದ ವಹಿವಾಟು ಮಾಡುವಾಗ ಜಾಗರೂಕರಾಗಿರಿ.   

4 /5

ಮೇಷ ರಾಶಿ: ಈ ಬಾರಿ ಸಂಭವಿಸಲಿರುವ ಸೂರ್ಯಗ್ರಹಣವು ಮೇಷ ರಾಶಿಯ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸುತ್ತಾರೆ, ಹಣಕಾಸಿನ ಪರಿಸ್ಥಿತಿಯು ಕೆಟ್ಟದಾಗಿ ಹದಗೆಡುತ್ತದೆ. ವೃತ್ತಿಗೆ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.   

5 /5

ವೃಶ್ಚಿಕ  : ಈ ರಾಶಿಯವರಿಗೆ ಸೂರ್ಯಗ್ರಹಣವು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಅನಿವಾರ್ಯ ಸಮಸ್ಯೆಗಳಿರುತ್ತವೆ. ಕುಟುಂಬ ಸದಸ್ಯರ ನಡುವೆ ಜಗಳಗಳು ಉಂಟಾಗುತ್ತವೆ. ನೀವು ಸಾಲದ ಸುಳಿಗೆ ಸಿಲುಕುವಿರಿ. ಪ್ರೇಮಿಗಳ ನಡುವೆ ದ್ವೇಷ ಹೆಚ್ಚುತ್ತದೆ.